Lok Sabha Election 2024: ಮೋದಿಯವರು ಸುಭದ್ರ ದೇಶವನ್ನಾಗಿ ಕಟ್ಟುವ ಶಕ್ತಿ ಪಡೆದಿದ್ದಾರೆ: ಎಸ್.ಬಾಲರಾಜ್

By Kannadaprabha News  |  First Published Mar 24, 2024, 1:26 PM IST

ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಕಲ್ಪನೆಯಡಿ ರೂಪಿಸಿರುವ ಕಾರ್ಯಕ್ರಮಗಳನ್ನು‌ಜಾರಿಗೆ ತರುವ ಮೂಲಕ 2042ರ ವೇಳೆಗೆ ದೇಶವನ್ನು ಸುಭದ್ರ ದೇಶವನ್ನಾಗಿ ಕಟ್ಟುವ ಶಕ್ತಿಯನ್ನು ‌ಪಡೆದಿದ್ದಾರೆ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಹೇಳಿದರು. 
 


ಟಿ. ನರಸೀಪುರ (ಮಾ.24): ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಕಲ್ಪನೆಯಡಿ ರೂಪಿಸಿರುವ ಕಾರ್ಯಕ್ರಮಗಳನ್ನು‌ಜಾರಿಗೆ ತರುವ ಮೂಲಕ 2042ರ ವೇಳೆಗೆ ದೇಶವನ್ನು ಸುಭದ್ರ ದೇಶವನ್ನಾಗಿ ಕಟ್ಟುವ ಶಕ್ತಿಯನ್ನು ‌ಪಡೆದಿದ್ದಾರೆ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಹೇಳಿದರು. ಪಟ್ಟಣದ ಜೆಎಸ್.ಎಸ್. ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ದೇಶವನ್ನು ಬಿಜೆಪಿ ಯಶಸ್ವಿಯಾಗಿ ಮುನ್ನೆಡೆಸುತ್ತಿದೆ. ವಿಕಸಿತ ಭಾರತ ಕಲ್ಪನೆಯಡಿ ಭಾರತ ವಿಶ್ವ ಗುರುವಾಗುವ ಕಾಲ ಸಮೀಪಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು‌ಮೂರನೇ ಬಾರಿ ಪ್ರಧಾನಿ ಮಾಡುವ ಅವಕಾಶ ನಮಗೆ ಒದಗಿ ಬಂದಿದೆ. 

ದೇಶದ ಭದ್ರತೆ, ಐಕ್ಯತೆ, ದೇಶದ ಸಂರಕ್ಷಣೆಗಾಗಿ ಬಿಜೆಪಿ ದೇಶಕ್ಕೆ ಅನಿವಾರ್ಯ ವಾಗಿದೆ ಎಂದರು. ಲೋಕಸಭಾ ಚುನಾವಣೆಯು ಧರ್ಮ-ಅಧರ್ಮದ ನಡುವೆ ನಡೆಯುತ್ತಿರುವ ಹಾಗೂ ನಮ್ಮತನ ಉಳಿಸಿಕೊಳ್ಳಲು ನಡೆಯುತ್ತಿರುವ ಯುದ್ದವಾಗಿದೆ, 75 ವರ್ಷಗಳಿಂದ ಛಿದ್ರ ಛಿದ್ರವಾಗಿದ್ದ ದೇಶವನ್ನು ಕೂಡಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರ ಕಲ್ಪನೆಯಲ್ಲಿ ಭಾರತ ದೇಶವನ್ನು ಪ್ರಪಂಚದಲ್ಲಿಯೇ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಅಭಿವೃದ್ಧಿಗೊಳಿಸಲಿದ್ದಾರೆ ಎಂಬ ಆತ್ಮ ವಿಶ್ವಾಸ ಮೂಡಿಸಿದ್ದಾರೆ ಎಂದರು.

Tap to resize

Latest Videos

ಮತ್ತೊಂದು ಬಾಲರಾಮನ ವಿಗ್ರಹ ಕೆತ್ತಿದ ಅರುಣ್: ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ಕೆತ್ತನೆ!

