ಪಾಂಡವರು-ಕೌರವರು ಯಾರೆಂದು ಜನ ತೀರ್ಪು ನೀಡ್ತಾರೆ: ಶ್ರೀರಾಮುಲು ಲೇವಡಿ

By Kannadaprabha News  |  First Published Apr 15, 2024, 7:22 PM IST

ಕಾಂಗ್ರೆಸ್‌ನವರು ಕೌರವರಾಗಿರುವ ಕಾರಣ ಇಂಡಿಯಾ ಮೈತ್ರಿ ಕೂಟದಿಂದ ಅನೇಕರು ಬಿಟ್ಟು ಹೋಗುತ್ತಿದ್ದಾರೆ. ಚುನಾವಣೆ ಪಲಿತಾಂಶದ ಬಳಿಕ ಪಾಂಡವರು, ಕೌರವರು ಯಾರೆಂದು ಜನರೇ ಉತ್ತರಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಲೇವಡಿ ಮಾಡಿದರು.


ಹೊಸಪೇಟೆ (ಏ.15): ಕಾಂಗ್ರೆಸ್‌ನವರು ಕೌರವರಾಗಿರುವ ಕಾರಣ ಇಂಡಿಯಾ ಮೈತ್ರಿ ಕೂಟದಿಂದ ಅನೇಕರು ಬಿಟ್ಟು ಹೋಗುತ್ತಿದ್ದಾರೆ. ಚುನಾವಣೆ ಪಲಿತಾಂಶದ ಬಳಿಕ ಪಾಂಡವರು, ಕೌರವರು ಯಾರೆಂದು ಜನರೇ ಉತ್ತರಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಲೇವಡಿ ಮಾಡಿದರು. ನಗರದಲ್ಲಿ ರೋಡ್ ಶೋ ನಡೆಸಿ ಪ್ರಚಾರ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಇತ್ತೀಚೆಗೆ ನಡೆದ ಪ್ರಚಾರ ಸಭೆಯಲ್ಲಿ ಈ ಲೋಕಸಭಾ ಚುನಾವಣೆ, ಕೌರವರು ಮತ್ತು ಪಾಂಡವರ ನಡೆಯುವ ಯುದ್ಧ ಎಂದು ಹೇಳಿ ಬಿಜೆಪಿಯವರನ್ನು ಕೌರವರಿಗೆ ಹೋಲಿಕೆ ಮಾಡಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಕೌರವರಾಗಿರುವುದರಿಂದ ಇಂಡಿಯಾ ಒಕ್ಕೂಟದಿಂದ ಒಬ್ಬರಾದಂತೆ ಒಬ್ಬರು ಹೊರ ಹೋಗುತ್ತಿದ್ದಾರೆ. ಜನರು ಪಾಂಡವರು, ಕೌರವರು ಯಾರೆಂದು ಮೇ ೭ರಂದು ನಡೆಯುವ ಚುನಾವಣೆಯಲ್ಲಿ ಜನರು ತೀರ್ಪು ನೀಡಲಿದ್ದಾರೆ ಎಂದರು.

Latest Videos

undefined

ಅವರ ಮನೆಯ ಹೆಣ್ಣನ್ನು ದಾರಿತಪ್ಪಿಸಿದ್ದು ಕುಮಾರಸ್ವಾಮಿ: ಕೆಪಿಸಿಸಿ ಸದಸ್ಯೆ ಚಂದ್ರಕಲಾ ಆಕ್ರೋಶ

ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ: ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷದ ಸಾಧನೆಯನ್ನು ಮನೆ-ಮನೆಗೆ ತೆರಳಿ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಮಾಜಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ಅವಧಿಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಈ ಬಾರಿ ಜನರು ಶ್ರೀರಾಮುಲು ಮತ್ತು ಮೋದಿಯವರನ್ನು ಗೆಲ್ಲಿಸಬೇಕು ಎಂಬ ಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಮಣಿಸಲು ಕಾಂಗ್ರೆಸ್ ಇಂಡಿಯಾ ಒಕ್ಕೂಟ ಮಾಡಿಕೊಂಡಿದೆ. ಹೀಗಾಗಿ ದೊಡ್ಡ ಗುಂಪುವನ್ನು ಮಾಡಿಕೊಂಡಿರುವ ಕಾಂಗ್ರೆಸ್‌ನವರು ಕೌರವರು ಎಂದು ವ್ಯಂಗ್ಯವಾಡಿದ ಅವರು, ಈ ಚುನಾವಣೆ ಭ್ರಷ್ಟಚಾರದ ವಿರುದ್ಧ ನಡೆಯುತ್ತಿರುವ ಧರ್ಮ ಯುದ್ದವಾಗಿದೆ ಬಣ್ಣಿಸಿದರು.

