ರಾಜ್ಯದಲ್ಲಿ 136 ಸೀಟು ಗೆದ್ದಿರೋ ಕಾಂಗ್ರೆಸ್‌ ಉಳಿಯಲ್ಲವೆಂದರೆ, 19 ಸೀಟು ಇರೋ ಜೆಡಿಎಸ್‌ ಉಳಿಯುತ್ತಾ? ಚಲುವರಾಯಸ್ವಾಮಿ

By Sathish Kumar KH  |  First Published Apr 8, 2024, 7:36 PM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಂತರ 136 ಸೀಟು ಗೆದ್ದಿರೋ ಕಾಂಗ್ರೆಸ್‌ ಉಳಿಯುದಿಲ್ಲ ಎನ್ನುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ 19 ಸೀಟು ಗೆದ್ದಿರೋ ಜೆಡಿಎಸ್‌ ಉಳಿಯುತ್ತದೆಯಾ? ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದರು.


ಹಾಸನ (ಏ.08): ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಂತರ 136 ಸೀಟು ಗೆದ್ದಿರೋ ಕಾಂಗ್ರೆಸ್‌ ಉಳಿಯುದಿಲ್ಲ ಎನ್ನುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ 19 ಸೀಟು ಗೆದ್ದಿರೋ ಜೆಡಿಎಸ್‌ ಉಳಿಯುತ್ತದೆಯಾ? ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದರು.

ಹಾಸನದ ಚನ್ನರಾಯಪಟ್ಟಣದಲ್ಲಿ ಸೋಮವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಇರಲ್ಲ ಎಂಬ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಬರೋಬ್ಬರಿ 136 ಸೀಟ್ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇರಲ್ಲ‌ ಅಂದರೆ, 19 ಸೀಟ್ ಗೆದ್ದಿರುವ ಜನತಾದಳ ಇರುತ್ತಾ? ಇವರು ಒಕ್ಕಲಿಗರ ಹೆಸರು ಹೇಳ್ತಾರೆ. ಆದರೆ, ಒಕ್ಕಲಿಗರಿಗೆ ಕಾಂಗ್ರೆಸ್ ಎಂಟು ಸೀಟ್ ಕೊಟ್ಟಿದೆ. ಇವರಿಗೆ ಕೊಟ್ಟಿರುವ 3 ಸೀಟ್ ಇವರೇ ತೆಗೆದುಕೊಂಡಿದ್ದಾರೆ ಎಂದು ಟೀಕೆ ಮುಂದುವರೆಸಿದರು.

Latest Videos

undefined

ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ ವಿಚಾರ ಈ‌ ಚುನಾವಣೆ ಆದ ಮೇಲೆ ಗೊತ್ತಾಗುತ್ತದೆ. ದೇಶದಲ್ಲಿ ಪ್ರಧಾನಮಂತ್ರಿ ಮಾಡಿದವರ ಜೊತೆನೆ ವಿಶ್ವಾಸ ಉಳಿಸಿಕೊಳ್ಳಲು ಆಗಲಿಲ್ಲ. ಕೇವಲ 37 ಸೀಟ್ ಗೆದ್ದವರ ಮನೆ ಹತ್ತಿರ 80 ಸೀಟ್ ಗೆದ್ದವರು ಹೋಗಿ ಮುಖ್ಯಮಂತ್ರಿ ಮಾಡಿದವರ ಜೊತೆ ವಿಶ್ವಾಸ ಉಳಿಸಿಕೊಳ್ಳಲು ಆಗಲಿಲ್ಲ. ಇನ್ನೂ ಇವರ ಜೊತೆ ವಿಶ್ವಾಸ ಉಳಿಯುತ್ತಾ? ಇದು ಆಗದೆ ಇರುವ ಕೆಲಸ. ಇವರಿಗೂ ಅವಶ್ಯಕತೆ ಇತ್ತು, ಅವರಿಗೂ ಅವಶ್ಯಕತೆ ಇತ್ತು ಅಲೆಯನ್ಸ್ ಮಾಡಿಕೊಂಡಿದ್ದಾರೆ. ಈ‌ ಚುನಾವಣೆ ಆದ ಮೇಲೆ ಕರ್ನಾಟಕದಲ್ಲಿ ಮೈತ್ರಿ ಮುಂದುವರೆಯುತ್ತಾ ಅನ್ನೋದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರಿಗಿಂತ ಪ್ರಭಾವಿ ಮಂತ್ರಿ ಆಗುತ್ತಾರಾ? ಸಚಿವ ಚಲುವರಾಯಸ್ವಾಮಿ

