Latest Videos

ಇಂಡಿಯಾ ಕೂಟಕ್ಕೆ ಬಹುಮತ ಬರುವ ಸಾಧ್ಯತೆ ಇದೆ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

By Kannadaprabha NewsFirst Published May 25, 2024, 6:27 AM IST
Highlights

ಈ ಬಾರಿಯ ಲೋಕ ಸಮರ ದೇಶದ ಜನ ಹಾಗೂ ಮೋದಿ ಮಧ್ಯೆ ನಡೆಯುತ್ತಿದ್ದು, ಕೇಂದ್ರ ಸರಕಾರದ ವಿರುದ್ಧ ಬೇಸತ್ತಿರುವ ಜನರು ಇಂಡಿಯಾ ಮೈತ್ರಿಕೂಟದ ಪರವಾಗಿ ನಿಲ್ಲದಿದ್ದಾರೆ, ಬರುವ ಜೂನ್ 4ರಂದು ಅಚ್ಚರಿಯ ಫಲಿತಾಂಶ ಹೊರಬೀಳಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ (ಮೇ.25):  ಈ ಬಾರಿಯ ಲೋಕ ಸಮರ ದೇಶದ ಜನ ಹಾಗೂ ಮೋದಿ ಮಧ್ಯೆ ನಡೆಯುತ್ತಿದ್ದು, ಕೇಂದ್ರ ಸರಕಾರದ ವಿರುದ್ಧ ಬೇಸತ್ತಿರುವ ಜನರು ಇಂಡಿಯಾ ಮೈತ್ರಿಕೂಟದ ಪರವಾಗಿ ನಿಲ್ಲದಿದ್ದಾರೆ, ಬರುವ ಜೂನ್ 4ರಂದು ಅಚ್ಚರಿಯ ಫಲಿತಾಂಶ ಹೊರಬೀಳಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಸಂಚಾರದಲ್ಲಿರುವ ಅವರು ಇಲ್ಲಿನ ತಮ್ಮ ನಿವಾಸ ಲುಂಬಿನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ದೇಶದಲ್ಲಿ ಇನ್ನೂ ಎರಡು ಹಂತದ ಮತದಾನ ಬಾಕಿಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಜನರು ಇಂಡಿಯಾ ಮೈತ್ರಿಯ ಕೈ ಹಿಡಿದಿದ್ದಾರೆ ಎಂದರು. 

 

ಗಾಂಧಿ ಕುಟುಂಬದ ಮೇಲೆ ಆರೋಪ ಮಾಡೋದನ್ನ ಮೋದಿ ಮೊದಲು ನಿಲ್ಲಿಸಬೇಕು: ಮಲ್ಲಿಕಾರ್ಜುನ ಖರ್ಗೆ ಗರಂ

ದೇಶಾದ್ಯಂತ ಇಂಡಿಯಾ ಅಲಯನ್ಸಗೆ ಒಳ್ಳೆ ವಾತಾವರಣ ಕಂಡು ಬರುತ್ತಿದೆ. ಇದು ಜನರ ಮಧ್ಯೆ ಮತ್ತು ಮೋದಿ ಮಧ್ಯೆ ನಡೆಯುತ್ತಿರುವ ಚುನಾವಣೆ. ಬೆಲೆ ಏರಿಕೆ.. ನಿರುದ್ಯೋಗ ಸಮಸ್ಯೆ, ಸಂವಿಧಾನಾತ್ಮಕ ಸಂಸ್ಥೆಗಳ ದುರುಪಯೋಗದಿಂದ ಜ‌ನ ರೊಚ್ಚಿಗೆದ್ದಿದ್ದಾರೆ. ಜನ ರೊಚ್ಚಿಗೆದ್ದು ಮುಂದೆ ಬಂದು ಓಟ್ ಮಾಡ್ತಿದಾರೆಂದರು.

ಇಂಡಿಯಾ ಒಕ್ಕೂಟಕ್ಕೆ ಬಹುಮತ ಬರುವ ಸಾಧ್ಯತೆ ಇದೆ. ಬಿಜೆಪಿಗೆ ಅಧಿಕಾರ ತಡೆಯುವ ಸಾಮರ್ಥ್ಯ ಇಂಡಿಯಾ ಒಕ್ಕೂಟಕ್ಕೆ ಬಂದಿದೆ. ಎಷ್ಟು ಸ್ಥಾನ ಗೆಲ್ಲುತ್ತೆವೆ ಅಂತ ನಾನು ಹೇಳಲಾರೆ ಎಂದರು.

