ಮುಖ್ಯಮಂತ್ರಿಗೆ ಧಮ್ ಇದ್ರೆ ಒಂದೇ ವೇದಿಕೆಗೆ ಚರ್ಚೆಗೆ ಬರಲಿ: ಸಿದ್ದರಾಮಯ್ಯ ಸವಾಲು

By Kannadaprabha NewsFirst Published Jan 18, 2023, 7:27 AM IST
Highlights

ಕಾಂಗ್ರೆಸ್‌ ಪಕ್ಷ ಜನರಿಗೆ ಕೊಟ್ಟಮಾತು ಈಡೇರಿಸಿದೆ. ಬಿಜೆಪಿ ಕೊಟ್ಟಪ್ರಣಾಳಿಕೆ 600 ಭರವಸೆಗಳನ್ನು ಈಡೇರಿಸಿಲ್ಲ. ಸಿಎಂ ಬಸವರಾಜ ಬೊಮ್ಮಾಯಿಗೆ ತಾಕತ್ತಿದ್ದರೆ, ಧಮ್‌ ಇದ್ದರೆ ಈ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ಬರಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಕೃಷ್ಣ ಎನ್‌. ಲಮಾಣಿ

 ಹೊಸಪೇಟೆ (ಜ.18) : ಕಾಂಗ್ರೆಸ್‌ ಪಕ್ಷ ಜನರಿಗೆ ಕೊಟ್ಟಮಾತು ಈಡೇರಿಸಿದೆ. ಬಿಜೆಪಿ ಕೊಟ್ಟಪ್ರಣಾಳಿಕೆ 600 ಭರವಸೆಗಳನ್ನು ಈಡೇರಿಸಿಲ್ಲ. ಸಿಎಂ ಬಸವರಾಜ ಬೊಮ್ಮಾಯಿಗೆ ತಾಕತ್ತಿದ್ದರೆ, ಧಮ್‌ ಇದ್ದರೆ ಈ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ಬರಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಡಾ.ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಬಸ್‌ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅನೇಕ ಬಾರಿ ಕರೆದಿರುವೆ. ಅವರಿಗೆ ಧೈರ್ಯ ಇಲ್ಲ. ಧಮ್‌ ಇಲ್ಲ. ಹಾಗಾಗಿ ಒಂದೇ ವೇದಿಕೆಗೆ ಬರುತ್ತಿಲ್ಲ. ಬಿಜೆಪಿ ಸರ್ಕಾರ ತಾನು ನೀಡಿದ್ದ ಶೇ.10ರಷ್ಟುಭರವಸೆ ಈಡೇರಿಸಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸುಳ್ಳು ಹೇಳುತ್ತಾರೆ. ಜನರ ಮುಂದೆ ಸುಳ್ಳು ಹೇಳ್ತಾರೆ. ಬಿಜೆಪಿ(BJP) ಬರೀ ಸುಳ್ಳಿನ ಫ್ಯಾಕ್ಟರಿಯಾಗಿದೆ. ಜನರಿಗೆ ಸುಳ್ಳು ಹೇಳಿ ವಂಚಿಸಲಾಗುತ್ತಿದೆ ಎಂದು ದೂರಿದರು.

ಬಿಜೆಪಿಯಿಂದ ರಾಜ್ಯ, ದೇಶ ಆರ್ಥಿಕ ದಿವಾಳಿ; ಸಿದ್ದರಾಮಯ್ಯ ವಾಗ್ದಾಳಿ...

ನೀರಾವರಿಗೆ .2 ಲಕ್ಷ ಕೋಟಿ ಖರ್ಚು:

ಬಿಜೆಪಿ ನೀರಾವರಿಗೆ .1.5ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಈಗ ಬರೀ .45 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಈಗ 37 ಟಿಎಂಸಿಯಷ್ಟುಹೂಳು ತುಂಬಿದೆ. ಕೊಪ್ಪಳದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುತ್ತೇವೆ. ಆಂಧ್ರಪ್ರದೇಶಕ್ಕೆ ಹರಿದು ಹೋಗುವ 200 ಟಿಎಂಸಿ ನೀರು ಉಳಿಸುತ್ತೇವೆ ಎಂದಿದ್ದರು. ಆದರೆ, ಇದುವರೆಗೆ ಸಮಾನಾಂತರ ಡ್ಯಾಂ ನಿರ್ಮಿಸಿಲ್ಲ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ನಾವು ಅಧಿಕಾರಕ್ಕೆ ಬಂದ್ರೇ ಸಮಾನಾಂತರ ಜಲಾಶಯ ನಿರ್ಮಿಸುತ್ತೇವೆ. ಜತೆಗೆ ನೀರಾವರಿಗೆ .2 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದರು.

