ಬಿಜೆಪಿಗೆ ಲಿಂಗಾಯತರ ತಕ್ಕ ಶಾಸ್ತಿ: ಜಗದೀಶ್‌ ಶೆಟ್ಟರ್‌

By Kannadaprabha NewsFirst Published May 17, 2023, 7:00 AM IST
Highlights

ಬಿಎಸ್‌ವೈರನ್ನು ಸೈಡ್‌ಲೈನ್‌ ಮಾಡಿ ಕಣ್ಣೀರು ಹಾಕಿಸಿದರು, ನನ್ನನ್ನು ಸೇರಿ ಅನೇಕರನ್ನು ಅಗೌರವದಿಂದ ನಡೆಸಿಕೊಂಡರು, ಲಿಂಗಾಯತರಿಗೆ ಬಿಜೆಪಿ ಮೇಲೆ ನಂಬಿಕೆ ಹೋಗಿದೆ, ಹೀಗಾಗೇ ಬಿಜೆಪಿಗೆ ಹೀನಾಯ ಸೋಲು: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ 

ಬೆಂಗಳೂರು(ಮೇ.17):  ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಸೈಡ್‌ಲೈನ್‌ ಮಾಡಿ ಅವರು ಕಣ್ಣೀರು ಹಾಕಿ ರಾಜೀನಾಮೆ ಕೊಡುವಂತೆ ಮಾಡಿದರು. ತಮ್ಮನ್ನೂ ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು ಅ ಗೌರವದಿಂದ ನಡೆದುಕೊಂಡ ಅದರ ಪರಿಣಾಮ ಲಿಂಗಾಯತ ಮತಗಳು ಕಾಂಗ್ರೆಸ್‌ನತ್ತ ವರ್ಗಾವಣೆಯಾಗಿ ಬಿಜೆಪಿ ಹೀನಾಯವಾಗಿ ಸೋಲುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನಮ್ಮನ್ನೆಲ್ಲಾ ಕೆಟ್ಟದಾಗಿ ನಡೆಸಿಕೊಂಡಿತು.ಕಾಂಗ್ರೆಸ್‌ಗೆ ಹೋದ ನನ್ನನ್ನು ಸೋಲಿಸಲು ಪ್ರಯತ್ನಿಸಿ ಇಡೀ ರಾಜ್ಯದಲ್ಲೇ ಸೋತು ಹೋಯಿತು. ಲಿಂಗಾಯತ ನಾಯಕರನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಬಿಜೆಪಿ ಮೇಲೆ ಲಿಂಗಾಯತರಿಗೆ ನಂಬಿಕೆ ಹೋಗಿದೆ. ಈಗಲಾದರೂ ಯಡಿಯೂರಪ್ಪ ಅವರನ್ನು ಯಾಕೆ ಇಳಿಸಿದರು ಎಂಬುದಕ್ಕೆ ಉತ್ತರ ಕೊಡಲಿ’ ಎಂದು ಸವಾಲು ಹಾಕಿದರು.

Latest Videos

Dharwad Constituency Results 2023: ಸೋಲು ಮರೆತು, ಲೋಕಸಭೆ ಚುನಾವಣೆಗೆ ಶೆಟ್ಟರ್‌ ತಯಾರಿ?

ತಮ್ಮ ಸ್ವಾರ್ಥಕ್ಕಾಗಿ ಮಾಜಿ ಮುಖ್ಯಮಂತ್ರಿ ಎಂಬ ಗೌರವವೂ ಇಲ್ಲದೆ ತಮಗೆ ಏಕಾಏಕಿ ಟಿಕೆಟ್‌ ನಿರಾಕರಿಸಲಾಯಿತು. ತಾವು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಕ್ಕೆ ಇನ್ನಿಲ್ಲದ ಕಿರಿಕಿರಿ ಮಾಡಿದರು. ತಮ್ಮನ್ನು ಸೋಲಿಸಲು ಕೇಂದ್ರ ಗೃಹ ಸಚಿವ ಸೇರಿದಂತೆ ಅನೇಕ ನಾಯಕರು ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು. ಕೊನೆಗೂ ಹಣಬಲ, ಮತ್ತಿತರ ಕುತಂತ್ರಗಳಿಂದ ಸೋಲಿಸಿದರು. ಆದರೆ ಉತ್ತರ ಕರ್ನಾಟಕದ ಅನೇಕ ಕಡೆ ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಶಿಫ್‌್ಟಆಗಿವೆ. ಕಾಂಗ್ರೆಸ್‌ ಪಕ್ಷ ಪಡೆದಿರುವ ಸ್ಥಾನಗಳಿಂದಾಗಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.

