ಅಣ್ಣ-ತಮ್ಮಂದಿರಿಗೆ ಲೂಟಿ ಹೊಡೆಯುವುದೇ ಕೆಲಸ: ಸಿ.ಪಿ.ಯೋಗೇಶ್ವರ್

By Govindaraj S  |  First Published Apr 1, 2024, 8:03 AM IST

ಅಣ್ಣ ತಮ್ಮಂದಿರಿಗೆ ನಾಡು, ಜಿಲ್ಲೆಯ ಕುರಿತು ಯಾವುದೇ ಕಾಳಜಿ ಇಲ್ಲ. ಬರೀ ಭ್ರಷ್ಟಾಚಾರ, ಲೂಟಿ ಹೊಡೆಯುವುದು, ದೇಶ ಹೊಡೆಯುವುದು, ಮನೆ ಹೊಡೆಯುವುದೇ ಇವರ ಕೆಲಸವಾಗಿದೆ ಎಂದು ಡಿ.ಕೆ.ಸಹೋದರರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.


ಚನ್ನಪಟ್ಟಣ (ಏ.01): ಅಣ್ಣ ತಮ್ಮಂದಿರಿಗೆ ನಾಡು, ಜಿಲ್ಲೆಯ ಕುರಿತು ಯಾವುದೇ ಕಾಳಜಿ ಇಲ್ಲ. ಬರೀ ಭ್ರಷ್ಟಾಚಾರ, ಲೂಟಿ ಹೊಡೆಯುವುದು, ದೇಶ ಹೊಡೆಯುವುದು, ಮನೆ ಹೊಡೆಯುವುದೇ ಇವರ ಕೆಲಸವಾಗಿದೆ ಎಂದು ಡಿ.ಕೆ.ಸಹೋದರರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ನಗರದ ಮಹದೇಶ್ವರ ನಗರದ ಬಳಿ ಹಮ್ಮಿಕೊಂಡಿದ್ದ ನಗರ ಹಾಗೂ ಹೊಂಗನೂರು ಜಿಪಂ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಎಲ್ಲ ತಂತ್ರ ಪ್ರತಿತಂತ್ರ ಮಾಡಲು ಹೊರಟಿರು ಅಣ್ಣತಮ್ಮ ಒಂದು ಕಡೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ಕಾಳಜಿ ಇಟ್ಟುಕೊಂಡಿರುವ ಡಾ.ಮಂಜುನಾಥ್ ಒಂದು ಕಡೆ. ಜನ ಧರ್ಮದ ಪರವೋ, ಅಧರ್ಮದ ಪರವೋ ಎಂಬುದನ್ನು ನಿರ್ಧರಿಸಬೇಕು ಎಂದು ತಿಳಿಸಿದರು.

Tap to resize

Latest Videos

ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸಲಹೆ

ಶಿವಕುಮಾರ್ ಟ್ಯಾಕ್ಸ್: ನಾಮಪತ್ರ ಸಲ್ಲಿಕೆ ವೇಳೆ ಸಂಸದ ಡಿ.ಕೆ.ಸುರೇಶ್ ೬೦೦ ಕೋಟಿ ಆದಾಯ ಘೋಷಿಸಿದ್ದಾರೆ. ೧೦ ಸಾವಿರ ಸಂಪಾದನೆ ಮಾಡುವುದೇ ಕಷ್ಟ. ಅಂತದ್ದರಲ್ಲಿ ೧೧ ವರ್ಷದ ಅವಧಿಯಲ್ಲಿ ಇವರು ಇಷ್ಟು ಆಸ್ತಿ ಸಂಪಾದಿಸಿದ್ದು ಹೇಗೆ. ಇವರದು ಈಗಾದರೆ ಇವರ ಅಣ್ಣನದು ಬ್ರಹ್ಮಾಂಡ. ಬೆಂಗಳೂರಿನಲ್ಲಿ ಯಾರಾದರೂ ಡೆವಲಪ್ ಮಾಡಲು ಹೋದರೆ ಅಡಿಗೆ ೧೦೦ ರು. ಟ್ಯಾಕ್ ಫಿಕ್ಸ್ ಮಾಡಿದ್ದಾರೆ. ಇದು ಶಿವಕಮಾರ್ ಟ್ಯಾಕ್ಸ್ ಆಗಿದೆ ಎಂದು ಆರೋಪಿಸಿದರು.

