ಸುಳ್ಳು, ಭ್ರಷ್ಟಾಚಾರ ಹೊಳಲ್ಕೆರೆ ಬಿಜೆಪಿ ಶಾಸಕರ ಮನೆದೇವರು; ಮಾಜಿ ಸಚಿವ ಆಂಜನೇಯ ವಾಗ್ದಾಳಿ

By Ravi Janekal  |  First Published Apr 13, 2023, 4:00 PM IST

ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿರುವ ಶಾಸಕ ಎಂ.ಚಂದ್ರಪ್ಪ, ಕಾಂಗ್ರೆಸ್ ಅವಧಿ ಕೆಲಸಗಳನ್ನು ಉದ್ಘಾಟಿಸಿರುವುದೇ ಅವರ ಸಾಧನೆ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ವ್ಯಂಗ್ಯವಾಡಿದರು.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಏ.13) : ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿರುವ ಶಾಸಕ ಎಂ.ಚಂದ್ರಪ್ಪ, ಕಾಂಗ್ರೆಸ್ ಅವಧಿ ಕೆಲಸಗಳನ್ನು ಉದ್ಘಾಟಿಸಿರುವುದೇ ಅವರ ಸಾಧನೆ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ವ್ಯಂಗ್ಯವಾಡಿದರು. 

Latest Videos

undefined

ತಾಲೂಕಿನ ಶಿವಗಂಗಾ ಸೇರಿದಂತೆ ಗೊಲ್ಲರಹಳ್ಳಿ, ದಾಸಯ್ಯನಹಟ್ಟಿ, ಮದ್ದೇರು, ತಾಳ್ಯ, ನೇರಲಕಟ್ಟೆ, ಘಟ್ಟಿಹೊಸಹಳ್ಳಿ ವಿವಿಧ ಗ್ರಾಮಗಳಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮತಪ್ರಚಾರದಲ್ಲಿ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ಮಾತನಾಡಿದರು,

ದಾವಣಗೆರೆ ಉತ್ತರ ದಕ್ಷಿಣ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ: ಹಾಲಿ ಶಾಸಕರಿಗೆ ಶಾಕ್ ನೀಡಿ ಬಿಜೆಪಿ ಹೈಕಮಾಂಡ್!

ಒಂದು ಅಭಿವೃದ್ಧಿ ಕೆಲಸ ಮಾಡದ ಕ್ಷೇತ್ರದ ಶಾಸಕರು, ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಜೊತೆಗ ಕಾಂಗ್ರೆಸ್ ಅವಧಿಯಲ್ಲಿ ನಾನು ಅನುದಾನ ತಂದು ಕೈಗೊಂಡಿದ್ದ ಕೆಲಸಗಳನ್ನು ಉದ್ಘಾಟಿಸಿ, ಇವೆಲ್ಲವೂ ನನ್ನ ಅವಧಿ ಕೆಲಸ ಎಂದು ಹೇಳುತ್ತಿದ್ದಾರೆ ಎಂದು ದೂರಿದರು. ಶಾಸಕರ ವರ್ತನೆ, ಮಾತು ಗಮನಿಸಿದರೆ ಸುಳ್ಳು ಮತ್ತು ಭ್ರಷ್ಟಚಾರವನ್ನೇ ಅವರು ತಮ್ಮ ಮನೆ ದೇವರು ಮಾಡಿಕೊಂಡಂತೆ ಕಾಣುತ್ತದೆ. ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದೀರಾ, ಎಷ್ಡು ಕೆರೆ ಹೂಳೆತ್ತಲಾಗಿದೆ ಎಂಬ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಸಮಾಜಕಲ್ಯಾಣ ಸಚಿವನಾಗಿದ್ದ ಸಂದರ್ಭ ಕ್ಷೇತ್ರದಲ್ಲಿ ಸಾವಿರಾರು ಕೊಳವೆಬಾವಿ ಎಲ್ಲ ವರ್ಗದ ಜನರಿಗೆ ಕೊರೆಯಿಸಿಕೊಟ್ಟಿದ್ದೇನೆ. ಪ್ರತಿ ಹಳ್ಳಿಗಳ ರಸ್ತೆ ಅಭಿವೃದ್ಧಿ ಜೊತೆಗೆ ಮುಖ್ಯವಾಗಿ ಶೈಕ್ಷಣಿಜ ಪ್ರಗತಿಗೆ ಆದ್ಯತೆ ನೀಡಿದ್ದೇ. ಚಿತ್ರಹಳ್ಳಿ, ಮಲ್ಲಾಡಿಹಳ್ಳಿ, ರಾಮಗಿರಿ ಬಳಿ ನಿರ್ಮಾಣಗೊಂಡಿರುವ ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳು ನನ್ನ ಅವಧಿ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿ.ಇಂತಹ ಒಂದು ಕೆಲಸ ಮಾಡದ ಶಾಸಕರು, ಕ್ಷೆತ್ರದಲ್ಲಿ ದ್ವೇಷ, ಜಾತಿ ವೈಷಮ್ಯ, ಗಲಭೆ, ರೌಡಿಸಂ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಇದರಿಂದ ಜನ ಭಯಭೀತರಾಗಿದ್ದು, ತಕ್ಕಪಾಠ ಕಲಿಸಲು ಮತದಾನ ದಿನಕ್ಕೆ ಕಾಯುತ್ತಿದ್ದಾರೆ ಎಂದರು.

ಹೈಕಮಾಂಡ್‌ ಭೇಟಿಯಾದ್ರೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಸಿಗದ ಟಿಕೆಟ್‌! ಮುಂದೇನು?

ಶಿವಗಂಗಾ ಸೇರಿದಂತೆ ವಿವಿಧೆಡೆ ಆಂಜನೇಯ ಅವರನ್ನು ತಮ್ಮೂರಿಗೆ ಸ್ವಾಗತಿಸಲು ಸಹಸ್ರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಕೆಲವೆಡೆ ಬೃಹತ್ ಸೇಬು ಸೇರಿ ವಿವಿಧ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಗೊಲ್ಲ ಸಮುದಾಯ ಸೇರಿ ವಿವಿಧ ಜಾತಿ ಮಹಿಳೆಯರು ಆರತಿ ಎತ್ತುವ ಮೂಲಕ ಆಂಜನೇಯ ಅವರಿಗೆ ಶುಭಕೋರಿ ಗಮನ ಸೆಳೆದರು. ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಸದಸ್ಯ ಜಿಪಂ ಮಾಜಿ ಉಪಾಧ್ಯಕ್ಷ SML ತಿಪ್ಪೇಸ್ವಾಮಿ, ಜಿಲ್ಲಾ ಪ್ರಚಾರ ಕಾಂಗ್ರೆಸ್ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಟಿ.ಹನುಮಂತಪ್ಪ ಉಪಸ್ಥಿತರಿದ್ದರು..

click me!