Lok sabha election 2024: ನಮ್ಮ ಕ್ಯಾಪ್ಟನ್ ಮೋದಿ; ಕಾಂಗ್ರೆಸ್ ಕ್ಯಾಪ್ಟನ್ ಯಾರು ಅಂತಾ ಅವರಿಗೇ ಗೊತ್ತಿಲ್ಲ: ಆರ್ ಅಶೋಕ್ 

By Ravi JanekalFirst Published Mar 24, 2024, 8:40 PM IST
Highlights

ನಾಳೆ ಉಳಿದ ಎಲ್ಲ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಲಿದ್ದೇವೆ. 28 ಕ್ಷೇತ್ರಗಳ ಟಿಕೆಟ್ ನಾಳೆ ಕ್ಲಿಯರ್ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.

ಬೀದರ್​ (ಮಾ.24): ನಾಳೆ ಉಳಿದ ಎಲ್ಲ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಲಿದ್ದೇವೆ. 28 ಕ್ಷೇತ್ರಗಳ ಟಿಕೆಟ್ ನಾಳೆ ಕ್ಲಿಯರ್ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.

ಬೀದರ್‌ನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ ನವರು ಪ್ರತಿ ಮೀಟಿಂಗ್ ಆದಾಗಲೂ 20 ಸಚಿವರು ಸ್ಪರ್ಧಿಸುತ್ತಾರೆ ಎಂದು ಹೇಳಿದ್ರು. 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಚಿವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬರ್ತಾ ಬರ್ತಾ ಒಬ್ಬ ಸಚಿವರೂ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದೆ ಬಂದಿಲ್ಲ. ಈಗ ವಿಧಿ ಇಲ್ಲದೇ, ಗತಿ ಇಲ್ಲದೇ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆಯದೇ ಇರೋರಿಗೆ ಟಿಕೆಟ್ ನೀಡಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳು, ಹೆಂಡತಿ, ಅಣ್ಣತಮ್ಮಂದಿರು ಸೊಸೆಯಂದಿರನ್ನ ಈಗ ಬೀದಿಗೆ ತಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯ ಮಾಡಿದರು.

ಗೆದ್ದರೆ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ; 'ಹಿಂದಿ ಬರೊಲ್ಲ' ಎಂದ ಹೆಗ್ಡೆಗೆ ಕೋಟ ಶ್ರೀನಿವಾಸ ತಿರುಗೇಟು!

ನಮ್ಮ ಗುರಿ ಮುಟ್ಟುತ್ತೇವೆ:

ಕಾಂಗ್ರೆಸ್ ಯೋಗ್ಯತೆಗೆ ಯಾರೂ ಕಾರ್ಯಕರ್ತರು ಸಿಗಲಿಲ್ಲವ? ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹುಡುಕಿ ಹುಡುಕಿ ಟಿಕೆಟ್ ಕೊಡ್ತಿದ್ದಾರೆ. ಆದರೆ ನಮ್ಮಲ್ಲಿ ಸಚಿವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು 400 ಸೀಟು ಗೆಲ್ಲುವ ಟಾರ್ಗೆಟ್ ಕೊಟ್ಟಿದ್ದಾರೆ. ಈ ಬಾರಿ ಆ ಗುರಿ ಮುಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಕ್ಯಾಪ್ಟನ್ ಮೋದಿ, ಕಾಂಗ್ರೆಸ್?

ಕಳೆದ ಬಾರಿ ವಿರೋಧ ಪಕ್ಷದ ನಾಯಕನಾಗಲೂ ಕಾಂಗ್ರೆಸ್‌ಗೆ ಯೋಗ್ಯತೆ ಇರಲಿಲ್ಲ. ಈ ಬಾರಿ ಅದಕ್ಕಿಂತ ದಯನೀಯ ಸ್ಥಿತಿಗೆ ಕಾಂಗ್ರೆಸ್ ಪಕ್ಷ ಇಳಿಯಲಿದೆ. ನಾನು ಆಟಕ್ಕೆ ಇಳಿಯುವ ಮುನ್ನ ನಮ್ಮ ಕ್ಯಾಪ್ಟನ್ ನರೇಂದ್ರ ಮೋದಿ ಅಂತಾ ಹೇಳಿದ್ದೇವೆ. ಈಗ ಆಟಕ್ಕೆ ಅಂಪೈರ್ ಕರೆದಿದ್ದಾರೆ ನಮ್ಮ ಕ್ಯಾಪ್ಟನ್ ಮೋದಿ ಹೋಗಿ ನಿಂತಿದಾರೆ. ಆದರೆ ಕಾಂಗ್ರೆಸ್‌ ನ ಕಾಂಗ್ರೆಸ್‌ನ ಕ್ಯಾಪ್ಟನ್ ಯಾರೂ ಅಂತಾನೇ ಅವರಿಗೆ ಗೊತ್ತಾಗುತ್ತಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಸೆಮಿ ಫೈನಲ್ ಮ್ಯಾಚ್ ನಾವು ಗೆದ್ದಿದ್ದೇವೆ., ಈಗ ಫೈನಲ್ ಮ್ಯಾಚ್ ಕೂಡ ಗೆಲ್ಲುತ್ತೇವೆ ಎಂದರು.