ನನಗೊಂದು ಅವಕಾಶ ಕೊಡಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನನಗೆ ಆಶೀರ್ವಾದ ಮಾಡಿದೆ. 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೊಳ್ಳೇಗಾಲದಿಂದ ಸ್ಪರ್ಧೆ ಮಾಡಿದ್ದೆ. 31 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಧರ್ಮದ ದಾರಿಯಲ್ಲಿ ನಡೆಯುತ್ತೇನೆ. ಹಾಗಾಗಿ ಪಕ್ಷ ನನಗೆ ಕೊಟ್ಟಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಲು, ನಿಮ್ಮೆಲ್ಲರ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ. ನಿಮ್ಮ‌ಮನೆ ಮಗನಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಅವರು ಮನವಿ ಮಾಡಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಜನಪರ ಕಾಳಜಿ ಇಲ್ಲದ ಕಾಂಗ್ರೆಸ್ ಅಭ್ಯರ್ಥಿ ಗೆ ಯಾಕೆ ಮತ ಚಲಾಯಿಸಬೇಕೆಂಬುದನ್ನು ಪ್ರತಿಯೊಬ್ಬರು ಯೋಚಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ಬೆಳಗ್ಗೆ 4ಕ್ಕೆ ಎದ್ದು ಕಾರ್ಯಕರ್ತರು, ಮತದಾರರು, ದೇವಸ್ಥಾನ ಹಾಗೂ ಮಠ ಮಾನ್ಯಗಳಿಗೆ ಭೇಟಿ ನೀಡಿದರೆ, ಕಾಂಗ್ರೆಸ್ ಅಭ್ಯರ್ಥಿ ರಾತ್ರಿ ಮಲಗಿ ಮದ್ಯಾಹ್ನ 12ಕ್ಕೆ ಎದ್ದು ಬಂದರೆ ಯಾವ ಜನಪರವಾದ ಕೆಲಸ ಮಾಡಲು ಸಾಧ್ಯ ಎಂದು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸುನಿಲ್ ಬೋಸ್ ಹೆಸರೇಳದೇ ವ್ಯಂಗ್ಯವಾಡಿದರು.

Lok Sabha Election 2024: ಭಾರತದ ಭವಿಷ್ಯ ಬರೆಯುವ ಚುನಾವಣೆ: ಕೋಟಾ ಶ್ರೀನಿವಾಸ್‌ ಪೂಜಾರಿ

ಮೈಸೂರು ಜಿಲ್ಲಾ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಡಾ. ರೇವಣ್ಣ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್, ನಿಕಟಪೂರ್ವ ಅಧ್ಯಕ್ಷ ಕೆ.ಸಿ. ಲೋಕೇಶ್ ನಾಯಕ್, ಪ್ರಭಾರಿ ಸುರೇಶ್ ಬಾಬು, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಕಾರ್ಯದರ್ಶಿಗಳಾದ ಎನ್.ಎಂ. ರಾಮಚಂದ್ರ, ಹೆಳವರಹುಂಡಿ ಸಿದ್ದಪ್ಪ, ಮಹೇಶ್, ಡಾ. ಮಲ್ಲಿಕಾರ್ಜುನ ಸ್ವಾಮಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಾಮ್ರಾಟ್ ಸುಂದರೇಶನ್, ಸೊಸಲೆ ಶಕ್ತಿ ಕೇಂದ್ರದ ಅಧ್ಯಕ್ಷ ಪುಟ್ಟಸ್ವಾಮಿ, ಪುರಸಭಾ ಸದಸ್ಯ ಕಿರಣ್, ಮಾಜಿ ಸದಸ್ಯ ಎನ್. ಲೋಕೇಶ್, ಸಂಚಾಲಕ ಬಸವರಾಜು, ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ದಾಸಯ್ಯ, ಡಾ. ಶಿವರಾಂ ಭಾಗವಹಿಸಿದ್ದರು.

click me!