ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂಗಾಯ್ತು: ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧೆಗೆ ಚಲುವರಾಯಸ್ವಾಮಿ ವ್ಯಂಗ್ಯ

By Ravi JanekalFirst Published Mar 26, 2024, 5:41 PM IST
Highlights

ಮಂಡ್ಯದಿಂದ ಸಿಎಸ್‌ ಪುಟ್ಟರಾಜು ಅಭ್ಯರ್ಥಿ ಅಂತಾ ಹೇಳಿ ಇದೀಗ ತಾವೇ ಅಭ್ಯರ್ಥಿಯಾಗಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಮಂಡ್ಯ (ಮಾ.26): ಮಂಡ್ಯದಿಂದ ಸಿಎಸ್‌ ಪುಟ್ಟರಾಜು ಅಭ್ಯರ್ಥಿ ಅಂತಾ ಹೇಳಿ ಇದೀಗ ತಾವೇ ಅಭ್ಯರ್ಥಿಯಾಗಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಇಂದು ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ, ಮೊದಲು ಸಿಎಸ್‌ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡ್ತಿದ್ರು. ಇದೀಗ ತಾವೇ ಅಭ್ಯರ್ಥಿ ಆಗಿದ್ದಾರೆ. ಒಳ್ಳೇ ಹುಡುಗಿ ಇದ್ದಾಳೆ ನಾನೇ ಮದುವೆ ಆಗ್ತೇನೆ. ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಅಂದಿದ್ದಾರೆ. ಒಂದು ತಿಂಗಳಿನಿಂದ ಅಳೆದು ತೂಗಿ ಹೆಸರು ಘೋಷಣೆ ಮಾಡಿದ್ದಾರೆ. ಹೀಗಾಗಿ ಮಂಡ್ಯ ಅಭ್ಯರ್ಥಿ ಎಂದು ಘೋಷಣೆ ಆದ ಬಳಿಕ ಹೋದ ಕಡೆಯಲ್ಲೆಲ್ಲ ಮಂಡ್ಯ ನನ್ನ ಕರ್ಮ ಭೂಮಿ ಅಂತಿದ್ದಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದ್ರೆ ಪರವಾಗಿಲ್ಲ. ಚಿಕ್ಕಬಳ್ಳಾಪುರಕ್ಕೂ, ತುಮಕೂರಿಗೂ ಹೋಗಿ ಬಂದಿದ್ದಾರೆ ಎಂದು ಗೇಲಿ ಮಾಡಿದರು.

ಬಿಜೆಪಿಯಿಂದ ಒಕ್ಕಲಿಗರಿಗೆ ಅನ್ಯಾಯ: ಚಲುವರಾಯಸ್ವಾಮಿ

ಪಾಪ ಆ ಪುಟ್ಟರಾಜು ಕೈಯಲ್ಲಿ ಸಭೆ ಮಾಡಿಸಿದ್ರು. ಆತ ಎಲ್ಲ ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಹುಡುಗಿ ಚೆನ್ನಾಗಿದ್ದಾಳೆಂಬ ಕಾರಣಕ್ಕೆ ಕುಮಾರಸ್ವಾಮಿ ನಾನೇ ಮದುವೆ ಆಗ್ತೀನಿ ಅಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾರನ್ನ ಇದೇ ಕುಮಾರಸ್ವಾಮಿ ನಿಂದಿಸಿದ್ರು. ಈಗ ಸುಮಲತಾ ನನ್ನ ಸಹೋದರಿ ಇದ್ದಂಗ, ಅಕ್ಕ ಇದ್ದಂಗ ಅಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಮಾತು ಆಡಬೇಕಿತ್ತು. ಸುಮಲತಾ ನನ್ನ ಸಹೋದರಿ ಅಲ್ವಾ ಅವರೇ ಗೆಲ್ಲಲಿ, ನನ್ನ ಮಗ ಗೆದ್ದರೂ ಒಂದೇ, ಅಕ್ಕ ಸುಮಲತಾ ಗೆದ್ದರೂ ಒಂದೇ ಎಂದಿದ್ರೆ ಪಾಪ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ಆದರೆ ಅಂದು ಬಾಯಿಗೆ ಬಂದಂತೆ ಮಾತಾಡಿದರು. ವೈಯಕ್ತಿಕ ತೇಜೋವಧೆ ಮಾಡಿದ್ರು. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಆದ ಬಳಿಕ ಸುಮಲತಾ ಸಹೋದರಿ ಅಂತಾ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

click me!