ಸಂಸತ್‌ ಚುನಾವಣೆ ವೇಳೆ ಅಕ್ರಮ ಆರೋಪ : ರಾಹುಲ್‌ಗೆ ತಿರುಗುಬಾಣ

Kannadaprabha News   | Kannada Prabha
Published : Aug 10, 2025, 05:40 AM IST
rahul gandhi

ಸಾರಾಂಶ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಸತ್‌ ಚುನಾವಣೆ ವೇಳೆ ಅಕ್ರಮಗಳು ಆಗಿವೆ ಎಂಬ ರಾಹುಲ್‌ ಗಾಂಧಿ ಅವರ ಅನೇಕ ಆರೋಪಗಳಿಗೆ ಸ್ಥಳೀಯರು ತಿರುಗೇಟು ಕೊಟ್ಟಿದ್ದಾರೆ. ರಿಯಾಲಿಟಿ ಚೆಕ್‌ ವೇಳೆ ರಾಹುಲ್‌ ಆರೋಪ ಸುಳ್ಳು ಎಂದು ಹಲವರು ಹೇಳಿದ್ದಾರೆ.

ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಸತ್‌ ಚುನಾವಣೆ ವೇಳೆ ಅಕ್ರಮಗಳು ಆಗಿವೆ. ಒಂದೇ ವಿಳಾಸದಲ್ಲಿ ಹಲವು ಮತದಾರರು ಇದ್ದಾರೆ, ಗುರುತಿನ ಚೀಟಿ ಹೊಂದಿದ್ದಾರೆ, ಒಬ್ಬನೇ ವ್ಯಕ್ತಿ ಹಲವೆಡೆ ಮತ ಹಕ್ಕು ಹೊಂದಿದ್ದಾನೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಅನೇಕ ಆರೋಪಗಳಿಗೆ ಸ್ಥಳೀಯರು ತಿರುಗೇಟು ಕೊಟ್ಟಿದ್ದಾರೆ. ರಿಯಾಲಿಟಿ ಚೆಕ್‌ ವೇಳೆ ರಾಹುಲ್‌ ಆರೋಪ ಸುಳ್ಳು ಎಂದು ಹಲವರು ಹೇಳಿದ್ದಾರೆ.

ರಾಹುಲ್‌ ಆರೋಪ: ಮಹದೇವಪುರದ ಮುನಿರೆಡ್ಡಿ ಗಾರ್ಡನ್‌ನಲ್ಲಿರುವ ಮನೆ ನಂಬರ್‌ 35ರಲ್ಲಿ 80 ಜನರಿದ್ದು, ಅವರು ಮತ ಹಾಕಿದ್ದಾರೆ.

ಮನೆ ಮಾಲೀಕ: ಪಿತ್ರಾರ್ಜಿತವಾಗಿ ಬಂದ ಹೊಲದಲ್ಲಿ ಮನೆ ಇದೆ. ದೊಡ್ಡ ಆಸ್ತಿ ಕಾರಣ ಒಂದೇ ಸರ್ವೇ ನಂಬರ್ ಇದೆ. ಹಾಗಂತ ಇದು ಒಂದೇ ಮನೆಯಲ್ಲ.

ರಾಹುಲ್‌ ಆರೋಪ: 100 ಚದರಡಿಯ ಮನೆಯಲ್ಲಿ 80 ಜನರು ಮತದಾರರಾಗಿದ್ದಾರೆ.

ಮನೆ ಬಾಡಿಗೆದಾರ: ಸರ್ವೇ ನಂಬರ್‌ 35ರಲ್ಲಿ ಒಂದು ಪುಟ್ಟ ಮನೆ ಬಾಡಿಗೆ ಪಡೆದಿದ್ದೇವೆ. ನಾನು ನಡೆಸುವ ಹೋಟೆಲ್‌ನ ಕಾರ್ಮಿಕರು ಅದರಲ್ಲಿ ನೆಲೆಸಿದ್ದಾರೆ. 80 ಜನರು ಅಲ್ಲಿ ಇಲ್ಲ. ಅನೇಕ ವರ್ಷಗಳಿಂದ ಹಲವರು ಬಂದು ಹೋಗಿದ್ದಾರೆ.

ರಾಹುಲ್‌ ಆರೋಪ: ಒಂದೇ ವಿಳಾಸದಲ್ಲಿ 65 ಜನ ಮತದಾರರು ಇದ್ದಾರೆ.

ಸ್ಥಳೀಯರು: 65 ಜನರಿದ್ದಾರೆ ಎಂದು ಹೇಳಲಾದ ಸ್ಥಳ ‘ದಿ 153 ಬಿಯರ್‌ ಸ್ಟ್ರೀಟ್‌’ ಹೆಸರಿನ ಕ್ಲಬ್‌. ಹಲವು ವರ್ಷಗಳಿಂದ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿರಬಹುದು. ಹಲವರು ಈಗ ಅಲ್ಲಿಲ್ಲ.

