6ನೇ ಹಂತದಲ್ಲಿ ಒಟ್ಟು 11.13 ಕೋಟಿ ಮತದಾರರಿದ್ದು, 1.4 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 5.84 ಕೋಟಿ ಪುರುಷ ಮತದಾರರು, 5.29 ಕೋಟಿ ಮಹಿಳಾ ಮತದಾರರು ಹಾಗೂ 5120 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.
ನವದೆಹಲಿ(ಮೇ.25): ಲೋಕಸಭೆಯ 6ನೇ ಹಂತದ ಚುನಾವಣೆ ಮೇ 25ರಂದು ನಡೆಯಲಿದೆ. ಈ ಹಂತದಲ್ಲಿ 6 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 889 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಒಡಿಶಾ ವಿಧಾನಸಭೆಯ 42 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.
6ನೇ ಹಂತದಲ್ಲಿ ಒಟ್ಟು 11.13 ಕೋಟಿ ಮತದಾರರಿದ್ದು, 1.4 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 5.84 ಕೋಟಿ ಪುರುಷ ಮತದಾರರು, 5.29 ಕೋಟಿ ಮಹಿಳಾ ಮತದಾರರು ಹಾಗೂ 5120 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.
ಧರ್ಮ..ಸೈನ್ಯ..ಸಂವಿಧಾನ..ಚುನಾವಣೆಯಲ್ಲಿ ಮಾತನಾಡಬೇಡಿ..!ಬಿಜೆಪಿಗೂ, ಕಾಂಗ್ರೆಸ್‌ಗೆ ಖಡಕ್ ವಾರ್ಕಿಂಗ್..!
85 ವರ್ಷಕ್ಕೂ ಮೆಲ್ಪಟ್ಟ 8.93 ಲಕ್ಷ ಮಂದಿ ಹಾಗೂ ನೂರು ವರ್ಷ ದಾಡಿದ 23,659 ಮಂದಿ ಹಿರಿಯ ನಾಗರಿಕರು ನೋಂದಣಿ ಮಾಡಿಕೊಂಡಿದ್ದಾರೆ. ಹಾಗೆಯೇ 9.58 ಲಕ್ಷ ವಿಶೇಷಚೇತನರು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಈ ಹಂತ ಮುಕ್ತಾಯಗೊಂಡರೆ ಇನ್ನೊಂದು ಹಂತ ಮಾತ್ರ ಬಾಕಿ ಉಳಿಯಲಿದೆ. ಜೂ. 4ರಂದು ಎಲ್ಲಾ 7 ಹಂತಗಳ ಫಲಿತಾಂಶ ಪ್ರಕಟವಾಗಲಿದೆ.
ಎಲ್ಲೆಲ್ಲಿ ಚುನಾವಣೆ?
ಬಿಹಾರದ 8, ಉತ್ತರ ಪ್ರದೇಶ 14, ಒಡಿಶಾ 6, ಪಶ್ಚಿಮ ಬಂಗಾಳದ 8, ಜಾರ್ಖಂಡ್ 4, ದೆಹಲಿಯ ಎಲ್ಲಾ 7 ಕ್ಷೇತ್ರಗಳು, ಹರ್ಯಾಣದ ಎಲ್ಲಾ 10 ಕ್ಷೇತ್ರಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಪ್ರಮುಖ ಅಭ್ಯರ್ಥಿಗಳು:
ಮನೇಕಾ ಗಾಂಧಿ, ಮೆಹಬೂಬ್ ಮಫ್ತಿ, ಸಂಬಿತ್ ಪಾತ್ರ, ಸುಶೀಲ್ ಗುಪ್ತಾ, ಅಗ್ನಿಮಿತ್ರಾ ಪೌಲ್, ಜೂನ್ ಮಲಿಯಾ, ಅಭಿಜಿತ್ ಗಂಗೋಪಾಧ್ಯಾಯ, ಸೋಮನಾಥ್ ಭರ್ತಿ, ಮನೋಜ್ ತಿವಾರಿ ಸೇರಿದಂತೆ ಅನೇಕರು ಕಣದಲ್ಲಿದ್ದಾರೆ.