ಸುಭದ್ರ ಸರ್ಕಾರಕ್ಕೆ ಬಿಜೆಪಿ ಬೆಂಬಲಿಸಿ: ಕೇಂದ್ರದಲ್ಲಿ ಸುಭದ್ರ ಹಾಗೂ ಸುಸ್ಥಿರ ಸರ್ಕಾರ ಬರಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ಹೆಚ್ಚು ಸೌಲಭ್ಯ ಬಿಜೆಪಿ ನೀಡಿದೆ. ಹೀಗಾಗಿ ಎಸ್ಟಿ ಸಮುದಾಯ ಬಿಜೆಪಿಗೆ ಬೆಂಬಲಿಸಬೇಕು ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು,. ಇಲ್ಲಿಯ ಗೋಕುಲ್‌ ಗಾರ್ಡ್‌ನಲ್ಲಿ ಬಿಜೆಪಿ ವತಿಯಿಂದ ನಡೆದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

ಭಾರತ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್‌ ಸಾಧನೆ ಮಾಡಬೇಕಿದೆ. ಹೀಗಾಗಿ ರಾಜ್ಯದ 28 ಕ್ಷೇತ್ರಗಳ ಪರಿಶಿಷ್ಟ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದ ಅವರು, ನಮ್ಮ ಸಮುದಾಯ ಬಿಜೆಪಿಗೆ ಬೆಂಬಲ ಸೂಚಿಸಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಆಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹು-ಧಾ ಮಹಾನಗರವನ್ನು ಸುಂದರವಾಗಿ ಅಭಿವೃದ್ಧಿ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವಿರತವಾಗಿ ಶ್ರಮಿಸಿದ್ದಾರೆ. 

ಬೀದರ್ ಕ್ಷೇತ್ರ ಅಭಿವೃದ್ಧಿಯಲ್ಲಿ ಭಗವಂತ ಖೂಬಾ ವಿಫಲ: ಸಚಿವ ಈಶ್ವರ ಖಂಡ್ರೆ

ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲ ಸಮುದಾಯದವರ ಬಗ್ಗೆ ಅವರಿಗೆ ಕಾಳಜಿ ಇದೆ. ಹಾಗಾಗಿ ಎಲ್ಲರೂ ಅವರನ್ನು ಗೆಲ್ಲಿಸಬೇಕು ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವಾಲ್ಮಿಕಿ ಸಮಾಜ ನಿರಂತರವಾಗಿ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದೆ. ಮೋದಿ ಕೂಡ ಸಮಾಜಕ್ಕೆ ಆಭಾರಿಯಾಗಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗಿದೆ. ಪರಿಶಿಷ್ಟ ಪಂಗಡದವರ ಬಡತನ ನೀಗಿಸಲು ಹತ್ತಾರು ಯೋಜನೆ ಜಾರಿಗೊಳಿಸಲಾಗಿದೆ. ಬಡ ಮತ್ತು ಕಡುಬಡ ವರ್ಗದ ಜೀವನ ಮಟ್ಟ ಸುಧಾರಿಸಿ ಅವರನ್ನು ಮಧ್ಯಮವರ್ಗಕ್ಕೆ ತರುವುದೇ ಮೋದಿ ಕನಸು. ಅದಕ್ಕಾಗಿ ಎಲ್ಲರೂ ಬಿಜೆಪಿಗೆ ಬೆಂಬಲಿಸಬೇಕು ಎಂದು ಕರೆ ನೀಡಿದರು.

click me!