ಸಿಟಿ ಬಸ್ ಏರಿ ಡಿಫರೆಂಟ್ ಪ್ರಚಾರಕ್ಕೆ ಮುಂದಾದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ!

By Ravi Janekal  |  First Published Apr 5, 2024, 6:50 PM IST

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪರ ಸೊಸೆಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಎಲ್ಲರಂತೆ ಮತ ಪ್ರಚಾರಕ್ಕೆ ಇಳಿಯದೇ ಡಿಫ್ರೆಂಟ್ ಪ್ರಚಾರಕ್ಕೆ ಮುಂದಾಗಿದ್ದಾರೆ. ದಾವಣಗೆರೆ ಸಿಟಿ ಬಸ್ ಏರಿ ಮಹಿಳಾ ಪ್ರಯಾಣಿಕರೊಂದಿ ಪ್ರಯಾಣಿಸುತ್ತಲೇ ಮತಯಾಚನೆ ಮಾಡಿ ಗಮನ ಸೆಳೆದಿದ್ದಾರೆ.


ದಾವಣಗೆರೆ (ಏ.5): ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಇದ್ದು, ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಕಾರ್ಯಕರ್ತರ ಸಮಾವೇಶ ಏರ್ಪಡಿಸಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿವೆ.

Latest Videos

undefined

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪರ ಸೊಸೆಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಎಲ್ಲರಂತೆ ಮತ ಪ್ರಚಾರಕ್ಕೆ ಇಳಿಯದೇ ಡಿಫ್ರೆಂಟ್ ಪ್ರಚಾರಕ್ಕೆ ಮುಂದಾಗಿದ್ದಾರೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಸಭೆ, ಸಮಾರಂಭ, ಔತಣಕೂಟ ನಡೆಸುತ್ತಿದ್ದರೆ ಇತ್ತ ಪ್ರಭಾ ಮಲ್ಲಿಕಾರ್ಜುನ ನೇರ ದಾವಣಗೆರೆ ಸಿಟಿ ಬಸ್ ಏರಿ ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಲೇ ಮತಯಾಚನೆ ಮಾಡುತ್ತಿದ್ದಾರೆ. ಹೌದು. ದಾವಣಗೆರೆ ನಗರ ಸಾರಿಗೆಯಲ್ಲಿ ಎಸ್‌ಎಸ್‌ ಆಸ್ಪತ್ರೆವರೆಗೂ ಸಾಗುವ ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬಿಜೆಪಿಯೊಳಗಿನ ಬಂಡಾಯ ಶಮನಕ್ಕೆ ಅಮಿತ್‌ ಶಾ ಎಂಟ್ರಿ: ಇಂದು ನಾಲ್ಕು ಕ್ಷೇತ್ರಗಳ ಕೋರ್ ಕಮಿಟಿ ಸಭೆ

ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಉಚಿತ ಪ್ರಯಾಣ ಮಾಡುವ ಮೂಲಕ ಪ್ರಯಾಣಿರ ಬಳಿ ಶಕ್ತಿ ಯೋಜನೆ ಬಗ್ಗೆ ವಿಚಾರಿಸಿದ್ದಾರೆ. ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಬಗ್ಗೆ ತಿಳಿಸಿದ್ದಾರೆ. ಬಸ್‌ ನಿಲ್ದಾಣದಲ್ಲಿ ಕುಳಿತ ಮಹಿಳೆಯರು, ವಿದ್ಯಾರ್ಥಿನಿಯರನ್ನು ಮಾತನಾಡಿಸಿದ್ದಾರೆ. ಈ ಬಾರಿ ಎಂಪಿ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಮಾಡುವವರಿಗೆ ವೋಟು ಮಾಡುವಂತೆ ಮನವಿ ಮಾಡಿದ್ದಾರೆ.

 

ಲೋಕಸಭೆ ಚುನಾವಣೆ 2024: ಅಡುಗೆ ಮಾಡುವ ಹೆಣ್ಣಿಗೆ ಈ ಸಲ ವೋಟ್‌ ಹಾಕಿ, ಸಂಸದ ಸಿದ್ದೇಶ್ವರ್‌ ಕರೆ

click me!