ದೇವೇಗೌಡರು ಕಾಂಗ್ರೆಸ್‌ ಹಾಗೂ ನನ್ನ ಮೇಲೆ ವೈಯಕ್ತಿಕವಾಗಿ ವಾಗ್ದಾಳಿ ಮಾಡಲಿ, ಅವರು ಹಿರಿಯರು ನಮಗೇನು ಬೇಜಾರಿಲ್ಲ. ದೇವೇಗೌಡರು ಈ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಒಬ್ಬ ನಾಯಕ. ಅವರು ಇನ್ನೊಬ್ಬರನ್ನು ಟೀಕೆ ಮಾಡುವ ಬಗ್ಗೆ ಜನರಿಗೆ ಗೊತ್ತಿದೆ. ಇದೇ ಜನ 1999 ರಲ್ಲಿ ದೇವೇಗೌಡರನ್ನು ಸೋಲಿಸಿಲ್ಲವಾ? ಸೋಲು-ಗೆಲುವನ್ನು ಜನ ಯಾವಾಗ ಬೇಕಾದರೂ ತೀರ್ಮಾನ ಮಾಡ್ತಾರೆ. ಅಂತಹ ಮಹಾನ್ ನಾಯಕರನ್ನು ಈ ಜಿಲ್ಲೆಯ ಜನ ಸೋಲಿಸಿದ್ದಾರೆ. ದೇವೇಗೌಡರು ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಮಾಡಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ, ಟೀಕೆ ಮಾಡಲಿ ಎಂದು ಹೇಳಿದರು.

ರಾಜ್ಯದಲ್ಲಿ ಇವರು ಒಕ್ಕಲಿಗರ ಹೆಸರು ಹೇಳ್ತಾರೆ. ಆದರೆ, ಒಕ್ಕಲಿಗರಿಗೆ ಕಾಂಗ್ರೆಸ್ ಬರೋಬ್ಬರಿ 8 ಸೀಟ್ ಕೊಟ್ಟಿದೆ. ಇವರಿಗೆ ಕೊಟ್ಟಿರುವುದು ಕೇವಲ 3 ಸೀಟು ಮಾತ್ರ. ಕೊಟ್ಟಿರುವ ಆ 3 ಸೀಟ್‌ಗಳನ್ನು ಇವರೇ ತೆಗೆದುಕೊಂಡಿದ್ದಾರೆ. ಒಬ್ಬ ಅಪ್ಪ, ಒಮ್ಮ ಮಗ ಹಾಗೂ ಇನ್ನೊಬ್ಬ ಭಾವ. ರಾಜ್ಯದಲ್ಲಿ ಇವರನ್ನು ಬಿಟ್ಟು ಇನ್ಯಾರು ಒಕ್ಕಲಿಗರಿಲ್ಲವಾ? ಅವರ ಸ್ವಾರ್ಥಕ್ಕೆ, ಪಕ್ಷಕ್ಕೆ ರಾಜಕಾರಣಕ್ಕೆ ರಾಜ್ಯದ ಜನ ಸೂಕ್ತ ಉತ್ತರವನ್ನು ಕೊಡುತ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬಡಿಗೆ ಕೊಟ್ಟು ಹೊಡಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ; ಸಿಎಂ ಸಿದ್ದರಾಮಯ್ಯ

ನಮ್ಮ ಪಕ್ಷದಲ್ಲಿ ಡಿಕ್ಟೇಟರ್‌ಶಿಪ್‌ ಇಲ್ಲ. ಒಂದು ವೇಳೆ ರಾಹುಲ್‌ಗಾಂಧಿ ಪ್ರಧಾನಿ ಆಗುವುದಾದರೆ ಹಿಂದೆಯೇ ಆಗೋರು. ಅವರಿಗೆ ಪ್ರಧಾನಿ ಹುದ್ದೆ ಮುಖ್ಯವಲ್ಲ. ಈ ರಾಷ್ಟ್ರದ ಜನರ ಬದುಕು ಮುಖ್ಯವಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ ಯಾರು ಬೇಕಾದರೂ ಆಗಬಹುದು. ನಮ್ಮಲ್ಲಿ ಹದಿನೈದು ಮಂದಿ ಸಮರ್ಥರಿದ್ದಾರೆ, ಯೋಚನೆ ಏಕೆ ಮಾಡಬೇಕು. ಬಿಜೆಪಿ ಪಕ್ಷದಲ್ಲಿ ಮೋದಿ ಹೆಸರು ಬಿಟ್ಟು ಬೇರೆಯವರ ಹೆಸರು ಹೇಳಿದ್ರೆ ಸುಟ್ಟು ಹೋಗ್ತಾರೆ. ಹಾಗಾಗಿ, ಅವರಲ್ಲಿ ಡಿಕ್ಟೇಟರ್ ಶಿಫ್ ಇದೆ ನಮ್ಮಲ್ಲಿ ಡಿಕ್ಟೇಟರ್ ಶಿಫ್ ಇಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

click me!