ಭಾರತದಲ್ಲಿ ಹುಟ್ಟಿ ಪಾಕಿಸ್ತಾನ ಪರ ಕೂಗೋರು ಕಾಂಗ್ರೆಸ್ ಪಾಲಿನ ವೋಟ್ ಬ್ಯಾಂಕ್: ಸಿಟಿ ರವಿ ವಾಗ್ದಾಳಿ

By Ravi Janekal  |  First Published Mar 23, 2024, 8:22 PM IST

ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ತುಮಕೂರಿನಲ್ಲಿಯೂ ಇದೆ ಹೀಗಾಗಿ ಕಾಂಗ್ರೆಸ್ ಹತಾಶೆ ಸ್ಥಿತಿಯಲ್ಲಿದೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ತುಮಕೂರು (ಮಾ.23): ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ತುಮಕೂರಿನಲ್ಲಿಯೂ ಇದೆ ಹೀಗಾಗಿ ಕಾಂಗ್ರೆಸ್ ಹತಾಶೆ ಸ್ಥಿತಿಯಲ್ಲಿದೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ನಡೆದ ರಾಷ್ಟ್ರಭಕ್ತ ಸಮಾನ ಮನಸ್ಕರ ಕಾರ್ಯಕರ್ತರ ಮಿಲನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು. ನಮಗೆ ರಾಷ್ಟ್ರ ಮೊದಲು. ನಮ್ಮ ನೀತಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಗಿದೆ. ರೈತರಿಗೆ ಕಿಸಾನ್ ಸಮ್ಮಾನ್, ಮಹಿಳೆಯರಿಗಾಗಿ ಉಜ್ವಲ ಯೋಜನೆ, ಉಚಿತ ಗ್ಯಾಸ್ ಕನೆಕ್ಷನ್, ಯುವಕರಿಗಾಗಿ ಸ್ಟಾರ್ಟ್ ಪೇ ನಮ್ಮ ನೀತಿಯಾಗಿದೆ. ಭಯೋತ್ಪಾದಕರಿಗೆ ಬಿರಿಯಾನಿ‌ ಕೊಡೋದು ಕಾಂಗ್ರೆಸ್ ನೀತಿಯಾಗಿದೆ. ಆದರೆ ಭಯೋತ್ಪಾದಕರಿಗೆ ಏಕ್ ಮಾರ್ ದೋ ತುಕಡಾ. ದೇಶದಲ್ಲಿ ಹುಟ್ಟಿ ದೇಶದ ಅನ್ನ ತಿಂದು ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನ ಎಡೆಮುರಿ ಕಟ್ಟೋದು ನಮ್ಮ ನೀತಿಯಾಗಿದೆ ಎಂದರು.

Tap to resize

Latest Videos

undefined

ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಇಳಿಯೋದು ಗ್ಯಾರಂಟಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೊಟ್ಟ ಕಾರಣವೇನು? 

ಪಾಕಿಸ್ತಾನ ಪರ ಕೂಗೋರು ಕಾಂಗ್ರೆಸ್‌ನ ವೋಟ್ ಬ್ಯಾಂಕ್

ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಡಿಕೆ ಶಿವಕುಮಾರ ಭಯೋತ್ಪಾದಕರನ್ನು ನಮ್ಮ ಬ್ರದರ್ಸ್ ಎಂದರು. ಬೆಂಗಳೂರಿನ ರಾಮೇಶ್ವರಂ ಕೆಪೆಯಲ್ಲಿ ಬ್ಲಾಸ್ಟ್ ಆದಾಗ ಭಯೋತ್ಪಾದನಾ ಕೃತ್ಯದ ಬಗ್ಗೆಯೂ ಗೃಹ ಸಚಿವರಾದ ಪರಮೇಶ್ವರ ಲಘುವಾಗಿ ಹೇಳಿಕೆ ನೀಡಿದ್ರು. ಇವರ ಓಲೈಕೆ ನೀತಿ ಎಷ್ಟರ ಮಟ್ಟಿಗೆ ದೇಶಕ್ಕೆ ಅಪಾಯಕಾರಿಯಾಗಿದೆ ಯೋಚಿಸಿ. ನಾಳೆ ಕಾಂಗ್ರೆಸ್‌ನವರಿಗೆ ಅವರ ಮನೆಯಲ್ಲೇ ಬ್ಲಾಸ್ಟ್ ಆದಾಗ ಎಚ್ಚರಗೊಳ್ಳಬಹುದು. ನೂರಾರು ಜನರು ಬ್ಲಾಸ್ಟ್ ನಲ್ಲಿ ಸತ್ತರೇ ಅರ್ಥವಾಗಬಹುದು. ಬೆಳಗಾವಿ ಉತ್ತರದಲ್ಲಿ ಕಾಂಗ್ರೆಸ್ ಎಂಎಲ್‌ಎ ಗೆದ್ದಾಗ ಪಟಾಕಿ ಹೊಡೆದ ಸಂಭ್ರಮಿಸಿದರು ಪಾಕಿಸ್ತಾನ ಜಿಂದಾಬಾದ್ ಕೂಗಿದ್ರು. ನಾಸಿರ್ ಹುಸೇನ್ ಗೆದ್ದಾಗ ವಿಧಾನಸೌದದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ರು. ಹೀಗೆ ಬಿಟ್ಟರೇ ತುಮಕೂರು ನಿಂದ ಬೀದರ್ ವರೆಗೂ ಪಾಕಿಸ್ತಾನ ಪರ ಘೊಷಣೆ ಕೂಗ್ತಾರೆ. ಪಾಕಿಸ್ತಾನ ಪರ ಕೂಗೋರು ಕಾಂಗ್ರೆಸ್ ಪಾಲಿನ ವೋಟ್ ಬ್ಯಾಂಕ್. ಕಾಂಗ್ರೆಸ್‌ಗೆ ಮತ ನೀಡುವವರು ದೇಶದ್ರೋಹಿಗಳಾದರೂ ಸರಿ ಎಂಬಂಥ ಮನಸ್ಥಿತಿಗೆ ಕಾಂಗ್ರೆಸ್ ಇಳಿದಿದೆ. ಭಾರತದಲ್ಲಿ ಹುಟ್ಟಿ ಪಾಕಿಸ್ತಾನ ಪರ ಘೋಷಣೆ ಕೂಗೋರು ಕಾಂಗ್ರೆಸ್ ವೋಟು ಬ್ಯಾಂಕ್ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿಯನ್ನು ಪಪ್ಪು ಅಂತಾ ಕರೆಯುತ್ತಾರೆ ಇಂಥವರು ಕಾಂಗ್ರೆಸ್‌ಗೆ ನಾಯಕತ್ವ ವಹಿಸಿದ್ದಾರೆ. ಆದರೆ ನಮ್ಮ ನಾಯಕತ್ವ ನರೇಂದ್ರ ಮೋದಿಯವರು. ಜನಮಾನಸದಲ್ಲಿ ಉಳಿಯುವ ನಾಯಕತ್ವ ನಮ್ಮದು. ಮೂರನೇ ಬಾರಿಗೆ ಪ್ರಧಾನಿ ಆಗಲಿರುವ ನಾಯಕತ್ವ ನಮ್ಮದು. ಪ್ರಧಾನಿ ಮೋದಿಯವರ ನಾಯಕತ್ವವನ್ನ ಆಸ್ಟ್ರೇಲಿಯಾ, ಅಮೇರಿಕಾದವರು ಹೊಗಳುತ್ತಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಓರ್ವ ಸಾವನ್ನಪ್ಪಿದ್ದ. ಆಗ ಸಿದ್ದರಾಮಯ್ಯ, ಈ ಸಾವಿಗೆ ಮೋದಿ ಕಾರಣ ಎಂದು ಆರೋಪಿಸಿದರು. 23 ಸಾವಿರಕ್ಕೂ ಜನರು ಯುದ್ದ ಸ್ಥಳದಿಂದ ಸುರಕ್ಷಿತವಾಗಿ ವಾಪಸ್ ಬಂದರಲ್ಲ ಅದಕ್ಕೆ ಮೋದಿ ಕಾರಣ ಎಂದರು.

ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಶ್ಮೀರ ದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದರು. ಇಂದು ಹೇಗಿದೆ ಅಲ್ಲಿ ಗೊತ್ತಾ? ಅಂದು ಕಲ್ಲು ಹೊಡೆಯುತ್ತಿದ್ದವರು ಇಂದು ಎಲ್ಲಿದ್ದಾರೆ? ಈಗ್ಯಾಕೆ ಸೈನಿಕರಿಗೆ ಹೊಡೆಯುತ್ತಿಲ್ಲ ಎಂದರೆ ಅದಕ್ಕೆ ಕಾರಣ ಮೋದಿ. ಇಡೀ ಕಾಶ್ಮೀರವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಿದ್ದು ಪ್ರಧಾನಿ ಮೋದಿ. ಇಂದು ಕಾಶ್ಮೀರದ ಗಲ್ಲಿಗಲ್ಲಿಯಲ್ಲೂ ನಿರ್ಭಯವಾಗಿ ಕ್ರಿಕೆಟ್ ಆಡಬಹುದು ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಕೇಂದ್ರ ಸರ್ಕಾರ ಎಂದರು.

Lok sabha election 2024: ಊಟಕ್ಕೆ ಕರೆದು ತಾಟು ನೀಡದೆ ಅವಮಾನ? ಪರಸ್ಪರ ಕಿತ್ತಾಡಿಕೊಂಡ ಬಿಜೆಪಿ ಕಾರ್ಯಕರ್ತರು!

ಸಿದ್ದರಾಮಯ್ಯನವರು ಬಹಳ ಧೀರ್ಘಕಾಲ ಆಡಳಿತ ಮಾಡಿದ್ದಾರೆ ಅಂತಾ ಹೇಳಿಕೊಳ್ತಾರೆ ಇಂಥವರು ಬಿಜೆಪಿ ಮನೆ ಹಾಳಾಗ ಎಂದು ಶಪಿಸಿದ್ದಾರೆ. ಯಾರು ಹೀಗೆ ಬಯಸುತ್ತಾರೋ ಅಂಥವರು ದೇಶ ಹಾಳಾಗಲಿ ಎಂದೂ ಬಯಸುತ್ತಾರೆ. ಈ ರೀತಿಯಿಂದಲೇ ಕಾಂಗ್ರೆಸ್ ಇವತ್ತು ಇಂಥ ಸ್ಥಿತಿಗೆ ಬಂದಿದೆ. ನಾವು ದೇಶ ಉದ್ದಾರವಾಗಬೇಕು ಎಂದು ಬಯಸುತ್ತೇವೆ. ಕಾಲ ಒಂದೇ ರೀತಿ ಇರೋದಿಲ್ಲ. ರಾಜಕಾರಣದಲ್ಲಿ ನಾವು ಒಮ್ಮೆ ಕೆಳಗೆ ಬರಬಹುದು, ಒಮ್ಮೆ ಮೇಲೂ ಬರಬಹುದು. ಸೋಲಿಗೆ ಹೆದರಬಾರದು ಸವಾಲಿಗೆ ಬಗ್ಗದೆ ಮುನ್ನಗ್ಗಬೇಕು. ಈ ಬಾರಿ ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ದೇಶದ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

click me!