ಮಾಜಿ ಸಿಎಂ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರಿಗಿಂತ ಪ್ರಭಾವಿ ಮಂತ್ರಿ ಆಗುತ್ತಾರಾ? ಸಚಿವ ಚಲುವರಾಯಸ್ವಾಮಿ

By Sathish Kumar KH  |  First Published Apr 8, 2024, 6:44 PM IST

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂದು ಜೆಡಿಎಸ್ ನಾಯಕರು ಹೇಳ್ತಾರೆ. ಇವರೇನು ಪ್ರಹ್ಲಾದ್ ಜೋಶಿ ಅವರಿಗಿಂದಲೂ ಪ್ರಭಾವಿ ಮಂತ್ರಿ ಆಗಲು ಆಗುತ್ತದೆಯಾ? ಎಂದು ಸಚಿವ ಚಲುವರಾಯಸ್ವಾಮಿ ಟೀಕೆ ಮಾಡಿದರು.


ಹಾಸನ (ಏ.08): ಕುಮಾರಸ್ವಾಮಿ ಅವರು ಏಕೆ ಬಂದರು ಏನು ಅಂತ ಯಾರಿಗೂ ಗೊತ್ತಿಲ್ಲ. ಅವರೊಬ್ಬ ರಾಜ್ಯ ನಾಯಕರು ಅವರ ಬಗ್ಗೆ ಯಾವುದೇ ಕಂಪ್ಲೇಂಟ್‌ ಇಲ್ಲ. ಆದರೆ, ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ದರೂ ಮಂತ್ರಿ ಆಗುತ್ತಾರೆ. ಪ್ರಹ್ಲಾದ್ ಜೋಶಿ ಅವರಿಗಿಂತರ ಪ್ರಭಾವಿ ಮಂತ್ರಿ ಆಗಲು ಆಗುತ್ತಾ? ಮಂತ್ರಿಯಾದರೂ ಶೋಭಾ ಕರಂದ್ಲಾಜೆ, ಸದಾನಂದಗೌಡರ ರೀತಿ ನಮ್ಮ ಜೊತೇಲಿ ಕೆಲಸ ಮಾಡಿಕೊಂಡು ಹೋಗಬೇಕಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ರಂಗೇರುತ್ತಿದೆ. ಎಲ್ಲಾ ಜಿಲ್ಲೆಯ ಫಲಿತಾಂಶಕ್ಕೂ ಮುನ್ನ ಹಾಸನ ಜಿಲ್ಲೆಯ ಫಲಿತಾಂಶ ಮೊದಲು ಬರುತ್ತದೆ. ಜಿಲ್ಲೆಯ ಎಲ್ಲಾ ಜನರು ಶ್ರೇಯಸ್‌ಪಟೇಲ್‌ಗೆ ಆಶೀರ್ವಾದ ಮಾಡ್ತಾರೆ. ಮಂಡ್ಯ ಮತ್ತು ಹಾಸನ ಎರಡೂ ಕಡೆ ಗೆಲ್ತಿವಿ. ನಿಮಗೆ ಯಾರಿಗೂ ಗೊತ್ತಿಲ್ಲದೆ ತರಹದ ಶಾಕ್ ನ್ಯೂಸ್ ಜನತದಳಕ್ಕೂ, ಬಿಜೆಪಿಗೂ ಸಿಗುತ್ತದೆ. ಮಂಡ್ಯದಲ್ಲಿ ಯಾವತ್ತೂ ಸಹ ಈ ರೀತಿ ಚುನಾವಣೆ ಆಗಿಲ್ಲ. ಬಹಳ ಜನ ಗಂಭೀರವಾದಂತಹ ಚುನಾವಣೆ ಎದುರಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಏಕೆ ಬಂದರು ಏನು ಅಂತ ಯಾರಿಗೂ ಗೊತ್ತಿಲ್ಲ. ಮಂಡ್ಯ ಜಿಲ್ಲೆಯ ಜನ ಸ್ಥಳೀಯರಿಗೆ ಅವಕಾಶ ಕೊಡಲು ತೀರ್ಮಾನ ಮಾಡಿದ್ದಾರೆ. ಅವರು ಒಬ್ಬರು ರಾಜ್ಯದಲ್ಲಿ ನಾಯಕರಾಗಿದ್ದಾರೆ, ಅವರ ಬಗ್ಗೆ ನಮಗೆ ಯಾವುದೇ ತರಹದ ಕಂಪ್ಲೆಂಟ್ ಇಲ್ಲ. ಮಂಡ್ಯಕ್ಕೆ ಬರುವಂತಹ ಅವಶ್ಯಕತೆ ಇರಲಿಲ್ಲ. ಇಲ್ಲಿ ಹೇಗೆ ಶ್ರೇಯಸ್‌ ಪಟೇಲ್ ಗೆಲ್ಲಿಸಬೇಕು ಎಂದು ಜನ ಅಂದುಕೊಂಡಿದ್ದಾರೋ, ಮಂಡ್ಯದಲ್ಲೂ ಸ್ಟಾರ್ ಚಂದ್ರು ಗೆಲ್ಲಿಸಬೇಕು ಅಂದುಕೊಂಡಿದ್ದಾರೆ ಎಂದು ಹೇಳಿದರು.

