ರಾಜ್ಯ ಸರ್ಕಾರ ರೈತರ 2 ಲಕ್ಷ ರು.ಗಳವರೆಗೆ ಸಾಲ ಮನ್ನಾ ಮಾಡಲಿ: ಆರ್.ಅಶೋಕ್ ಒತ್ತಾಯ

By Kannadaprabha News  |  First Published Dec 2, 2023, 2:21 PM IST

ರಾಜ್ಯದಲ್ಲಿ ಬರಗಾಲ ಆವರಿಸಿದ್ದು, 223 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಕೂಡಲೆ ರಾಜ್ಯ ಸರ್ಕಾರ ರೈತರ ಎರಡು ಲಕ್ಷ ರು.ಗಳ ವರೆಗಿನ ಸಾಲ ಮನ್ನಾ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು. 


ಚಿಕ್ಕಬಳ್ಳಾಪುರ (ಡಿ.02): ರಾಜ್ಯದಲ್ಲಿ ಬರಗಾಲ ಆವರಿಸಿದ್ದು, 223 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಕೂಡಲೆ ರಾಜ್ಯ ಸರ್ಕಾರ ರೈತರ ಎರಡು ಲಕ್ಷ ರು.ಗಳ ವರೆಗಿನ ಸಾಲ ಮನ್ನಾ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು. ತಾಲೂಕಿನ ಮಂಡಿಕಲ್ ಹೋಬಳಿಯ ಪಾತೂರು ಮತ್ತು ಅಡಗಲ್ಲು ಗ್ರಾಮಗಳಲ್ಲಿ ಬರದಿಂದ ಬೆಳೆ ಹಾನಿಯಾಗಿರುವ ರೈತರ ಹೊಲಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಲ ಮನ್ನಾ ಮಾಡದಿದ್ದರೆ ಹೋರಾಟ: ಸಾಲ ಮನ್ನಾ ಮಾಡಲು ಬೆಳಗಾವಿ ಅಧಿವೇಶನದಲ್ಲೇ ಓತ್ತಾಯ ಮಾಡುತ್ತೇನೆ. ಬರ ಪರಿಹಾರದ ಜೊತೆಗೆ ಸಾಲ ಮನ್ನಾ ಮಾಡಿದಲ್ಲಿ ರಾಜ್ಯದ ರೈತರಿಗೆ ಅನುಕೂಲವಾಗುತ್ತದೆ. ಈ ಹಿಂದೆ ನಮ್ಮ ನಾಯಕರಾದ ಬಿ.ಎಸ್.ಯಡ್ಯೂರಪ್ಪ ಮತ್ತು ಜೆಡಿಎಸ್ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಸಹಾ ರೈತರ ಸಾಲ ಮನ್ನಾ ಮಾಡಿದ್ದರು. ಸಾಲ ಮನ್ನಾ ಮಾಡುವ ಕೆಲಸ ತಕ್ಷಣ ಆಗಬೇಕು ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನದಲ್ಲಿ ರೈತರ ಪರ ಧ್ವನಿ ಎತ್ತಿ ಪ್ರತಿಭಟಿಸಲಾಗುವುದು ಎಂದರು.

Tap to resize

Latest Videos

ದೇವೇಗೌಡರು ಜಿಲ್ಲಾ ರಾಜಕಾರಣಕ್ಕೆ ಮತ್ತೆ ಬಂದಲ್ಲಿ ಅವರ ಗೆಲುವಿಗೆ ಶ್ರಮಿಸುವೆ: ಪ್ರಜ್ವಲ್‌ ರೇವಣ್ಣ

ಬಿಜೆಪಿ ಹಾಗೂ ಜೆಡಿಎಸ್‌ ಜಂಟಿಯಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಯ ಬಗ್ಗೆ ಬೆಳಗಾವಿ ಅಧಿವೇಶನದಲ್ಲೇ ರಾಜ್ಯ ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಮಂಡಿಸುತ್ತೇವೆ. ಈಗಾಗಲೇ ನಾನು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ, ನಮ್ಮ ನಾಯಕರಾದ ಬಿ.ಎಸ್.ಯಡ್ಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಮಾಡಿದ್ದೇವೆಂದರು.