ಇವರ್‌ ಮನೆ ಹಾಳಾಗ್‌:

ಪ್ರತಿ ಬಡ ಕುಟುಂಬಕ್ಕೆ 7 ಕೆಜಿ ಅಕ್ಕಿ ಉಚಿತವಾಗಿ ನಾವು ಕೊಟ್ಟಿದ್ದೆವು. ಇವರು ಬರೀ ಐದು ಕೆಜಿ ಕೊಡ್ತಾ ಇದ್ದಾರೆ. ಇವರ್‌ ಮನೆ ಹಾಳಾಗ್‌. ನಿಮ್ಮ ತೆರಿಗೆ ಹಣದಲ್ಲಿ ಅಕ್ಕಿ ಕೊಟ್ರೇ, ಇವರಿಗೇನೂ ಹೊಟ್ಟೇ ಉರಿ. ಇಂತಹ ಸರ್ಕಾರ ಕಿತ್ತೊಗೆಯಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸುತ್ತಬೇಕು. ಹತ್ತಕ್ಕೇ ಹತ್ತು ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಬೇಕು ಎಂದರು.

371 (ಜೆ) ಕೊಟ್ಟಿದ್ದು, ಕಾಂಗ್ರೆಸ್‌:

ಬಿಜೆಪಿ ಸರ್ಕಾರ ಹೈದರಾಬಾದ್‌ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಣೆ ಮಾಡಿದ್ದೇ ದೊಡ್ಡ ಸಾಧನೆಯಾಗಿದೆ. 371 (ಜೆ) ಜಾರಿ ಮಾಡಿದ್ದು, ಕಾಂಗ್ರೆಸ್‌ ಸರ್ಕಾರ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌, ಎಐಸಿಸಿ ಅಧಿ ನಾಯಕಿ ಸೋನಿಯಾ ಗಾಂಧಿಯವರನ್ನು ಒಪ್ಪಿಸಿ ಈ ಕಾಯ್ದೆ ಜಾರಿಗೊಳಿಸಿದರು. ಇದಕ್ಕೆ ಈ ಹಿಂದೆ ಎಲ್‌.ಕೆ. ಆಡ್ವಾನಿಯವರು ವಿರೋಧ ಮಾಡಿದ್ದರು ಎಂದು ಹರಿಹಾಯ್ದರು.

36 ಸಾವಿರ ಹುದ್ದೆ ಖಾಲಿ:

ಈ ಭಾಗದಲ್ಲಿ 36 ಸಾವಿರ ಹುದ್ದೆ ಖಾಲಿ ಬಿದ್ದಿವೆ. ಒಂದೇ ಒಂದು ಭರ್ತಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾರ್ಷಿಕ .5000 ಕೋಟಿ ಖರ್ಚು ಮಾಡುತ್ತೇವೆ. ಜತೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು.

ಗೃಹಲಕ್ಷ್ಮಿ ಯೋಜನೆ:

ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು .2000 ಜಮಾ ಮಾಡುತ್ತೇವೆ. ಬೆಲೆ ಏರಿಕೆಯಿಂದ ಮಹಿಳೆಯರು ಮನೆ ನಡೆಸಲು ಆಗುತ್ತಿಲ್ಲ. ಹಾಗಾಗಿ ಈ ಯೋಜನೆ ಘೋಷಣೆ ಮಾಡಿದ್ದೇವೆ. ಪ್ರತಿ ಮನೆಗೆ 200 ಯುನಿಟ್‌ ಕರೆಂಟ್‌ ಉಚಿತವಾಗಿ ಕೊಡುತ್ತೇವೆ. ನಾವು ಯೋಜನೆ ಘೋಷಣೆ ಮಾಡಿದ ಬಳಿಕ ಈಗ ಬೊಮ್ಮಾಯಿ ಪರದಾಡುತ್ತಿದ್ದಾರೆ ಎಂದರು.

ಇಂದಿರಾ ಕ್ಯಾಂಟಿನ್‌:

ನಾವು ಅಧಿಕಾರಕ್ಕೆ ಬಂದ್ರೇ ಇಂದಿರಾ ಕ್ಯಾಂಟಿನ್‌ ಮತ್ತೆ ಆರಂಭಿಸುತ್ತೇವೆ. ಬಡವರಿಗೆ ಊಟ ಹಾಕುತ್ತೇವೆ. ಈ ಸರ್ಕಾರ ಮುಚ್ಚಿಸುತ್ತಿದೆ. 40 ಪರ್ಸೆಂಟ್‌ ಕಳಂಕ ಈ ಸರ್ಕಾರಕ್ಕೆ ಮೆತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಿತ್ತು ಒಗೆಯಬೇಕು ಎಂದರು.

ನಮಗೆ ಒಂದು ಕ್ಷೇತ್ರಕ್ಕಾದರೂ ಟಿಕೆಟ್‌ ಕೊಡಿ; ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯ ಎಚ್ಚರಿಕೆ

ಸ್ಥಳೀಯ ಶಾಸಕ ಆನಂದ ಸಿಂಗ್‌ಗೆ ಮುಚ್ಚಿರುವ ಸಕ್ಕರೆ ಕಾರ್ಖಾನೆ ಆರಂಭಿಸಲು ಆಗಿಲ್ಲ. ಬಡವರಿಗೆ ಮನೆ ನಿರ್ಮಿಸಿ ಕೊಡಲು ಆಗಿಲ್ಲ. ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಮುಂದಿನ ಎಲೆಕ್ಷನ್‌ನಲ್ಲಿ ಜನರು ಆನಂದ ಸಿಂಗ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

click me!