ಮೋದಿಗೆ ಹ್ಯಾಟ್ರಿಕ್ ಗೆಲುವು ಕೊಟ್ಟ ಚುನಾವಣಾ ಸಮೀಕ್ಷೆ, ಎನ್‌ಡಿಎ-ಇಂಡಿಯಾ ಕೂಟದ ಬಲಾಬಲ ಬಹಿರಂಗ!

By Suvarna NewsFirst Published Apr 4, 2024, 9:03 PM IST
Highlights

ಲೋಕಸಭಾ ಚುನಾವಣೆ 2024 ಘೋಷಣೆಯಾದ ನಂತರ ಇಂಡಿಯಾ ಟಿವಿ- ಸಿಎನ್‌ಎಕ್ಸ್‌ ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳಲ್ಲಿ ಯಾವುದು ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ ಎಂಬುದನ್ನು ಸಮೀಕ್ಷೆಯಲ್ಲಿ ತಿಳಿಸಲಾಗಿದೆ...

ಬೆಂಗಳೂರು (ಏ.04): ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಕಾಲದ ಅತಿದೊಡ್ಡ ಸಮೀಕ್ಷೆ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾಗಿದೆ. ಲೋಕಾ ಚುನಾವಣೆ ಘೋಷಣೆ ನಂತರದ ಮೊಟ್ಟ ಮೊದಲ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 3ನೃ ಬಾರಿಯ ಗೆಲುವಿಗೆ ಇಂಡಿಯಾ ಒಕ್ಕೂಟ ಅಡ್ಡಿಯಾಗುತ್ತಾ ಎಂಬುದರ ಇಂಡಿಯಾ ಟಿವಿ-ಸಿಎನ್​ಎಕ್ಸ್ (INDIA TV - CNX Survey) ಸಮೀಕ್ಷೆಯ ಮಾಹಿತಿ ಇಲ್ಲಿದೆ ನೋಡಿ..

ಲೋಕಸಭಾ ಚುನಾವಣೆ ಘೋಷಣೆಗಿಂತಲೂ ಮುನ್ನವೇ ಪ್ರಚಾರ ಕಾರ್ಯವನ್ನು ಆರಂಭಿಸಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಬಾರಿ 400ಕ್ಕಿಂತ ಅಧಿಕ ಸ್ಥಾನವನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಹೋದ ಕಡೆಗೆಲ್ಲಾ ಮೋದಿ ಅವರು ಅಬ್‌ಕೀ ಬಾರ್ 400 ಪಾರ್ ಎಂದು ಕರೆ ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿಗೆ ಹೊಡೆತ ನೀಡಲು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಇದರ ನಡುವೆಯೂ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲಲು ಎನ್‌ಡಿಎ ಒಕ್ಕೂಟ ಶಪಥವನ್ನು ಮಾಡಿ ಕೆಲಸವನ್ನು ಮಾಡುತ್ತಿದೆ.

Turning Point: ಸ್ಮಶಾನದಲ್ಲಿದ್ದಾಗ ಬಂದ ಫೋನ್ ಕಾಲ್ ಮೋದಿ ಬದುಕನ್ನೇ ಬದಲಿಸಿತು..!

ಈ ಬಗ್ಗೆ ಇಂಡಿಯಾ ಟಿವಿ-ಸಿಎನ್​ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಥವಾ ಐಎನ್‌ಡಿಐಎ ಒಕ್ಕೂಟಗಳಲ್ಲಿ ಯಾವುದು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದನ್ನು ಸಮೀಕ್ಷೆಯನ್ನು ಮಾಡಲಾಗಿದೆ. ದೇಶದ 29 ರಾಜ್ಯಗಳ 543 ಲೋಕಸಭಾ ಕ್ಷೇತ್ರಗಳಲ್ಲಿ ಮ್ಯಾಜಿಕ್‌ ನಂಬರ್ 272 ಸ್ಥಾನಗಳನ್ನು ಪಡೆಯುವ ಒಕ್ಕೂಟವು ಅಧಿಕಾರಕ್ಕೆ ಬರಲಿದೆ. ಇನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಅಕಾಲಿದಳ, ಜೆಡಿಎಯು-ಆರ್‌ಜೆಡಿ, ಬಿಎಸ್‌ಬಿ, ಎಎಪಿ, ಟಿಎಂಸಿ, ಜೆಡಿಎಸ್‌, ಸಮಾಜವಾದಿ, ಸಿಪಿಎಂ, ಡಿಎಂಕೆ, ಬಿಆರ್‌ಎಸ್‌-ಟಿಡಿಪಿ ಸೇರಿ ಹಲವು ಪಕ್ಷಗಳಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನ ಗೆಲ್ಲಲಿವೆ ಎಂಬುದು ಕುತೂಹಲಕಾರಿಯಾಗಿದೆ. ಈ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷೆಯನ್ನು ಸುವರ್ಣ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ.

ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು: 

ಉತ್ತರ ಪ್ರದೇಶ-       80     ಸ್ಥಾನಗಳು    
ಬಿಜೆಪಿ                    73        +11
ಅಪ್ನಾದಳ+RLD    04        +2
I.N.D.I.A                 03        -3
ಬಿಎಸ್​ಪಿ                00        -10

ಮಹಾರಾಷ್ಟ್ರ - 48 ಸ್ಥಾನಗಳು        
ಬಿಜೆಪಿ                      27        +4
ಶಿವಸೇನೆ-ಶಿಂಧೆ         08        --
ಶಿವಸೇನೆ-ಉದ್ಧವ್     07        --
ಎನ್​ಸಿಪಿ-ಅಜಿತ್       02        --
ಎನ್​ಸಿಪಿ-ಪವಾರ್     02        --
ಕಾಂಗ್ರೆಸ್                02        +1

ಪಶ್ಚಿಮ ಬಂಗಾಳ - 42
ಬಿಜೆಪಿ        22        +4
ಟಿಎಂಸಿ        19        -3
ಕಾಂಗ್ರೆಸ್        01        -1

ಬಿಹಾರ- 40   
ಬಿಜೆಪಿ            17        --
ಜೆಡಿಯು        14        -2
ಎಲ್​ಜೆಪಿ        5        -1
ಆರ್​ಜೆಡಿ        1        +1
ಕಾಂಗ್ರೆಸ್        1        --
ಇತರೆ              2        +2

ಒಡಿಶಾ - 21
ಬಿಜೆಪಿ            10        +2
ಬಿಜೆಡಿ            11        -1
ಕಾಂಗ್ರೆಸ್            00        -1    

ಪಂಜಾಬ್ - 13        
ಎಎಪಿ (ಆಪ್)           06        +5
ಕಾಂಗ್ರೆಸ್                  03        -5
ಬಿಜೆಪಿ                      03        +1
ಅಕಾಲಿದಳ              01        -1

ಅಸ್ಸಾಂ - 14        
ಬಿಜೆಪಿ            11        +2
ಕಾಂಗ್ರೆಸ್        00        -3
ಇತರೆ              03        +1

ಜಾರ್ಖಂಡ್ - 14        
ಬಿಜೆಪಿ            12        +1
ಜೆಎಂಎಂ       01        --
ಕಾಂಗ್ರೆಸ್        00        -1
ಇತರೆ              01        --    

ಛತ್ತೀಸ್‌ಘಡ - 11        
ಬಿಜೆಪಿ            10        +1
ಕಾಂಗ್ರೆಸ್         01        -1

ಜಮ್ಮು ಕಾಶ್ಮೀರ - 06
ಬಿಜೆಪಿ            03        
ಎನ್​ಸಿ            03            

ಇನ್ನು ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಹುತೇಕ ಕಡೆ ಕ್ಲೀನ್‌ ಸ್ವೀಪ್‌ ಮಾಡಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಅವುಗಳಲ್ಲಿ ನರೇಂದ್ರ ಮೋದಿ ಅಲೆ ಹೆಚ್ಚಾಗಿರುವಂತಹ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಲಿದೆ. ಇನ್ನು ಎಎಪಿ ಅಧಿಕಾರದಲ್ಲಿರುವ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿರುವ 7 ಲೋಕಸಭಾ ಕ್ಷೇತ್ರಗಳನ್ನು ಕೂಡ ಬಿಜೆಪಿ ಗೆಲ್ಲಲಿದೆ. ಜೊತೆಗೆ, ಮೋದಿ ತವರು ರಾಜ್ಯ ಗುಜರಾತ್, ಸುತ್ತಲಿನ ರಾಜ್ಯಗಳಲ್ಲಿ ಬಿಜೆಪಿಯ ಕಲಮ ಸಂಪೂರ್ಣವಾಗಿ ಅರಳಲಿದೆ.

ದೋ ನಂಬರ್ ಮಾಲ್, ಬಿಜೆಪಿ ಶಾಸಕಿ ಲೊಕೆಟ್ ಚಟರ್ಜಿ ವಿರುದ್ಧ ಟಿಎಂಸಿ ನಾಯಕನ ಕೀಳು ಹೇಳಿಕೆ!

ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ರಾಜ್ಯಗಳು
ಗೋವಾ                  02        
ಉತ್ತರಾಖಂಡ್        05        
ಗುಜರಾತ್              26        
ಮಧ್ಯಪ್ರದೇಶ         29        
ರಾಜಸ್ಥಾನ             25        
ದೆಹಲಿ                  07        
ಹಿಮಾಚಲ           04        
ಹರಿಯಾಣ          10 

ಈಶಾನ್ಯ ರಾಜ್ಯಗಳು -24
ಬಿಜೆಪಿ             16        +2
ಕಾಂಗ್ರೆಸ್         02        -2
ಇತರೆ               06        00

ಲೋಕ ಚುನಾವಣಾ ಸಮೀಕ್ಷೆ ಮತ್ತೆ ಮೋದಿಗೆ ಕೂಟಕ್ಕೆ ಭಾರಿ ಬಹುಮತ:
ಎನ್‌ಡಿಎ ಮೈತ್ರಿಕೂಟ (NDA)            399        +46
ಇಂಡಿಯಾ ಮೈತ್ರಿಕೂಟ (I.N.DI.A)    94        +3
ಇತರೆ ಪಕ್ಷಗಳು (OTHERs)                 50        -49

ಪಕ್ಷವಾರು ಪಡೆಯುವ ಸ್ಥಾನಗಳ ಬಲಾಬಲ 

  • ಬಿಜೆಪಿ             342        +39
  • ಕಾಂಗ್ರೆಸ್         38        -14
  • ಟಿಎಂಸಿ           19        -3
  • ಡಿಎಂಕೆ           18        -6
  • ಜೆಡಿಯು          14        -2
  • ಟಿಡಿಪಿ             12        +9
  • ಇತರೆ              100        -23
click me!