ಮೋದಿಗೆ ಈ ಬಾರಿ 400 ಸ್ಥಾನ ಬರಲ್ಲ ಎಂಬುದು ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ನಿನ್ನೆ ಸಚಿವ ಪ್ರಹ್ಲಾದ್ ಜೋಶಿ 400ರೊಳಗೆ ಬರುತ್ತದೆ ಎಂದಿದ್ದಾರೆ. ಹಾಗಾಗಿ ನಮ್ಮ ಸಂಖ್ಯೆ ಹೆಚ್ಚಾಗುವುದು ಗ್ಯಾರಂಟಿ. ಕೇರಳ, ಮಹಾರಾಷ್ಟ್ರದಲ್ಲಿ ಸರಿಸುಮಾರು 30ಕ್ಕಿಂತಲೂ ಹೆಚ್ಚು ಸ್ಥಾನಗಳು ಲಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜಸ್ಥಾನದಲ್ಲಿ ಈ ಮೊದಲು ನಾವು ಶೂನ್ಯ ಇದ್ದೆವು. ಈ ಬಾರಿ ಎಂಟು ಸ್ಥಾನಗಳು ಲಭಿಸಲಿವೆ. ಈ ಮೊದಲು ಬಿಜೆಪಿಯವರು ಎಲ್ಲಿ ಹೆಚ್ಚಿದ್ದರೋ ಅಲ್ಲೆಲ್ಲಾ ಈ ಬಾರಿ ಅವರು ಕಡಿಮೆ ಆಗಲಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ರಾಮ ಅಂದವರು ಜೈಲಿಗೆ ಎನ್ನುವ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ನಾವೇನು ರಾಮನ ವಿರೋಧಿಗಳಾ ಎಂದು ಪ್ರಶ್ನಿಸಿದರಲ್ಲದೆ, ದೇಶದಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ. ಯಾರಿಗೆ ಯಾವ ದೇವರ ಮೇಲೆ ಭಕ್ತಿ ಇದೆಯೋ ಅವರು ಆ ದೇವರನ್ನು ಆರಾಧಿಸುತ್ತಾರೆ. ಒಬ್ಬ ಪ್ರಧಾನ ಮಂತ್ರಿಯಾಗಿ ಇಂತಹ ಮಾತು ಆಡೋದು ಸರಿಯಲ್ಲ ಎಂದರು.

ಒಬ್ಬ ಪ್ರಧಾನಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಮೋದಿಯವರು ಚಿಲ್ರೆ ಮಾತನಾಡಿದ್ರೆ ಅವರಿಗೂ ಗೌರವ ಬರೋದಿಲ್ಲ, ನಮಗೂ ಗೌರವ ಬರೋದಿಲ್ಲ. ಕೈ ಅಧಿಕಾರಕ್ಕೆ ಬಂದ್ರೆ ಮಂಗಳ ಸೂತ್ರ ಇರೋಲ್ಲ. ನಿಮ್ಮ ಆಸ್ತಿ ಮುಸ್ಲಿಂರಿಗೆ ಹಂಚುತ್ತಾರೆ ಎನ್ನೋದನ್ನ ಮೋದಿ ಇನ್ನಾದರೂ ಬಿಡಬೇಕು ಎಂದರು.

ಚುನಾವಣಾ ಅಖಾಡದಲ್ಲಿ ರತ್ನ ಭಂಡಾರ ಕೀಲಿ ಕೈ ವಿವಾದ: ಓಡಿಶಾದಲ್ಲಿ ಮೋದಿ ಭಾಷಣ..ತಮಿಳುನಾಡಿನಲ್ಲೂ ಸಂಚಲನ!

ಚಿಲ್ಲರೆ ರಾಜಕಾರಣ ಬಿಡಿ:

ಮೋದಿ ಅವರು ಗಾಂಧಿ ಕುಟುಂಬದ ಕುರಿತು ಮೇಲಿಂದ ಮೇಲೆ ಬೈದಾಡುತ್ತಿರುತ್ತಾರೆ. ಗಾಂಧಿ ಕುಟುಂಬ ರಾಜಕೀಯ ಬಿಟ್ಟು ಎಷ್ಟೋ ವರ್ಷಗಳಾಗಿವೆ. ಹಾಗಾಗಿ ಇನ್ನಾದರೂ ಮೋದಿ ಚಿಲ್ಲರೆ ಮಾತಾಡೋದನ್ನು ಬಿಡಬೇಕು ಎಂದು ಕಟುವಾಗಿ ನುಡಿದರು. ಗಾಂಧಿ ಕುಟುಂಬ ಅಧಿಕಾರ ಬಿಟ್ಟು ಸುಮಾರು ವರ್ಷ ಕಳೆದಿದೆ. 1989 ರ ಬಳಿಕ ಗಾಂಧಿ ಕುಟುಂಬದ ಯಾರೊಬ್ಬರು ಮಂತ್ರಿಯಾಗಿಲ್ಲ. ಆದ್ರೂ ಮೋದಿಯವರು ಗಾಂಧಿ ಕುಟುಂಬದ ಬಗ್ಗೆಯೇ ಮಾತನಾಡುತ್ತಾರೆಂದು ಖರ್ಗೆ ಸಿಡಿಮಿಡಿಗೊಂಡರು.

click me!