ಬಿಜೆಪಿ 5ನೇ ಪಟ್ಟಿ ಬಿಡುಗಡೆ; ರಾಯಚೂರಿನಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಕಣಕ್ಕೆ!

By Ravi JanekalFirst Published Mar 24, 2024, 10:00 PM IST
Highlights

ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿ ಬಿಡುಗಡೆಗೊಳಿಸಿದ್ದು, ರಾಯಚೂರು ಲೋಕಸಭಾ ಕ್ಷೇತ್ರದಿಂದ(ಎಸ್‌ಟಿ ಮೀಸಲು ಕ್ಷೇತ್ರ) ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಟಿಕೆಟ್ ಘೊಷಣೆ ಮಾಡಿದ ಹೈಕಮಾಂಡ್, ಉತ್ತರ ಕನ್ನಡ, ಬೆಳಗಾವಿ ಟಿಕೆಟ್ ಯಾರಿಗೆ ? ಇಲ್ಲಿದೆ ವಿವರಣೆ

ರಾಯಚೂರು (ಮಾ.24): ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿ ಬಿಡುಗಡೆಗೊಳಿಸಿದ್ದು, ರಾಯಚೂರು ಲೋಕಸಭಾ ಕ್ಷೇತ್ರದಿಂದ(ಎಸ್‌ಟಿ ಮೀಸಲು ಕ್ಷೇತ್ರ) ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಟಿಕೆಟ್ ಘೊಷಣೆ ಮಾಡಿದೆ. ಈ ಬಾರಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಸಂಸದ ಬಿವಿ ನಾಯಕರಿಗೆ ಟಿಕೆಟ್ ಸಿಗುತ್ತದೆಂದು ನಿರೀಕ್ಷಿಸಲಾಗಿತ್ತು. ಜಿಲ್ಲೆಯಾದ್ಯಂತ ಬಿವಿ ನಾಯಕರಿಗೆ ಟಿಕೆಟ್ ಸಿಗುವ ಬಗ್ಗೆ ಚರ್ಚೆ ನಡೆದಿತ್ತು. ಇತ್ತ ಕಾಂಗ್ರೆಸ್‌ ನಿಂದ ನಿವೃತ್ತ ಐಎಎಸ್‌ ಅಧಿಕಾರಿ ಕುಮಾರ್ ‌ನಾಯಕಗೆ ಟಿಕೆಟ್ ಘೋಷಣೆ ಮಾಡಿರುವ ಬೆನ್ನಲ್ಲೇ ಬಿವಿ ನಾಯಕರನ್ನು ಕೈಬಿಟ್ಟ ಬಿಜೆಪಿ ಹೈಕಮಾಂಡ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಮತ್ತೊಂದು ಅವಕಾಶ ನೀಡಿದೆ.

ಇನ್ನು ಉತ್ತರ ಕನ್ನಡದಲ್ಲಿ ಫೈರ್ ಬ್ರಾಂಡ್, ಪ್ರಖರ ಹಿಂದೂತ್ವವಾದಿ ಸಂಸದ ಅನಂತಕುಮಾರ್ ಹೆಗ್ಡೆಗೆ ಟಿಕೆಟ್ ಕೈತಪ್ಪಿದ್ದು, ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇತ್ತ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಟಿಕೆಟ್ ಘೊಷಣೆ ಮಾಡಿದೆ. ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಡಾ ಕೆ ಸುಧಾಕರ್‌ಗೆ ಟಿಕೆಟ್ ಘೋಷಣೆ ಮಾಡಿದ ಹೈಕಮಾಂಡ್. ಕಳೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿಗೆ ಲೋಕಸಭಾ ಚುನಾವಣೆ ಗೆಲ್ಲುವ ಮೂಲಕ ಸೋಲಿನ ಸೇಡಿನ ತೀರಿಸಿಕೊಳ್ಳಲು ಸಜ್ಜಾಗಿರುವ ಮಾಜಿ ಸಚಿವ ಡಾ ಸುಧಾಕರ್.

 ನಮ್ಮ ಕ್ಯಾಪ್ಟನ್ ಮೋದಿ; ಕಾಂಗ್ರೆಸ್ ಕ್ಯಾಪ್ಟನ್ ಯಾರು ಅಂತಾ ಅವರಿಗೇ ಗೊತ್ತಿಲ್ಲ: ಆರ್ ಅಶೋಕ್ 

ನಾಳೆ ಬಿಜೆಪಿಯಲ್ಲಿ 28 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಕ್ಲೀಯರ್ ಆಗಲಿದೆ. ನಾಳೆಯಿಂದ ಎಲ್ಲ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಚುನಾವಣೆ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

click me!