ಲಿಂಗಾಯತರಿಗೆ ಬಿಜೆಪಿ ಮೇಲೆ ನಂಬಿಕೆ ಹೋಗಿದೆ:

‘ಬಿ.ಎಸ್‌. ಯಡಿಯೂರಪ್ಪ, ಲಕ್ಷ್ಮಣ ಸವದಿ, ಯು.ಬಿ. ಬಣಕಾರ್‌ ಹೀಗಾಗಿ ಅನೇಕ ಲಿಂಗಾಯತ ನಾಯಕರನ್ನು ಬಿಜೆಪಿಯವರು ಕೈಬಿಟ್ಟರು. ಯಾರನ್ನೂ ಸಮಾಧಾನ ಮಾಡುವ ಕೆಲಸವನ್ನೂ ಮಾಡಲಿಲ್ಲ. ಹೀಗಾಗಿ ನಾನು, ಸವದಿ, ಬಣಕಾರ್‌ ಸೇರಿ ಹಲವರು ಕಾಂಗ್ರೆಸ್‌ ಸೇರಿದೆವು. ಲಿಂಗಾಯತರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದ ಪರಿಣಾಮ ಬಿಜೆಪಿ ಮೇಲೆ ಲಿಂಗಾಯತರಿಗೆ ಇದ್ದ ನಂಬಿಕೆ ಹೋಗಿದೆ. ಅದು ಈ ಚುನಾವಣೆ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ’ ಎಂದರು.

ಯಾಕ್‌ ಚಿಂತಿ ಮಾಡ್ತೀರಿ ಸರ್ಕಾರ ನಮ್ದ ಐತಿ: ಸೋಲಿನ ಬಳಿಕ ಅಭಿಮಾನಿಗಳಿಗೆ ಶೆಟ್ಟರ್ ಮಾತು

ಯಡಿಯೂರಪ್ಪರನ್ನು ಇಳಿಸಬಾರದಿತ್ತು:

‘ಪ್ರಯೋಗಗಳ ನೆಪದಲ್ಲಿ ಯಾರ ನಾಯಕತ್ವ ಯಾರಿಗೆ ಕೊಡುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಬಾರದಿತ್ತು. ಯಾಕೆ ಯಡಿಯೂರಪ್ಪ ಅವರನ್ನು ಇಳಿಸಿದರು ಎಂಬ ಆಗಲೇ ನಾನು ಕೇಂದ್ರ ನಾಯಕರಿಗೂ ಪ್ರಶ್ನೆ ಮಾಡಿದ್ದೆ. ಆದರೆ ಅವರು ಸ್ಪಷ್ಟಕಾರಣ ನೀಡಲೇ ಇಲ್ಲ. ಈಗಲಾದರೂ ಬಿಜೆಪಿ ಹೈಕಮಾಂಡ್‌ ಈ ಬಗ್ಗೆ ಉತ್ತರಿಸಲಿ’ ಎಂದರು.

ಕಾಂಗ್ರೆಸ್‌ ಗೌರವದಿಂದ ನಡೆಸಿಕೊಳ್ಳಲಿದೆ

ಕಾಂಗ್ರೆಸ್‌ ಪಕ್ಷ ನನ್ನನ್ನು ಗೌರವದಿಂದ ನಡೆಸಿಕೊಳ್ಳಲಿದೆ. ನಾನು ಸಚಿವ ಸ್ಥಾನ ಬೇಕು ಎಂದು ಕೇಳುವವನಲ್ಲ. ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ನನ್ನ ಬಳಿ ಬಂದು ನೀವು ಸೋತಿದ್ದರೂ ನಿಮ್ಮಿಂದ ಪಕ್ಷಕ್ಕೆ ಸಾಕಷ್ಟುಅನುಕೂಲವಾಗಿದೆ. ನಿಮ್ಮನ್ನು ಪಕ್ಷ ಗೌರವದಿಂದ ನಡೆಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಗೌರವದಿಂದ ನಡೆಸಿಕೊಳ್ಳುವ ವಿಶ್ವಾಸವಿದೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

click me!