ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಿಸಲು ಮದ್ಯಕ್ಕೆ ತೆರಿಗೆ?

By Kannadaprabha NewsFirst Published Jun 8, 2023, 9:06 AM IST
Highlights

ರಾಜ್ಯ ಸರ್ಕಾರ ಶೀಘ್ರವೇ ಸರ್ಕಾರ ಮದ್ಯದ ಮೇಲಿನ ಸುಂಕ ಶೇ. 10ರಿಂದ ಶೇ. 15ರವರೆಗೆ ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ಬಿಯರ್‌ ಸೇರಿ ಹಾರ್ಡ್‌ ಡ್ರಿಂಕ್ಸ್‌ಗಳ ಮೇಲಿನ ದರ ಹೆಚ್ಚಳವಾಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.

ಬೆಂಗಳೂರು (ಜೂ.08): ರಾಜ್ಯ ಸರ್ಕಾರ ಶೀಘ್ರವೇ ಸರ್ಕಾರ ಮದ್ಯದ ಮೇಲಿನ ಸುಂಕ ಶೇ. 10ರಿಂದ ಶೇ. 15ರವರೆಗೆ ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ಬಿಯರ್‌ ಸೇರಿ ಹಾರ್ಡ್‌ ಡ್ರಿಂಕ್ಸ್‌ಗಳ ಮೇಲಿನ ದರ ಹೆಚ್ಚಳವಾಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಸರ್ಕಾರ ಶೀಘ್ರ ಮದ್ಯದ ಬೆಲೆ ಏರಿಸಲು ಯೋಚಿಸಿದೆ. ಬಜೆಟ್‌ ವೇಳೆ ಈ ಕುರಿತ ಆದೇಶ ಹೊರಬೀಳುವ ಸಾಧ್ಯತೆಯೂ ಹೆಚ್ಚಿದೆ.

ಅಬಕಾರಿ ಇಲಾಖೆ ಸಾಮಾನ್ಯವಾಗಿ ಮದ್ಯ, ವೈನ್‌ ಮಾರಾಟದಿಂದ ಸಂಗ್ರಹವಾಗುವ ಅಬಕಾರಿ ಸುಂಕ, ಮದ್ಯ ಉತ್ಪಾದನಾ ಘಟಕ ಹಾಗೂ ಚಿಲ್ಲರೆ ಮದ್ಯ ಮಾರಾಟ ಸನ್ನದುಗಳ ಮೇಲಿನ ಶುಲ್ಕದ ಮೂಲಕ ಆದಾಯ ಗಳಿಸುತ್ತದೆ. ಈ ಹಿಂದೆ 2020ರ ಮೇ ತಿಂಗಳಲ್ಲಿ ಮದ್ಯದ ದರ ಹೆಚ್ಚಳವಾಗಿತ್ತು.

ಜಾತಿ ಗಣತಿ ವರದಿ ಅಂಗೀಕರಿಸಿ ಮೀಸಲಾತಿ ಗೊಂದಲಕ್ಕೆ ತೆರೆ: ಸಿಎಂ ಸಿದ್ದರಾಮಯ್ಯ ಭರವಸೆ

ಈ ಬಗ್ಗೆ ಮಾತನಾಡಿದ ಫೆಡರೇಶನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ, ಮದ್ಯದ ದರ ಶೇ. 15ರಷ್ಟು ಏರಿಕೆಯಾಗುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಯಾವುದೂ ಸ್ಪಷ್ಟವಾಗಿಲ್ಲ. ಈವರೆಗೆ ಸರ್ಕಾರ ಅಸೋಸಿಯೇಶನ್‌ ಜೊತೆಗೆ ಮಾತನಾಡಿಲ್ಲ. ಈಗಾಗಲೇ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮದ್ಯದ ಬೆಲೆ ವಿಪರೀತವಾಗಿದೆ. ಈಗ ಮತ್ತಷ್ಟು ಹೆಚ್ಚಿಸಿದರೆ ಇದು ಮಧ್ಯಮ ವರ್ಗದ ಜನತೆ ಮೇಲೆ ಪರಿಣಾಮ ಬೀರಲಿದೆ ಎಂದರು.

ಎಷ್ಟು ದುಬಾರಿ ಸಾಧ್ಯತೆ?: ಸುಂಕ ಹೆಚ್ಚಳವಾದರೆ ಬಿಯರ್‌ ದರಗಳಲ್ಲಿ ಏರಿಕೆಯಾಗಲಿದೆ. ಪ್ರತಿ ಬಾಟಲ್‌ ಮೇಲೆ 10ರಿಂದ 20 ಹೆಚ್ಚಳವಾಗುವ ಸಾಧ್ಯತೆಯಿದೆ. ಬಡ್‌ವೈಸರ್‌ ಬಿಯರ್‌ ದರ 198ರಿಂದ 220ಕ್ಕೆ, ಯುಬಿ ಬಿಯರ್‌ 125 ನಿಂದ 135, ಸ್ಟ್ರಾಂಗ್‌ 130-135, ಕಿಂಗ್‌ಫಿಶರ್‌ ಬಿಯರ್‌ ದರ 160​- 170ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮದ್ಯ ಮಾರಾಟಗಾರ ಸಂಘ ತಿಳಿಸಿದೆ.

ಉಚಿತ ವಿದ್ಯುತ್‌ಗೆ ರಾಜ್ಯದ 2.14 ಕೋಟಿ ಸಂಪರ್ಕಗಳು ಅರ್ಹ: ಸಚಿವ ಕೆ.ಜೆ.ಜಾರ್ಜ್‌

ಮದ್ಯದ ದರ ಹೆಚ್ಚಳವಾದರೆ ಮಧ್ಯಮ ವರ್ಗದವರಿಗೆ ಹೆಚ್ಚು ಹೊಡೆತ ಬೀಳಲಿದೆ. ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಧೋರಣೆ ಇದು.
- ಲೋಕೇಶ್‌ ಕಲ್ಲಿಪಾಳ್ಯ, ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ

click me!