ಖಾತೆಗೆ 15 ಲಕ್ಷರೂ. ಹಾಕುವ ಕತೆ ಏನಾಯ್ತು? ಬಿಜೆಪಿ ಅಪಪ್ರಚಾರ ಮಾಡೋದು ನಿಲ್ಲಿಸಲಿ: ಶಾಸಕ ಮಾನೆ

By Kannadaprabha News  |  First Published Jun 7, 2023, 6:23 AM IST

ಜನರಿಂದ ತಿರಸ್ಕಾರಕ್ಕೊಳಪಟ್ಟಿರುವ ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಕೈ ಬಿಟ್ಟು, ದೇಶದ ಪ್ರತಿಯೊಬ್ಬರ ಖಾತೆಗೂ . 15 ಲಕ್ಷ ಹಾಕುವುದು ಏನಾಯಿತು? ಎನ್ನುವುದಕ್ಕೆ ಉತ್ತರ ನೀಡಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಸವಾಲು ಹಾಕಿದರು.


ಹಾನಗಲ್ಲ (ಜೂ.7) ಜನರಿಂದ ತಿರಸ್ಕಾರಕ್ಕೊಳಪಟ್ಟಿರುವ ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಕೈ ಬಿಟ್ಟು, ದೇಶದ ಪ್ರತಿಯೊಬ್ಬರ ಖಾತೆಗೂ . 15 ಲಕ್ಷ ಹಾಕುವುದು ಏನಾಯಿತು? ಎನ್ನುವುದಕ್ಕೆ ಉತ್ತರ ನೀಡಬೇಕು ಎಂದು ಶಾಸಕ ಶ್ರೀನಿವಾಸ ಮಾನೆ(Shrinivas mane MLA) ಸವಾಲು ಹಾಕಿದರು.

ಪಟ್ಟಣದ ನೂರಾನಿ ಹಾಲ್‌ನಲ್ಲಿ ಹಾನಗಲ್‌ ಬ್ಲಾಕ್‌ ಕಾಂಗ್ರೆಸ್‌ ಆಯೋಜಿಸಿದ್ದ ಮತದಾರರು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Tap to resize

Latest Videos

ಬಿಜೆಪಿಯ ಭ್ರಷ್ಟಾಚಾರ(BJP Curruption), ದುರಾಡಳಿತ, ಜನವಿರೋಧಿ ನೀತಿಗಳಿಂದ ಆಕ್ರೋಶಗೊಂಡು ರಾಜ್ಯದ ಜನತೆ ಪಾಠ ಕಲಿಸಿದ್ದಾರೆ. ಸೋಲಿನಿಂದ ಹತಾಶಗೊಂಡಿರುವ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜನಪರ ಯೋಜನೆಗಳನ್ನು ಜಾರಿಗೊಳಿಸುವುದು ಬಿಜೆಪಿಗೆ ಸುತಾರಾಂ ಇಷ್ಟವಿಲ್ಲ. ಹೀಗಾಗಿಯೇ ಕಾಂಗ್ರೆಸ್‌Ü ಗ್ಯಾರಂಟಿಗಳ ಬಗೆಗೆ ಗೊಂದಲ ಸೃಷ್ಟಿಸುತ್ತಿದೆ. ಆದರೆ ಕಾಂಗ್ರೆಸ್‌ ಮಾತ್ರ ಎಲ್ಲ ಐದು ಗ್ಯಾರಂಟಿಗಳ ಜಾರಿಗೆ ದಿಟ್ಟಕ್ರಮ ಕೈಗೊಂಡು ನುಡಿದಂತೆ ನಡೆದಿದೆ ಎಂದರು.

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆಗೆ ನೀರಾವರಿ ಯೋಜನೆಯೇ ಸವಾಲು !

