ಕ್ಷೇತ್ರದ ಬಗ್ಗೆ ಗೀತಾ ಶಿವರಾಜ್‌ಕುಮಾರ್‌ಗೆ ಯಾವುದೇ ಜ್ಞಾನ ಇಲ್ಲ; ಗೆಲ್ಲಿಸಬೇಡಿ: ಹರತಾಳು ಹಾಲಪ್ಪ ಮನವಿ

By Ravi Janekal  |  First Published Apr 29, 2024, 4:58 PM IST

ಯಾರದ್ದೋ ಸೊಸೆ ಇನ್ಯಾರದೋ ಮಗಳು, ಚಲನಚಿತ್ರ ನಟನ ಪತ್ನಿ ಎಂದು ಯೋಚನೆ ಮಾಡದೇ, ಜಿಲ್ಲೆಯ ಸಮಸ್ಯೆ ಬಗ್ಗೆ ಅರಿಯದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಹಾಳು ಮಾಡಬೇಡಿ.ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ ಗೆಲ್ಲಿಸದಂತೆ ಮನವಿ ಮಾಡಿದರು.


ಶಿವಮೊಗ್ಗ (ಏ.29): ಯಾರದ್ದೋ ಸೊಸೆ ಇನ್ಯಾರದೋ ಮಗಳು, ಚಲನಚಿತ್ರ ನಟನ ಪತ್ನಿ ಎಂದು ಯೋಚನೆ ಮಾಡದೇ, ಜಿಲ್ಲೆಯ ಸಮಸ್ಯೆ ಬಗ್ಗೆ ಅರಿಯದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಹಾಳು ಮಾಡಬೇಡಿ. ಕ್ಷೇತ್ರದ ಸಮಸ್ಯೆ ಬಗ್ಗೆ ಗೀತಾ ಶಿವರಾಜಕುಮಾರ್‌ಗೆ ಯಾವುದೇ ಜ್ಞಾನ ಇಲ್ಲ. ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಹತ್ತು ಜನರ ಹೆಸರು ಹೇಳಲು ಅವರಿಗೆ ಸಾಧ್ಯವಿಲ್ಲ. ಇಂಥವರಿಗೆ ನಟ ಪತ್ನಿ, ಯಾರದೋ ಕುಟುಂಬದ ಸೊಸೆ ಅಂತಾ ಮತ ನೀಡಿ ಗೆಲ್ಲಿಸಿದರೆ ಜಿಲ್ಲೆ ಅಭಿವೃದ್ಧಿಯಾಗುತ್ತಾ? ಎಂದು ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಇಂದು ಶಿವಮೊಗ್ಗದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಒಮ್ಮೆ ಸೋತಿದ್ದಾರೆ, ಮತ್ತೊಮ್ಮೆ ಸೋಲಿಸುತ್ತಾರೆ ಎಂದರೆ ಜನರ ಬಗ್ಗೆ ಏನು ಹೇಳಬೇಕು? ರಾಜಕೀಯದಲ್ಲಿ ಯಾರಿಗೂ ಮೋಸ ಮಾಡದ, ಏನೂ ಅರಿಯದ ನಿಖಿಲ್ ಕುಮಾರಸ್ವಾಮಿ ಯಾಕೆ ಸೋತರು? ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಸೋಲುವುದಕ್ಕೆ ಕಾರಣವೇ ಇರಲಿಲ್ಲ ಎಂದರು.

Tap to resize

Latest Videos

undefined

ಎದುರಾಳಿ ಬಗ್ಗೆ ಯೋಚನೆ ಮಾಡೊಲ್ಲ, ಮೋದಿ ಅಲೆ ಬಗ್ಗೆ ನನಗೆ ಗೊತ್ತಿಲ್ಲ: ಗೀತಾ ಶಿವರಾಜ್‌ಕುಮಾರ್

ನಿಖಿಲ್ ಕುಮಾರಸ್ವಾಮಿ ಸೋತ ಬಳಿಕ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಮತ್ತೆ ಪಕ್ಷ ಸಂಘಟನೆಗೆ ಮುಂದಾದರು. ಒಬ್ಬ ನಿಖಿಲ್ ಕುಮಾರಸ್ವಾಮಿಯವರನ್ನ ಗೆಲ್ಲಿಸುವುದು ಕಷ್ಟ ಇತ್ತಾ? ಒಂದು ಜನಾಂಗ, ಒಂದು ಧರ್ಮ ನಿಖಿಲ್ ಕುಮಾರಸ್ವಾಮಿಯವರನ್ನ ಸೋಲಿಸಿದ್ದು ನನಗೆ ನೋವಾಗಿದೆ. ನಿಖಿಲ್ ವಿರುದ್ಧ ದನ ಕಡಿಯುವರು, ದನ ತಿನ್ನುವವರಿಗೆ ವೋಟ್ ಹಾಕಿದ್ರು ಎಂದರು. 

ಗೀತಾ ಶಿವರಾಜ್ ಕುಮಾರ್ ಲೋಕಸಭೆಗೆ ಸ್ಪರ್ಧೆ: ಗೆಲ್ಲಲೇಬೇಕೆಂದೇ ಕಣಕ್ಕೆ ಇಳಿದಿದ್ದೇವೆ: ನಟ ಶಿವಣ್ಣ

ಬಿಜೆಪಿ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಗೋಹತ್ಯೆ ಕಾಯ್ದೆ ಜಾರಿಗೆ ತಂದು ಗೋವುಗಳ ಹತ್ಯೆ ಮಾಡುವುದನ್ನು ಬಿಜೆಪಿ ನಿಲ್ಲಿಸಿದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಎಗ್ಗಿಲ್ಲದೆ ಗೋವು ಕಳ್ಳತನ, ವಧೆಗಳಾಗುತ್ತಿವೆ. ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಗೀತಕ್ಕನ ಮನೆ ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲ ಬೆಂಗಳೂರಿನಲ್ಲಿದೆ. ನಾಳೆ ಗೆದ್ದರೆ ಸಮಸ್ಯೆ ಕೇಳಲು ಬೆಂಗಳೂರಿಗೆ ಹೋಗಬೇಕಾಗುತ್ತೆ. ಇಲ್ಲಿನ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. 

click me!