ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಇಲ್ಲಸಲ್ಲದ್ದು ಮಾತಾಡ್ತಿದ್ದಾರೆ. ಅಳಿಯ, ಮಗ, ಮೊಮ್ಮಗ ಅಂತಾ ಏನೇನೋ ಮಾತಾಡ್ತಿದ್ದಾರೆ. ಆದರೆ ರಾಜಣ್ಣ ಕುಟುಂಬ ಇಂದು ಏನಾಗಿದೆ, ಏನು ಕೆಲಸ ಮಾಡಿದ್ದಾನೆಂದು ತನ್ನ ಮಗನನ್ನು ಎಂಎಲ್‌ಸಿ ಮಾಡಿದ್ದಾನೆ? ಸಚಿವ ರಾಜಣ್ಣ ಆರೋಪಕ್ಕೆ ಎಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಕೆಆರ್ ನಗರ (ಏ.6): ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಇಲ್ಲಸಲ್ಲದ್ದು ಮಾತಾಡ್ತಿದ್ದಾರೆ. ಅಳಿಯ, ಮಗ, ಮೊಮ್ಮಗ ಅಂತಾ ಏನೇನೋ ಮಾತಾಡ್ತಿದ್ದಾರೆ. ಆದರೆ ರಾಜಣ್ಣ ಕುಟುಂಬ ಇಂದು ಏನಾಗಿದೆ, ಏನು ಕೆಲಸ ಮಾಡಿದ್ದಾನೆಂದು ತನ್ನ ಮಗನನ್ನು ಎಂಎಲ್‌ಸಿ ಮಾಡಿದ್ದಾನೆ? ಸಚಿವ ರಾಜಣ್ಣ ಆರೋಪಕ್ಕೆ ಎಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಇಂದು ಕೆಆರ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ವಿಧಾನಸೌಧ ಮೆಟ್ಟಿಲೇರಿದ್ದೇ ದೇವೇಗೌಡರಿಂದ. ದೇವೇಗೌಡರ ಪ್ರಚಾರದಿಂದಲೇ ರಾಜಣ್ಣ ಗೆದ್ದಿದ್ದು. ದೇವೇಗೌಡರಿಗೆ ಭೂಮಿಗೆ ಹೋಗುವವರೆಗೆ ರಾಜಕೀಯ ನಿವೃತ್ತಿ ಇಲ್ಲ. ದೇವೇಗೌಡರಿಂದ ರಾಜಕೀಯ ಕಲಿತಿರುವ ರಾಜಣ್ಣನಿಂದ ಸಲಹೆ ಪಡೆಯುವ ದಯಾನೀಯ ಪರಿಸ್ಥಿತಿ ನಮಗೆ ಬಂದಿಲ್ಲ ಎಂದರು.
undefined
ಯಾವ ರಾಜಕೀಯ ನಾಯಕರೂ ಮಂಡ್ಯದಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ: ಎಚ್‌ಡಿ ಕುಮಾರಸ್ವಾಮಿ
ರಾಜಣ್ಣ ಬೆಳೆದು ಬಂದಿರುವ ಸಂಸ್ಕೃತಿ ಅಂತಹದ್ದು ಹೀಗಾಗಿ ದೇವೇಗೌಡರ ಬಗ್ಗೆಯೇ ಮಾತಾಡ್ತಾರೆ. ಅವರು ಯಾರನ್ನು ಒಲೈಸಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದನ್ನೆಲ್ಲ ಗಮನಿಸಿದ್ರೆ ಒಲೈಕೆ ಇರಬಹುದೆಂದೆನಿಸುತ್ತದೆ. ಆದರೆ ಇವರ ಆಟ ಹೆಚ್ಚು ದಿನ ನಡೆಯೊಲ್ಲ. ಅವರೇ ಸರ್ಕಾರ ತೆಗೆಯುತ್ತಾರೆ. ಇವರೆಲ್ಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇಂಥವರು ನನಗೆ ಜಾತ್ಯಾತೀತ ತೆಗೆಯಿರಿ ಅಂತಾರೆ. ಇತ್ತೀಚಿಗೆ ಒಕ್ಕಲಿಗರ ಮೇಲೆ ಇವರಿಗೆ ಪ್ರೀತಿ ಬಂದಿದೆ. 47 ವರ್ಷದಿಂದ ಒಕ್ಕಲಿಗರಿಗೆ ಅಧಿಕಾರ ಕೊಡಬೇಡಿ ಅಂತ ಹೇಳ್ತಿದ್ದವರು. ಹಲವು ಮಂತ್ರಿಗಳ ಹೇಳಿಕೆಗಳನ್ನು ನೋಡಿದ್ರೆ ಈ ಸರ್ಕಾರ ಬಹಳ ದಿನ ಉಳಿಯೊಲ್ಲ ಎಂದು ಭವಿಷ್ಯ ನುಡಿದರು.
ಈ ಕಾಂಗ್ರೆಸ್ ನಾಯಕರು ಪುಲ್ವಾಮ ದಾಳಿ ಬಗ್ಗೆ ಈಗೇಕೆ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಹೋಗಿ ಮಾತಾಡಬಹುದಿತ್ತಲ್ಲವೇ? ಇವರಿಗೆ ವಿಷಯ ಸರಕು ಇಲ್ಲ. ಬಾಯಿಗೆ ಬಂದದ್ದು ಮಾತನಾಡುವುದು ಸುಳ್ಳು ಆರೋಪ ಮಾಡುವುದು ಇವರ ಕೆಲಸ ಆಗಿದೆ. ಆದರೆ ಇವರಿಗೆ ಇದೇ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ ಎಂದರು.
ಡಿಕೆಶಿ ವೈರಿಯಲ್ಲ, ಅವರು ನನ್ನ ದೊಡ್ಡ ಹಿತೈಷಿ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ
ನಾಲ್ಕೂವರೆ ವರ್ಷದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾದ ಎಚ್‌ಡಿ ಕುಮಾರಸ್ವಾಮಿ, ಎಚ್ ವಿಶ್ವನಾಥ. ಬಹಳ ವರ್ಷಗಳ ಬಳಿಕ ನಗುಮುಖದಿಂದಲೇ ಭೇಟಿಯಾದರು. ಈ ವೇಳೆ ಪರಸ್ಪರ ಹಾಡಿ ಹೊಗಳಿದರು. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ. ವಿಶ್ವಣ್ಣ ಅದೆಲ್ಲವನ್ನೂ ಮರೆತು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಂತೆ ಕರೆ ಮಾಡಿ ಶುಭ ಕೋರಿದ್ರು. ದೂರವಾಣಿ ಮೂಲಕವೇ ನನ್ನ ಬೆಂಬಲ ನಿಮಗಿದೆ ಅಂತ ತಿಳಿಸಿದ್ರು. ಅವರ ಅಭಿಮಾನಕ್ಕೆ ಸೋತು ಮನೆಗೆ ಬಂದಿದ್ದೇನೆ. ವಿಶ್ವನಾಥ್ ನೇರ, ನಿಷ್ಠೂರವಾಗಿ ಮಾತನಾಡುವ ರಾಜಕಾರಣಿ. ಆದರೆ ಪ್ರಾಮಾಣಿಕವಾಗಿ ಇದ್ದಾರೆ. ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.