ಸಿದ್ದು ಕೆಳಗಿಳಿಸಲು ಪಕ್ಷದೊಳಗೇ ಸಂಚು

ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಅಂತಾ ನಾವೇನು ಪ್ರಯತ್ನ ಮಾಡ್ತಾ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿರುವ ಗುಂಪುಗಳೇ ಅದನ್ನ ಮಾಡುತ್ತಿವೆ. ಮಹದೇವಪ್ಪಾ, ಜಾರಕಿಹೊಳಿ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನಲ್ಲಿ ಹಲವರ ಗುಂಪು ಇದೆ. ಗುಬ್ಬಿ ಶ್ರೀನಿವಾಸ್ ಅವರೇ ಹೇಳಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ 20 ಕ್ಕಿಂತ ಕಡಿಮೆ ಬಂದ್ರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ್ತಾರೆ ಅಂತಾ ಅವರೇ ಹೇಳಿದ್ದಾರೆ.

ಸಿದ್ದರಾಮಯ್ಯ ಒಬ್ಬ ಮೋಸಗಾರ

ಪಕ್ಷ ಕಟ್ಟಿದೋರು ಯಾರೋ, ಇವರು ಹೋಗಿ ಹುತ್ತ ಸೇರಿಕೊಂಡಿದ್ದಾರೆ. ಜಿ ಪರಮೇಶ್ವರ ಅವರಿಗೆ ಒಮ್ಮೆಯೂ ಸಿಎಂ ಅಗಲಿಲ್ಲಾ ಬೇಸರ ಇದೆ. ಎಲ್ಲ ಪಾರ್ಟಿ ಮಾಡಿಕೊಂಡು ಈಗ ಕಾಂಗ್ರೆಸ್ ಸೇರಿದ್ದಾರೆ. ಸಿದ್ದರಾಮಯ್ಯ ಹೇಳಿಕೇಳಿ ಮೋಸಗಾರ. ಸುಳ್ಳು ಹೇಳಿಕೊಂಡೇ ಎಲ್ಲಾ ಅಧಿಕಾರ ನಡೆಸಿದ್ರು ಎಂದು ವಾಗ್ದಾಳಿ ನಡೆಸಿದರು. ಇನ್ನು ಈಶ್ವರಪ್ಪ ಬಂಡಾಯ ಸ್ಪರ್ಧೆ ವಿಚಾರ ಪ್ರಸ್ತಾಪಿಸಿದ ಆರ್‌ ಅಶೋಕ್, ಈಶ್ವರಪ್ಪ ಒಬ್ಬ ಅಪ್ಪಟ ಬಿಜೆಪಿ ಕಾರ್ಯಕರ್ತ. ಈಶ್ವರಪ್ಪ 100ರಷ್ಟು ಬಿಜೆಪಿ ಜೊತೆ ಇರ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಶ್ವರಪ್ಪ, ಯಡಿಯೂರಪ್ಪ ಒಂದೇ ಕೋಣೆಯಲ್ಲಿ ಕುಳಿತುಕೊಂಡು ಮಾತನಾಡಿದ್ದಾರೆ. ಅವರೇ ಎಲ್ಲ ಬಗೆಹರಿಸಿಕೊಳ್ತಾರೆ ಎಂದರು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈಯಲ್ಲಿದೆ ಅಂತಾ ಮೋದಿ ಹೇಳ್ತಾರೆ, ಆದ್ರೆ ರಾಜ್ಯ ಬಿಜೆಪಿ ಯಾರ ಕೈಯಲ್ಲಿದೆ? ಈಶ್ವರಪ್ಪ ವಾಗ್ದಾಳಿ!

ನಾಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ:

ನಾಳೆ ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಜನಾರ್ದನರೆಡ್ಡಿ ಬಿಜೆಪಿಗೆ ಸೇರ್ಪಡೆ ಆಗ್ತಾ ಇದ್ದಾರೆ. ಸುಮಲತಾ, ಸಂಗಣ್ಣ ಕರಡಿ ಇಬ್ಬರೊಂದಿಗೂ ಬೆಂಗಳೂರಲ್ಲಿ ಮಾತನಾಡಿದ್ದೇನೆ. ಸುಮಲತಾ ಚುನಾವಣೆಯಲ್ಲಿ ನಾನು ಪ್ರಚಾರದಲ್ಲಿ ಭಾಗಿಯಾಗಿದ್ದೆ. ನಾಳೆ ಕರಡಿ ಸಂಗಣ್ಣ ಹಾಗೂ ಸುಮಲತಾ ಭಿನ್ನಮತ ಖಂಡಿತ ಶಮನ ಆಗುತ್ತೆ. ಎಲ್ಲರ ಭಿನ್ನಮತ ಶಮನ ಮಾಡುತ್ತೇವೆ. ಶಿವಮೊಗ್ಗ ಭಿನ್ನಮತ ಎರಡು ಮೂರು ದಿನದಲ್ಲಿ ಬಗೆಹರಿಯುತ್ತದೆ ಎಂದರು.

click me!