ಡಾ . ಮಂಜುನಾಥ್ 2 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ: ಮುನಿರತ್ನ

By Ravi Janekal  |  First Published Jun 4, 2024, 10:31 AM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಅವರು ಸದ್ಯ 60 ಸಾವಿರ ಲೀಡ್‌ನಲ್ಲಿದ್ದಾರೆ. ಮಧ್ಯಾಹ್ನ ಒಂದು ಗಂಟೆ ವೇಳೆ ಅದು ಮೂರು ಪಟ್ಟು ಹೆಚ್ಚಾಗುತ್ತದೆ ದೊಡ್ಡಮಟ್ಟದ ಲೀಡ್ ನಲ್ಲಿ ಗೆಲ್ಲುತ್ತಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಜೂ.4): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಅವರು ಸದ್ಯ 60 ಸಾವಿರ ಲೀಡ್‌ನಲ್ಲಿದ್ದಾರೆ. ಮಧ್ಯಾಹ್ನ ಒಂದು ಗಂಟೆ ವೇಳೆ ಅದು ಮೂರು ಪಟ್ಟು ಹೆಚ್ಚಾಗುತ್ತದೆ ದೊಡ್ಡಮಟ್ಟದ ಲೀಡ್ ನಲ್ಲಿ ಗೆಲ್ಲುತ್ತಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಚೇರಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಬೆಂಗಳೂರು ಗ್ರಾಮಾಂತರದಲ್ಲಿ ಡಾ ಮಂಜುನಾಥ ಗೆಲುವು ನಿಶ್ಚಿತ. ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣದಲ್ಲಿ ನಮ್ಮ ಪಕ್ಷದ ಶಕ್ತಿ ಹೆಚ್ಚಿದೆ. ಈಗಾಗಲೇ ಅರ್ಧ ಮತ ಎಣಿಕೆ ಮುಗಿದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ತಾರೆ. ಹೀಗಾಗಿ ಕನಕಪುರದಲ್ಲಿ ಟೈಟ್ ಸೆಕ್ಯೂರಿಟಿ ಮಾಡಲೇಬೇಕು ಎಂದರು

Tap to resize

Latest Videos

ಲೋಕಸಭಾ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಸುದ್ದಿಗೆ ಇಲ್ಲಿಗೆ ಕ್ಲಿಕ್ ಮಾಡಿ

ಈ ಹಿಂದೆಯೇ ಚುನಾವಣಾ ಆಯೋಗಕ್ಕೆ ನಾವು ಮನವಿ ಮಾಡಿದ್ದೇವೆ. ಸ್ವತಃ ಡಾ ಮಂಜುನಾಥ ಅವರು ಕೂಡ ಶಾಂತಿ ಕಾಪಾಡಲು ಭದ್ರತೆ ಕೈಗೊಳ್ಳುವಂತೆ ಮನವಿ ಮಾಡಿದ್ದರು ಎಂದರು. ಇದೀಗ ಮಂಜುನಾಥ ಅವರು ಭಾರೀ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಗೆಲುವು ಸಾಧಿಸಲಿರುವ ಹಿನ್ನೆಲೆ ಬಿಜೆಪಿ ಕಚೇರಿಗೆ ಕಾರ್ಯಕರ್ತರು ಜಮಾವಣೆ ಆಗುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಕಾರ್ಯಕರ್ತರು ಹೆಚ್ಚುತ್ತಿದ್ದಾರೆ. .ಬಳ್ಳಾರಿ ಮೂಲದ ಅಪೇಕ್ಷಾ ಎಂಬ ಬಾಲಕಿ ತಾನೇ ಬಿಡಿಸಿ ತಂದಿದ್ದ ಕಮಲದ ಚಿತ್ರ ಗಮನ ಸೆಳೆಯಿತು.ಇಸ್ ಬಾರ್ ಬಿ ಮೋದಿ ಸರ್ಕಾರ ಎಂದು ಬರೆದಿತ್ತು.

click me!