ಹಾನಗಲ್‌ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಚುರುಕುಗೊಳಿಸಿ ಬಡವರ ಸುಲಿಗೆ ನಿಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಗಮನ ನೀಡುವೆ. ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಯಾದ ಬೂತ್‌ಗಳಲ್ಲಿ ಆತ್ಮಾವಲೋಕನ ನಡೆಯಬೇಕು. ಹಿನ್ನೆಡೆಗೆ ಕಾರಣ ಪತ್ತೆ ಹಚ್ಚಿ, ಮುಂದಿನ ದಿನಗಳಲ್ಲಿಯೂ ಅಂಥ ಬೂತ್‌ಗಳಲ್ಲಿಯೂ ಕಾಂಗ್ರೆಸ್‌ಗೆ ಗೆಲುವಿನ ವಾತಾವರಣ ಸೃಷ್ಟಿಸಬೇಕು. ಹಾನಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎಂದೂ ಸಹ ನಿರಂತರ ಎರಡು ಬಾರಿ ಗೆದ್ದಿಲ್ಲ, ಇದೀಗ ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿಯೂ ಸಹ ಗೆಲುವಿನ ಪಥ ಮುಂದುವರಿದು ಹ್ಯಾಟ್ರಿಕ್‌ ಸಾಧನೆಯಾಗಬೇಕಿದೆ. ಇದಕ್ಕಾಗಿ ಎಲ್ಲರೂ ಜತೆಗೂಡಿ ಶ್ರಮಿಸೋಣ. ಜನರ ಭಾವನೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡೋಣ. ತಾಲೂಕಿನ ವಿಕಾಸ ಮತ್ತು ಜನಕಲ್ಯಾಣಕ್ಕೆ ಉದ್ಯೋಗ ಸೃಷ್ಟಿಗೆ ಚಿತ್ತ ಹರಿಸೋಣ. ಇಲ್ಲಿಗೆ ಉದ್ಯಮಿಗಳನ್ನು ಕರೆತರಲು, ಯೋಜನೆಗಳ ಅನುಮೋದನೆಗೆ ಅಧಿಕಾರಿಗಳ ಮನವೊಲಿಸಲು ಹೆಚ್ಚಿನ ಸಮಯ ನೀಡಬೇಕಿದ್ದು, ನಿಮ್ಮೆಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಅಲ್ಪಾವಧಿ ಸಿಕ್ಕರೂ ಶ್ರೀನಿವಾಸ ಮಾನೆ ಅವರು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಸೇವೆ, ಸ್ಪಂದನೆ ಮತ್ತು ಸಂಘಟನೆ ಹಾನಗಲ್‌ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಐತಿಹಾಸಿಕ ವಿಜಯ ತಂದುಕೊಟ್ಟಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಮುಂದಿನ 5 ವರ್ಷಗಳು ತಾಲೂಕಿಗೆ ಸುವರ್ಣಯುಗ. ನಾವೆಲ್ಲರೂ ಶಾಸಕರಿಗೆ ಹೆಚ್ಚು ಸಮಯ-ಸಹಕಾರ ನೀಡಿದರೆ, ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಶ್ರಮಿಸಲಿದ್ದಾರೆ ಎಂದರು.

Karnataka election 2023: ಉದಾಸಿ ಇಲ್ಲದ ಹಾನಗಲ್ಲಿನಲ್ಲೀಗ ಹೊಸ ಗಾಳಿ!

ಪುರಸಭೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ಉಪಾಧ್ಯಕ್ಷೆ ಶಂಶಿಯಾ ಬಾಳೂರ, ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ, ನಗರ ಕಾಂಗ್ರೆಸ್‌ ಅಧ್ಯಕ್ಷ ಮತೀನ್‌ ಶಿರಬಡಗಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಶಿವು ಭದ್ರಾವತಿ, ಯಲ್ಲಪ್ಪ ಕಿತ್ತೂರ, ಪುಟ್ಟಪ್ಪ ನರೇಗಲ್‌, ಸಿದ್ದನಗೌಡ ಪಾಟೀಲ, ವೀರೇಶ ಬೈಲವಾಳ, ಅಶೋಕ ಜಾಧವ, ರಾಮಚಂದ್ರ ಹೊಸಮನಿ, ಸೋಮನಾಥ ಚವ್ಹಾಣ, ಮಾರುತಿ ಕಮಾಟಿ, ರಾಮೂ ಯಳ್ಳೂರ, ಉಮೇಶ ದಾನಪ್ಪನವರ, ವರ್ಧಮಾನ ಚವಟಿ, ಈರಣ್ಣ ಮರೂಡಿ, ಪರಸಪ್ಪ ಮಡಿವಾಳರ, ಚಮನ ಪಠಾಣ, ಎಂ.ಎನ್‌. ನೆಗಳೂರ, ಫಕೀರಪ್ಪ ಮಲ್ಲಿಗಾರ, ಬಸವರಾಜ ಹೊಸಮನಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

click me!