ಶಿವಕುಮಾರ್ ರಾಜ್ಯದ ಎಲ್ಲ ಅಧಿಕಾರ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ನೀರಾವರಿಯಂತಹ ಬಲಿಷ್ಠ ಖಾತೆ ಇಟ್ಟುಕೊಂಡು ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದಾರೆ. ಅದಕ್ಕಾಗಿ ಆದಾಯ ತೆರಿಗೆ ಇಲಾಖೆ ಇವರಿಗೆ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ಬೇರೆ ಯಾರಿಗೂ ಏಕೆ ನೋಟಿಸ್ ನೀಡುತ್ತಿಲ್ಲ. ಭ್ರಷ್ಟರಿಗೆ ಕೊಳ್ಳೆ ಹೊಡೆಯುವವರಿಗೆ ಮಾತ್ರ ಮೋದಿ ಸರ್ಕಾರ ಸಿಂಹಸ್ವಪ್ನ ಆಗಿದೆ ಎಂದು ಹೇಳಿದರು.

ಚನ್ನಪಟ್ಟಣಕ್ಕೆ ೫೦ ಕೋಟಿ: ಚನ್ನಪಟ್ಟಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಐದು ಮನೆಗಳನ್ನು ಮಾಡಿದ್ದು, ಚುನಾವಣೆಗೆ ಹಂಚಲು ೫೦ ಕೋಟಿ ಕೂಡಿಟ್ಟಿದ್ದಾರೆ. ಕಾಂಗ್ರೆಸ್‌ಗೆ ಸೇರ್ಪಡೆಯಾದ ಎಷ್ಟೋ ಜನ ದುಡ್ಡು ಇಸಿದುಕೊಂಡು ಬರುತ್ತೇವೆ ಎಂದು ಹೇಳಿ ಅಲ್ಲಿ ಹೋಗಿದ್ದಾರೆ. ಅಧಿಕಾರಕ್ಕೆ ಬಂದಾಗ ಚನ್ನಪಟ್ಟಣದ ಕಾಂಗ್ರೆಸಿಗರನ್ನು ಡಿಕೆ ಸಹೋದರರು ಗೌರವದಿಂದ ಕಾಣಲಿಲ್ಲ. ಅವರು ಕೊಡುವ ಎಂಜಲು ಕಾಸಿಗೆ ವೋಟ್ ಕೊಡಿ ಎಂದು ವೋಟ್ ಕೇಳಲು ನಾಚಿಕೆ ಆಗಲ್ಲವಾ ಎಂದು ಪ್ರಶ್ನಿಸಿದ ಅವರು, ಜನ ಇಂದು ಡಿಕೆಶಿ ನೋಟು ಮಂಜಣ್ಣನಿಗೆ ವೋಟ್ ಎಂದು ತೀರ್ಮಾನಿಸಿದ್ದಾರೆ ಎಂದರು.

