ಕರ್ನಾಟಕದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ; ಎಂ ಲಕ್ಷ್ಮಣ್ ಗೆದ್ದೇ ಗೆಲ್ತಾರೆ: ಶಾಸಕ ಪೊನ್ನಣ್ಣ

By Ravi Janekal  |  First Published Mar 23, 2024, 6:56 PM IST

ಎಂ. ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿರುವುದಕ್ಕೆ ಖಷಿಪಡುತ್ತೇನೆ. ಅವರು ಕಾರ್ಯಕರ್ತರ ಹಂತದಿಂದ ಪಕ್ಷದಲ್ಲಿ ಬೆಳೆದು ಬಂದವರು. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. 


ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮಾ.23): ಎಂ. ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿರುವುದಕ್ಕೆ ಖಷಿಪಡುತ್ತೇನೆ. ಅವರು ಕಾರ್ಯಕರ್ತರ ಹಂತದಿಂದ ಪಕ್ಷದಲ್ಲಿ ಬೆಳೆದು ಬಂದವರು. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. 

Latest Videos

undefined

ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎ.ಸ್ ಪೊನ್ನಣ್ಣ, ಹತ್ತು ವರ್ಷದಿಂದ ಕೆಲಸ ಮಾಡಿದ ಸಂಸದ ಪ್ರತಾಪ್ ಸಿಂಹ(Pratap simha) ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಇದೇನೇ ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರೋಧಿ ಎಂಬುದನ್ನು ಇದು ಸಾಬೀತು ಪಡಿಸಿದೆ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಲಗಾಮು ಎರಡು ಮೂರು ನಾಯಕರ ಕೈಯಲ್ಲಿದೆ. ಅದು ಮತ್ತೊಮ್ಮೆ ಜಗತ್ ಜಾಹೀರಾಗಿದೆ. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿದ್ದು, ಯಾಕಾಗಿ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ಜನರು ಕೇಳುತ್ತಿದ್ದು ಅವರಿಗೆ ಉತ್ತರ ಕೊಡಬೇಕು. ಪ್ರತಾಪ್ ಸಿಂಹ ಅವರು ಜನ ವಿರೋಧಿಯಾಗಿದ್ದರಾ, ಇಲ್ಲ ಪಕ್ಷ ವಿರೋಧಿಯಾಗಿದ್ದರೆ, ಏನು ಅಂತ ಉತ್ತರ ಕೊಡಬೇಕು ಅಲ್ವಾ.? ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ರಾಜ ಪರಪಂರೆಯವರಿಗೆ ಟಿಕೆಟ್ ನೀಡಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿದ್ದರೂ ಪಕ್ಷದಿಂದ ಬೆಳೆದ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದರೆ ಅದಕ್ಕೆ ಅರ್ಥವಿತ್ತು. ನಾವು ರಾಜ ಪರಂಪರೆಯನ್ನ ದಾಟಿ ಪ್ರಜಾಪ್ರಭುತ್ವವನ್ನ ಸ್ವೀಕರಿಸಿದ್ದೇವೆ. ಆದರೆ ಬಿಜೆಪಿ ರಾಜರಿಗೆ ಟಿಕೆಟ್ ನೀಡಿದೆ. ಇದರ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ವಿರೋಧಿ ಅಂತ ಸಾಬೀತು ಪಡಿಸಿದೆ. ಬಿಜೆಪಿ ಸರ್ವಾಧಿಕಾರಿ ಆಡಳಿತದ ಮೂಲಕ ಬಿಜೆಪಿ ನಾಯಕರಿಗೆ ಟಿಕೆಟ್ ನಿರಾಕರಿಸಿದೆ. ಪ್ರತಾಪ್ ಸಿಂಹ ಹಾಗೂ ಸದಾನಂದ ಗೌಡರಿಗೆ ಬಿಜೆಪಿ ನೀಡುವುದಕ್ಕೆ ನಿರಾಕರಿಸಿದೆ. ಇಬ್ಬರು ಮೂವರಿಂದ  ಪಕ್ಷವನ್ನ ಹಾಳಾಗುವ ದಾರಿಗೆ ಎಳೆಯುತ್ತಿದ್ದಾರೆ ಎಂದು ಮಡಿಕೇರಿಯಲ್ಲಿ ಶಾಸಕ ಎ. ಎಸ್ ಪೊನ್ನಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Lok sabha election 2024: ಊಟಕ್ಕೆ ಕರೆದು ತಾಟು ನೀಡದೆ ಅವಮಾನ? ಪರಸ್ಪರ ಕಿತ್ತಾಡಿಕೊಂಡ ಬಿಜೆಪಿ ಕಾರ್ಯಕರ್ತರು!

ಕರ್ನಾಟಕದಲ್ಲಿ  ಕಾಂಗ್ರೆಸ್ ಈ ಬಾರಿ 18 ರಿಂದ 20 ಸೀಟ್ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿಯ ಅಭ್ಯರ್ಥಿ ಆಯ್ಕೆಯಿಂದಲೇ ಜನರೇ ಇಂದು ನಿರಾಸೆಗೊಂಡಿದ್ದಾರೆ. ಕೊಡಗು ಮೈಸೂರು ಕ್ಷೇತ್ರ ಕಾಂಗ್ರೆಸ್ ಗೆ ಒಲಿಯಲಿಯುವ ವಿಶ್ವಾಸ ನಮಗೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದು ಜನರ ಸೇವೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಒಡೆಯರ್ ಕುಟುಂಬಕ್ಕೆ ಅತಿಹೆಚ್ಚು ಗೌರವ ಇದೆ. ಆದರೆ ಇದು ಚುನಾವಣಾ ರಾಜಕೀಯ, ಜನರ ಮಧ್ಯೆ ಇರೋ ನಾಯಕನನ್ನ ಜನತೆ ಬಯಸುತ್ತಾರೆ ವಿನಃ ಎಲ್ಲೋ ಅರಮನೆಯಲ್ಲಿ ಕುಳಿತಿರುವವರನ್ನು ಜನರು ಬಯಸುವುದಿಲ್ಲ. ಅಷ್ಟಕ್ಕೂ ಯದುವೀರ್ ಅವರ ಸಮಾಜಿಕ ಚಿಂತನೆ, ಅಥವಾ ಯಾವ ಅಭಿವೃದ್ಧಿ ಕೆಲಸದ ಪರಿಕಲ್ಪನೆ ಇದೆ ಎಂದು ಹೇಳಲಿ ಅಂತ ಶಾಸಕ ಪೊನ್ನಣ್ಣ ಪ್ರಶ್ನಿಸಿದ್ದಾರೆ. ನಾವು ರಾಜ ಪ್ರಭುತ್ವವನ್ನು ಬಿಟ್ಟು ಪ್ರಜಾಪ್ರಭುತ್ವಕ್ಕೆ ಬಂದಿದ್ದೇವೆ. ಈ ವೇಳೆ ಜನರ ನಡುವೆ ಹೋಗಿ ಕೆಲಸ ಮಾಡುವವರನ್ನು ಜನ ಆಯ್ಕೆ ಮಾಡುತ್ತಾರೆ. ಆದರೆ ಯದುವೀರ್ ಅವರಿಗೆ ಜನರು ಯಾವ ಕಾರಣಕ್ಕೆ ಮತ ಹಾಕಬೇಕು ಎಂದು ಜನರೇ ಕೇಳುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಉತ್ಸಾಹ ನೋಡಿದ್ರೆ ನೂರಕ್ಕೆ ನೂರು ಗೆಲುವು ನಮ್ಮದೇ: ಡಾ ಮಂಜುನಾಥ್

click me!