ಈ ಲೋಕಸಭಾ ಚುನಾವಣೆ ಸಾಧನೆ ಮತ್ತು ಪೊಳ್ಳು ಭರವಸೆಗಳ ಮಧ್ಯೆ ನಡೆಯುತ್ತಿದೆ. ಸಂಸ್ಕೃತಿ ಮತ್ತು ವಿಕೃತಿ ಮಧ್ಯ ನಡೆಯುತ್ತಿದೆ. ದೇಶಕ್ಕೆ ಪಾಕಿಸ್ತಾನ ಮತ್ತು ಚೈನಾದ ದಾಳಿಯನ್ನು ತಡೆಗಟ್ಟಲು ಮೋದಿ ನಾಯಕತ್ವದ ಅವಶ್ಯಕತೆ ಇದೆ ಎಂದು ಬಿಜೆಪಿ ಮಾಜಿ ಶಾಸಕ ಭಾನುಪ್ರಕಾಶ್ ನುಡಿದರು.
ಶಿವಮೊಗ್ಗ ಮಾ.31): 1989ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದ ಕೆ ಎಸ್ ಈಶ್ವರಪ್ಪ ಅವರನ್ನು ಬಿಜೆಪಿ ಗೆಲ್ಲಿಸಿತ್ತು. 2023ರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಚನ್ನಬಸಪ್ಪ ರನ್ನು ಬಿಜೆಪಿ ಗೆಲ್ಲಿಸಿ ಶಾಸಕರನ್ನಾಗಿ ಮಾಡಲಾಗಿದೆ. ಬಿಜೆಪಿ ಆಗಾಗ ಇಂತಹ ಪ್ರಯೋಗಗಳನ್ನು ಮಾಡುತ್ತದೆ. ವ್ಯಕ್ತಿಗಳು ಬಿಜೆಪಿ ವಿರುದ್ಧ ಸೆಡ್ಡು ಹೊಡೆದಾಗ ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಬಂಡಾಯ ಎದ್ದಿರುವ ಕೆಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಮಾಜಿ ಶಾಸಕ ಭಾನುಪ್ರಕಾಶ್ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ನಗರ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಸಮುದ್ರ ಇಲ್ಲದೆ ಅಲೆ ಇರುವುದಿಲ್ಲ. ಸಮುದ್ರದ ಕಾರಣಕ್ಕಾಗಿ ಅಲೆ ಇರುತ್ತದೆ ಎಂದು ಮಾತಿನ ಚಾಟಿ ಬೀಸಿದರು.
undefined
'ಇನ್ನೊಬ್ಬರ ಬಳಿ ಹಿಂದೂತ್ವ ಕಲಿಯುವ ಅಗತ್ಯ ಇಲ್ಲ': ಕೆಎಸ್ ಈಶ್ವರಪ್ಪಗೆ ಸಂಸದ ರಾಘವೇಂದ್ರ ತಿರುಗೇಟು
ಈ ಲೋಕಸಭಾ ಚುನಾವಣೆ ಸಾಧನೆ ಮತ್ತು ಪೊಳ್ಳು ಭರವಸೆಗಳ ಮಧ್ಯೆ ನಡೆಯುತ್ತಿದೆ. ಸಂಸ್ಕೃತಿ ಮತ್ತು ವಿಕೃತಿ ಮಧ್ಯ ನಡೆಯುತ್ತಿದೆ. ದೇಶಕ್ಕೆ ಪಾಕಿಸ್ತಾನ ಮತ್ತು ಚೈನಾದ ದಾಳಿಯನ್ನು ತಡೆಗಟ್ಟಲು ಮೋದಿ ನಾಯಕತ್ವದ ಅವಶ್ಯಕತೆ ಇದೆ. ಹೀಗಾಗಿ ಶಿವಮೊಗ್ಗದಲ್ಲಿ ಈ ಬಾರಿ ಹೆಚ್ಚಿನ ಲೀಡ್ ಪಡೆದುಕೊಳ್ಳಬೇಕಿದೆ. ನಮ್ಮವರೇ ನಮಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಗಟ್ಟಿನೋ, ವ್ಯಕ್ತಿ ಗಟ್ಟಿಯೋ ಎಂಬುದು ತೀರ್ಮಾನವಾಗಬೇಕಾದ ಚುನಾವಣೆ ಇದು. ಕಾರ್ಯಕರ್ತರು ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದರು.