ಜಿಲ್ಲೆಯ ಏಳು ಮತ ಕ್ಷೇತ್ರಗಳ ಪೈಕಿ ಮೊದಲನೇಯ ಪಟ್ಟಿಯಲ್ಲಿ ಹೊನ್ನಾಳಿ, ಹರಿಹರ, ಹಾಗು ಜಗಳೂರು ಕ್ಷೇತ್ರಗಳಿಗೆ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇಂದು ಅಚ್ಚರಿಯಂತೆ ಎರಡನೇ ಪಟ್ಟಿಯಲ್ಲಿ ಬಿಜೆಪಿ ಹೈಕಮಾಂಡ್ ಉಳಿದ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿ ಹಾಲಿ ಶಾಸಕರಿಗೆ ಶಾಕ್ ನೀಡಿದೆ.
ವರದಿ : ವರದರಾಜ್
ದಾವಣಗೆರೆ ( ಏ.13) ಜಿಲ್ಲೆಯ ಏಳು ಮತ ಕ್ಷೇತ್ರಗಳ ಪೈಕಿ ಮೊದಲನೇಯ ಪಟ್ಟಿಯಲ್ಲಿ ಹೊನ್ನಾಳಿ, ಹರಿಹರ, ಹಾಗು ಜಗಳೂರು ಕ್ಷೇತ್ರಗಳಿಗೆ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇಂದು ಅಚ್ಚರಿಯಂತೆ ಎರಡನೇ ಪಟ್ಟಿಯಲ್ಲಿ ಬಿಜೆಪಿ ಹೈಕಮಾಂಡ್ ಉಳಿದ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿ ಹಾಲಿ ಶಾಸಕರಿಗೆ ಶಾಕ್ ನೀಡಿದೆ.
ಎರಡನೇ ಪಟ್ಟಿಯಲ್ಲಿ ಬಿಜೆಪಿ(Karnataka BJP)ಯಿಂದ ದಾವಣಗೆರೆ ದಕ್ಷಿಣಕ್ಕೆ ಮಾಜಿ ಮೇಯರ್ ಬಿಜಿ ಅಜಯ್ ಕುಮಾರ್(BG Ajay kumar) ಹೊಸ ಮುಖಕ್ಕೆ ಮಣೆ ಹಾಕಿದ್ದು, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್(SA Raveendranath) ಬದಲಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್(Lokikere nagaraj) ಹೊಸ ಮುಖಕ್ಕೆ ಟಿಕೆಟ್ ನೀಡಿ ಹಾಲಿ ಶಾಸಕ ಎಸ್ ರವೀಂದ್ರನಾಥ್ ರವರಿಗೆ ಶಾಕ್ ನೀಡಿದೆ.
ಬಾಗಲಕೋಟೆ: ಬೀಳಗಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಚಿವ ಮುರುಗೇಶ್ ನಿರಾಣಿ
ಇನ್ನು ಚನ್ನಗಿರಿ ವಿಧಾನಸಭಾ ಕ್ಷೇತ್ರ(Channagiri assembly constituency)ದಲ್ಲಿ ಅಚ್ಚರಿ ಎಂತೆ ಮಾಡಾಳ್ ವಿರೂಪಾಕ್ಷಪ್ಪನವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದ್ರೇ ಮಾಡಾಳ್ ವಿರೂಪಾಕ್ಷಪ್ಪ ಇಲ್ಲ ಅವರ ಪುತ್ರ ಮಲ್ಲಿಕಾರ್ಜುನ್ ಗೆ ಟಿಕೆಟ್ ನೀಡುವ ಬದಲು ಮಾಜಿ ತುಮ್ಕೋಸ್ ಅಧ್ಯಕ್ಷ ಹೆಚ್ ಎಸ್ ಶಿವಕುಮಾರ್ ರವರಿಗೆ ಟಿಕೆಟ್ ನೀಡಿದ್ದರಿಂದ ಮಾಡಾಳ್ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದೆ. ಇನ್ನು ಮಾಯಕೊಂಡ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರೋ ಲಿಂಗಣ್ಣನವರಿಗು ಟಿಕೆಟ್ ತಪ್ಪಿದ್ದು ಇವರ ಬದಲಿಗೆ ಮಾಜಿ ಶಾಸಕ ಬಸವರಾಜ್ ನಾಯ್ಕ್ ಗೆ ಟಿಕೆಟ್ ನೀಡಿ ಆಕಾಂಕ್ಷಿಗಳಿಗೆ ಟಕ್ಕರ್ ನೀಡಿದೆ.
ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ರಣತಂತ್ರದಲ್ಲಿ ಬದಲಾವಣೆ
ನಾಲ್ಕು ಮತ ಕ್ಷೇತ್ರಗಳನ್ನು ಪ್ರಮುಖವಾಗಿ ಗಮನಿಸುದಾದ್ರೆ ಇಲ್ಲಿ ದಾವಣಗೆರೆ ಉತ್ತರದಲ್ಲಿ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ವಿರುದ್ಧ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್ ಬದಲಿಗೆ ಹೊಸ ಮುಖ ಲೋಕಿಕೆರೆ ನಾಗರಾಜ್ ಗೆ ಮಣೆ ಹಾಕಿ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ವಿರುದ್ಧ ಲಿಂಗಾಯತ ಅಸ್ತ್ರ ಝಳಪಿಸಲಾಗಿದೆ. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನವರನ್ನು ಕಟ್ಟಿಹಾಕಲು ಅವರ ವಿರುದ್ಧ ಪಂಚಮಸಾಲಿ ಸಮುದಾಯದ ಮಾಜಿ ಮೇಯರ್ ಬಿಜಿ ಅಜಯ್ ಕುಮಾರ್ ರವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣ ಹಾಗು ಉತ್ತರದಲ್ಲಿ ಬಹುತೇಕ ಹೊಸಮುಖಗಳಿ ಬಿಜೆಪಿ ಮಣೆ ಹಾಕಿದೆ. ಇನ್ನು ಚನ್ನಗಿರಿ ಹೆಚ್ ಎಸ್ ಶಿವಕುಮಾರ್ ರವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಮಾಡಾಳ್ ಮಲ್ಲಿಕಾರ್ಜುನ್ ಟಿಕೆಟ್ ವಂಚಿತರಾಗಿದ್ದಾರೆ. ಮಾಯಕೊಂಡ ಕ್ಷೇತ್ರದಲ್ಲಿ
2008 ರಲ್ಲಿ ಶಾಸಕರಾಗಿದ್ದಾ ಬಸವರಾಜ್ ಮಾಯ್ಕ್ ಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು,
ಬಿಜೆಪಿಯಲ್ಲಿ ಬಂಡಾಯದ ಬೆಂಕಿ: ಸಿಎಂ ಬಸವರಾಜ್ ಬೊಮ್ಮಾಯಿ ಫಸ್ಟ್ ರಿಯಾಕ್ಷನ್
ಕಾಂಗ್ರೆಸ್ ನಿಂದ ದಾವಣಗೆರೆಯ ಮೂರು ಕ್ಷೇತ್ರಗಳು ಪೆಂಡಿಂಗ್
ದಾವಣಗೆರೆಯ ಬಹುತೇಕ ಏಳು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್ ಕಣಕ್ಕಿಳಿಸಿದ್ದು, ಇನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ದಾವಣಗೆರೆ ಉತ್ತರ ದಕ್ಷಿಣ ಹಾಗು ಮಾಯಕೊಂಡ, ಚನ್ನಗಿರಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಇನ್ನು ಮೂರು ಕ್ಷೇತ್ರಗಳಾದ ಹರಿಹರ, ಜಗಳೂರು, ಹೊನ್ನಾಳಿ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಗೌಪ್ಯತೆ ಕಾಪಾಡಿದೆ.