Tap to resize

Latest Videos

ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಹೆಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ ಎಂದು ಜೆಡಿಎಸ್‌ ನಾಯಕರು ಹೇಳುತ್ತಾರೆ. ಆದರೆ, ಒಬ್ಬ ಕೇಂದ್ರ ಮಂತ್ರಿಯಾಗಿ ಏನು ಮಾಡಲು ಆಗುತ್ತದೆ. ರಾಜ್ಯದಲ್ಲಿ ನಾವು ಮಂತ್ರಿಗಳಿಲ್ಲವಾ? ಅವರು ಮಂತ್ರಿಯಾದರೂ ನಮ್ಮ ಜೊತೇಲಿ ಇರಬೇಕಾಗುತ್ತದೆ. ಇವರೇನು, ಪ್ರಹ್ಲಾದ್ ಜೋಶಿ ಅವರಿಗಿಂತ ಪ್ರಭಾವಿ ಮಂತ್ರಿ ಆಗಲು ಆಗುತ್ತಾ? ಅವರು ರಾಜ್ಯದಲ್ಲಿ ಏನು ಮಾಡಿದ್ದಾರೆ? ಶೋಭಾ ಕರಂದ್ಲಾಜೆ, ಸದಾನಂದಗೌಡ್ರು, ಖೂಬಾ ಅವರು ಮಂತ್ರಿ ಇದ್ದರು ಅವರು ಏನ್ ಮಾಡ್ತಿದ್ದಾರೆ. ಅವರಂಗೆ ಇವರು ಒಬ್ಬರು ಮಂತ್ರಿ ಆಗ್ತಾರೆ ಅಷ್ಟೇ ಎಂದರು.

ಯಾವುದೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಬೈಪಾಸ್ ಮಾಡಲು ಆಗಲ್ಲ. ಎಲ್ಲವನ್ನೂ ರಾಜ್ಯ ಸರ್ಕಾರದ ಜೊತೆನೇ ಮಾಡಬೇಕಾಗುತ್ತದೆ. ನಾವೇ ಅಭಿವೃದ್ಧಿ ಮಾಡಲು ತಯಾರಾಗಿದ್ದೇವೆ. ಕೇಂದ್ರ ಸರ್ಕಾರದಿಂದ ಏನು ತರಬೇಕು ತರ್ತೀವಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗುವುದರಲ್ಲಿ ವಿಶೇಷ ಏನು ಇಲ್ಲ. ಬಹಳಷ್ಟು ಜನ ಕೇಂದ್ರದಲ್ಲಿ ಮಂತ್ರಿ ಆಗಿ ಹೋಗಿದ್ದಾರೆ. ಇವರೂ ಕೂಡ ಮಂತ್ರಿ ಆಗಿರುತ್ತಾರೆ ಎಂದರು.

ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ಪ್ರೀತಂಗೌಡರು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿ, ಇದು ಅವರ ಪಕ್ಷದ ಇಂಟರ್‌ನಲ್ ವಿಚಾರವಾಗಿದೆ. ಅದರ ಬಗ್ಗೆ ಮಾತನಾಡಲು ಹೋಗಲ್ಲ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಅಲೆಯನ್ಸ್ ಆಗಿತ್ತು ಜನ ಒಪ್ಪಿದ್ರಾ? ಈ ಬಾರಿಯೀ ಜೆಡಿಎಸ್-ಬಿಜೆಪಿ ಅಲೆಯನ್ಸ್‌ ಜನ ಒಪ್ಪಲ್ಲ. ಇವರು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಟ್ಟರಾ? ಯಡಿಯೂರಪ್ಪ ವಿರುದ್ಧ ಎಷ್ಟು ಕೆಟ್ಟದಾಗಿ ನಡೆದುಕೊಂಡರು. 2007ರಲ್ಲಿ ಯಡಿಯೂರಪ್ಪ ಅವರಿಂದ ಇವರು ಮುಖ್ಯಮಂತ್ರಿಯಾದರು. ಆದರೆ, ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಎಲ್ಲವೂ ಮನಸ್ತಾಪ ಇದೆ. ಯಾವುದೇ ಕಾರಣಕ್ಕೂ ಅನ್ಯ ಪಕ್ಷದವರ ಜೊತೆ ಜೆಡಿಎಸ್‌ನವರು ವಿಶ್ವಾಸದಿಂದ ನಡೆದುಕೊಂಡಿಲ್ಲ. ಅವರ ಅಲೆಯನ್ಸ್ ರಾಜ್ಯ ಮಟ್ಟದಲ್ಲೇ ಇರುತ್ತೆ ಹೊರತು ಜನರ ಮಟ್ಟಕ್ಕೆ ತಲುಪಲ್ಲ ಎಂದು ಸಚಿವ ಚಲುವರಾಯಸ್ವಾಮಿ ಟೀಕೆ ಮಾಡಿದರು.

click me!