ಶಿವಕುಮಾರ್ ಸಾಕ್ಷಿ ಗುಡ್ಡೆ ಏನು: ಡಿ.ಕೆ.ಶಿವಕುಮಾರ್ ಸಚಿವರಾಗಿದ್ದಾರೆ. ಅವರ ತಮ್ಮ ಸಂಸದರಾಗಿದ್ದಾರೆ. ಆದರೂ ಜಿಲ್ಲೆಯ ಜನರನ್ನು ಕಾಡುತ್ತಿರುವ ಕಾಡನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಏಕೆ ಸಾಧ್ಯವಾಗಲಿಲ್ಲ. ತಾಲೂಕಿನ ಕೆರೆಗಳನ್ನು ಏಕೆ ತುಂಬಿಸಲಿಲ್ಲ. ತಾಲೂಕನ್ನು ಕಾಡುತ್ತಿರುವ ಸಮಸ್ಯೆಗಳನ್ನು ಏಕೆ ಪರಿಹರಿಸಲಿಲ್ಲ. ತಾಲೂಕಿನಲ್ಲಿ ಶಿವಕುಮಾರ್ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಕ್ಷಿ ಗುಡ್ಡೆ ಏನಿದೆ ಎಂದು ಪ್ರಶ್ನಿಸಿದರು.

ಎರಡು ಬಾರಿ ಸಹಕಾರ: ಡಿ.ಕೆ.ಸುರೇಶ್ ಸಂಸದರಾಗಲು ಎರಡು ಬಾರಿ ನಾವು ಸಹಕಾರ ನೀಡಿದೆವು. ಇನ್ನೊಮ್ಮೆ ಜೆಡಿಎಸ್ ಸಹಕಾರದಿಂದ ಎಂ.ಪಿ.ಯಾದರು. ಮೂರು ಬಾರಿ ಸಂಸದರಾದರೂ ಸಹ ಅವರು ಸೌಜನ್ಯದಿಂದ ವರ್ತಿಸುವುದನ್ನು ಕಲಿಯಲಿಲ್ಲ. ಸರ್ಕಾರಿ ಅಧಿಕಾರಿಗಳು, ಜನರಿಗೆ ಗೌರವ ನೀಡುವುದಿಲ್ಲ. ಅವರಿಗೆ ನಿಜವಾದ ಶಿಕ್ಷಣ ಇಲ್ಲ. ಅವರಿಗೆ ಗೊತ್ತಿರುವುದು ನನಗೆಷ್ಟೆ ಕೊಡುತ್ತೀಯ ಈ ವ್ಯವಹಾರ ಮಾಡಿದರೆ ನನಗೆಷ್ಟು ಸಿಗುತ್ತದೆ ಎಂಬುದು ಅಷ್ಟೇ ಎಂದು ಕಿಡಕಾರಿದರು.

ಕೋಟಿ ಕೋಟಿ ಹಣ ಸಾಗಿಸಿದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಮಂಜುನಾಥ್ ಸೇವೆ ದೇಶಕ್ಕೆ ಬೇಕು ಎಂದು ನಾವೇ ಅವರ ಮನಸ್ಸು ಒಲಿಸಿ ರಾಜಕೀಯಕ್ಕೆ ತಂದೆವು. ಅವರು ಮೊದಲು ಒಪ್ಪಲಿಲ್ಲ. ನೀವು ಹೋರಾಡದಿದ್ದರೆ ದುಷ್ಟರೇ ಬೆಳೆಯುತ್ತಾರೆ ನಮ್ಮ ಜನ ದುಡ್ಡು ಮಾತ್ರ ನೋಡುವುದಿಲ್ಲ ಗಲ್ಲಿಸುತ್ತೇವೆ ಎಂದು ಕರೆತಂದಿದ್ದೇವೆ. ಈ ಹಿನ್ನೆಲೆಯಲ್ಲಿ ಈಬಾರಿ ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು, ಬಿಜೆಪಿ ನಗರಾಧ್ಯಕ್ಷ ಶಿವಕುಮಾರ್, ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಮು, ಎಸ್.ಲಿಂಗೇಶ್ ಕುಮಾರ್, ಹಾಪ್‌ಕಾಮ್ಸ್ ದೇವರಾಜು, ಪ್ರಸನ್ನ ಪಿ.ಗೌಡ ಇತರರಿದ್ದರು.

click me!