ರಾಹುಲ್‌ ಆರೋಪ: ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ವಿಶಾಲ್‌ ಸಿಂಗ್‌ ಬೇರೆ ಬೇರೆ ಕಡೆ ಮತದಾರರಾಗಿದ್ದಾರೆ.

ಅಪಾರ್ಟ್‌ಮೆಂಟ್‌ ಅಧ್ಯಕ್ಷ: ಹಿಂದೆ ಬೇರೆ ವಿಳಾಸದಲ್ಲಿದ್ದರು. ಇಲ್ಲಿಗೆ ಬಂದಾಗ ಹೊಸದಾಗಿ ಹೆಸರು ಸೇರಿಸಿದರು. 10 ವರ್ಷದಲ್ಲಿ ಒಮ್ಮೆ ಮಾತ್ರ ವಿಶಾಲ್‌ ಮತದಾನ ಮಾಡಿದ್ದಾರೆ.

ಅಫಿಡವಿಟ್ ಕೊಡಿ, ಇಲ್ಲವೇಕ್ಷಮೆ ಕೇಳಿ: ಚು. ಆಯೋಗ ರಾಹುಲ್‌ ಗಾಂಧಿ ಅವರು ತಾವು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು. ಇಲ್ಲವೇ ಸುಳ್ಳು ಆರೋಪ ಸಂಬಂಧ ದೇಶದ ಮುಂದೆ ಕ್ಷಮೆ ಕೇಳಬೇಕು.

- ಕೇಂದ್ರ ಚುನಾವಣಾ ಆಯೋಗ

ರಾಹುಲ್‌, ಸಿಎಂ ಸಿದ್ದುರಾಜೀನಾಮೆ ನೀಡಲಿಮತಗಳ್ಳತನದ ಆರೋಪ ಮಾಡಿರುವ ರಾಹುಲ್ ಗಾಂಧಿ ಅವರಿಗೆ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ, ಕನಿಷ್ಠ ನೈತಿಕತೆಯ ಆಧಾರದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದೇ ರೀತಿಯ ಆರೋಪ ಮಾಡಿರುವ ಕರ್ನಾಟಕ ಸಿಎಂ ಕೂಡ ತ್ಯಾಗಪತ್ರ ಸಲ್ಲಿಸಬೇಕು.

ಕೇಂದ್ರ ಬಿಜೆಪಿ

ಕಾನೂನು ಇಲಾಖೆ ಮೂಲಕ ಪರಿಶೀಲನೆ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ರಾಜ್ಯ ಕಾನೂನು ಇಲಾಖೆ ಪರಿಶೀಲನೆ ನಡೆಸಲಿದೆ. ಅದು ನೀಡುವ ಶಿಫಾರಸ್ಸಿನ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಹುಲ್‌ ದಿಲ್ಲಿಯಲ್ಲೇದೂರು ಕೊಡುತ್ತಾರೆಮತಗಳ್ಳತನ ಕುರಿತು ರಾಹುಲ್‌ ಗಾಂಧಿ ಅವರು ರಾಜ್ಯ ಆಯೋಗಕ್ಕೆ ದೂರು ಕೊಟ್ಟರೆ ಅವರು ಕ್ರಮ ಕೈಗೊಳ್ಳುವುದಿಲ್ಲ. ಕೇಂದ್ರಕ್ಕೆ ಕಳುಹಿಸುತ್ತಾರೆ. ಹೀಗಾಗಿ ರಾಹುಲ್ ಅವರು ವಿಪಕ್ಷ ನಾಯಕರಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೆಹಲಿಯಲ್ಲಿ ದೂರು ಕೊಡಲಿದ್ದಾರೆ.

- ಡಾ। ಜಿ. ಪರಮೇಶ್ವರ್‌ ಗೃಹ ಸಚಿವ

ರಾಹುಲ್‌ ಆರೋಪ: ಮಹದೇವಪುರದಲ್ಲಿ ಒಂದು ಮನೆಯಿಂದ 65, ಮತ್ತೊಂದು ಮನೆಯಿಂದ 80 ಜನರು ಮತದಾನ ಮಾಡಿದ್ದಾರೆ. ಇದು ಹೇಗೆ ಸಾಧ್ಯ?ಆಸ್ತಿ ಮಾಲೀಕರು: ನಮ್ಮ ಮನೆ ವಿಳಾಸದಲ್ಲಿ ವಾಸವಿದ್ದ ಹಲವರು ಅನೇಕ ವರ್ಷಗಳ ಅವಧಿಯಲ್ಲಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿರಬಹುದು. ಒಂದೇ ಸಲ ಅಷ್ಟು ಜನ ಮತದಾನ ಮಾಡಲು ಸಾಧ್ಯವೇ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!