ಸರ್ಕಾರದ ಅರೆಬೆಂದ ಬರ ಸಮೀಕ್ಷೆ: ಮಂತ್ರಿಗಳು ಜನರು ಕೊಟ್ಟ ಅರ್ಜಿಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ಯಾವುದೇ ಉತ್ತರವಾಗಲಿ, ಪರಿಹಾರ ಒದಗುಸುತ್ತಿಲ್ಲ, ಇದರೊಂದಿಗೆ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರವು ಕೂಡಲೇ ರೈತರ ನೆರವಿಗೆ ಧಾವಿಸಿ ಬರ ಪರಿಹಾರ ನೀಡಬೇಕು. ರಾಜ್ಯದಲ್ಲಿ ಮಳೆ ಇಲ್ಲದೆ ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಮಾಡಿರುವ ಬರ ಸಮೀಕ್ಷೆ ಅರೆಬೆಂದ ಸಮೀಕ್ಷೆಯಾಗಿದೆ ಎಂದು ಟೀಕಿಸಿದರು.

ರಾಜ್ಯ ಮುಖ್ಯಮಂತ್ರಿಗಳಿಗೆ ರಾಜ್ಯದ ರೈತರ ಕಷ್ಟಕ್ಕಿಂತ ಬೇರೆ ರಾಜ್ಯಗಳ ಸುತ್ತಾಡೊದರಲ್ಲಿ ಕಾಲ ಕಳೆಯುತಿದ್ದಾರೆ. ಬರಗಾಲಕ್ಕೆ ಸಿಕ್ಕ ರೈತರು ಕಣ್ಣೀರು ಹಾಕಿತಿದ್ದರೆ ಇನ್ನೂ ಬಿಡಿಗಾಸು ಕೊಡದೆ ಕಾಲದೂಡುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಅಧಿವೇಶನದ ನೆಪದಲ್ಲಿ 2000 ರು. ಬರ ಪರಿಹಾರ ಕೊಡ್ತೀನಿ ಅಂತ ಸಿಎಂ ಹೇಳಿರೋದು ನಾಚಿಕೆಗೇಡಿನ ಸಂಗತಿ ಎಂದರು.

ರೈತರ ದೂರು ಆಲಿಸಿದ ಆಶೋಕ್‌: ಅಡಗಲ್ ಪಾತೂರು ಗ್ರಾಮದ ಕೃಷ್ಣಪ್ಪ ಎಂಬವರ ಜಮೀನಿನಲ್ಲಿನ ರಾಗಿ ಬೆಳೆಯ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ರೈತರಿಂದ ಬರ ಮತ್ತು ಬೆಳೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿದರು. ತೋಟಗಾರಿಕಾ ಬೆಳೆಗಳಿಗೆ ಬೋರ್‌ ವೆಲ್‌ ನಿಂದ ನೀರು ಹಾಯಿಸಲು 7 ಗಂಟೆ ಸಮರ್ಪಕ ವಿದ್ಯುತ್‌ ಪೋರೈಕೆಯ ಬಗ್ಗೆ ರೈತರ ದೂರುಗಳನ್ನು ಆಲಿಸಿದರು.

ಬಂಗಾರಪ್ಪರನ್ನ ನೆನೆಸಿಕೊಳ್ಳಿ: ರೈತರ ಪ್ರಶ್ನೆಗೆ ಗರಂ ಆದ ಸಂಸದ ಡಿ.ಕೆ.ಸುರೇಶ್

ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ. ಕೆ ಸುಧಾಕರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಶಿಡ್ಲಘಟ್ಟ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ. ರಾಜಣ್ಣ ನಗರಸಭಾ ಮಾಜಿ ಅಧ್ಯಕ್ಷ ಅನಂದಬಾಬುರೆಡ್ಡಿ, ಚಿಕ್ಕಬಳ್ಳಾಪುರ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ , ಕೃಷಿ ಜಂಟಿ ನಿರ್ಧೇಶಕಿ ಜಾವೀದಾ ನಸೀಮಾ ಖಾನಂ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಭಾರತೀಯ ಜನತಾ ಪಕ್ಷದ ಮುಖಂಡರು ಇದ್ದರು.

click me!