Assembly election: ರಸ್ತೆ, ಚರಂಡಿ ಸಮಸ್ಯೆ ಬಿಡಿ, ಲವ್ ಜಿಹಾದ್ ಬಗ್ಗೆ ಚರ್ಚಿಸಿ: ಸಂಸದ ಕಟೀಲ್ ಸಲಹೆಗೆ ಭಾರಿ ವಿರೋಧ

By Sathish Kumar KHFirst Published Jan 3, 2023, 6:40 PM IST
Highlights

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು 'ರಸ್ತೆ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡದೇ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಲವ್ ಜಿಹಾದ್ ತೊಲಗಿಸಲು ಚರ್ಚಿಸಬೇಕು' ಎಂದು ಕಾರ್ಯಕರ್ತರಿಗೆ ನೀಡಿದ ಸಲಹೆಯ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು (ಜ.03): ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ನಿನ್ನೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ 'ರಸ್ತೆ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡದೇ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಲವ್ ಜಿಹಾದ್ ತೊಲಗಿಸಲು ಚರ್ಚಿಸಬೇಕು ಎಂದು ಕಾರ್ಯಕರ್ತರಿಗೆ ನೀಡಿದ ಸಲಹೆಯ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಪಕ್ಷದ ಕಾರ್ಯಕರ್ತರು ಲವ್ ಜಿಹಾದ್ ವಿಷಯದ ಬಗ್ಗೆ ಗಮನಹರಿಸಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಈ ಹಿಂದೆ ಸಂಸದ ಅನಂತ ಕುಮಾರ್‌ ಹೆಗಡೆ ಸಂವಿಧಾನವನ್ನು ಬದಲಾವಣೆ ಮಾಡಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಜನಸಾಮಾನ್ಯರು ತಿರುಗಿ ಬೀಳುವಂತೆ ಮಾಡಿದ್ದರು. ಈಗ ಲವ್‌ ಜಿಹಾದ್‌ ವಿಚಾರದ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಬಿಜೆಪಿ ವಿರುದ್ಧ ಧರ್ಮಗಳ ನಡುವೆ ಕಿಚ್ಚು ಹೊತ್ತಿಸುವಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ರಸ್ತೆ & ಚರಂಡಿ ವಿಚಾರ ಬಿಟ್ಹಾಕಿ, ಲವ್ ಜಿಹಾದ್ ಬಗ್ಗೆ ಯೋಚಿಸಿ: ನಳಿನ್ ಕುಮಾರ್ ಕಟೀಲ್

ಲವ್‌ ಜಿಹಾದ್‌ ವಿರುದ್ಧ ಬಿಜೆಪಿ ಕಾನೂನು ತರುತ್ತದೆ: ಮಂಗಳೂರಿನ 'ಬೂತ್ ವಿಜಯ ಯಾತ್ರೆ ಅಭಿಯಾನ'ದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್, ಈಗ ರಾಜ್ಯದಲ್ಲಿ ರಸ್ತೆಗಳು ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ವಿಧಾನಸೌಧದೊಳಗೆ ತಮ್ಮ ಪ್ರತಿನಿಧಿಗಳು ಕೈ ಎತ್ತಲಿಲ್ಲ ಎಂದು ಚರ್ಚೆ ಮಾಡಬೇಡಿ. ನನಗೆ ನೀಡಿದ ಹಕ್ಕುಗಳಿಂದ ನೀವು ಚಿನ್ನವನ್ನು ಪಡೆಯುವುದು ಸಾಧ್ಯವಿಲ್ಲ. ಆದರೆ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಮತ್ತು ನೀವು ಲವ್ ಜಿಹಾದ್ ನಿಲ್ಲಿಸಲು ಬದ್ಧರಾಗಬೇಕು. ಹೀಗಾಗಿ, ಲವ್ ಜಿಹಾದ್ ಅನ್ನು ಬೇರು ಸಮೇತ ಕಿತ್ತೊಗೆಯಲು ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬೇಕು. ಲವ್ ಜಿಹಾದ್ ವಿರುದ್ದ ಬಿಜೆಪಿ ಸರ್ಕಾರ ಕಾನೂನು ಜಾರಿಗೆ ತರುತ್ತದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದರು. 

ಚುನಾವಣೆ ವೇಳಗೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ: ಡಿಕೆಶಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಮೂರು ತುಂಡಾಗಿದೆ. ದ್ದರಾಮಯ್ಯ, ಡಿಕೆಶಿ, ಖರ್ಗೆ ಎಲ್ಲರೂ ಮುಖ್ಯಮಂತ್ರಿ ಶರ್ಟ್ ಹೊಲಿಸಿಕೊಂಡಿದ್ದಾರೆ. ದ.ಕ ಜಿಲ್ಲೆಯಲ್ಲೂ ಯು.ಟಿ.ಖಾದರ್, ರಮಾನಾಥ್ ರೈ, ಲೋಬೋ ಸೇರಿ ಮೂರು ಜನ ಸಚಿವರಾಗಲು ಶರ್ಟ್ ಹೊಲಿಸಿಕೊಂಡಿದ್ದಾರೆ. ಆದರೆ, ಒಳಗೊಳಗೆ ರಮಾನಾಥ್ ರೈ ಸೋಲಿಸಿ ಅಂತ ಖಾದರ್ ಗುಟ್ಟಾಗಿ ಹೇಳುತ್ತಾರೆ. ಖಾದರ್ ಸೋಲಿಸಿ ಅಂತ ರಮಾನಾಥ್ ರೈ ಗುಟ್ಟಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಪುಸ್ತಕ ‌ಮಾಡಲು ಜನ ಸಿಗಲ್ಲ, ಆದರೆ ಬಿಜೆಪಿಯಲ್ಲಿ ಪೇಜ್ ಗೊಬ್ಬರು ಪ್ರಮುಖರು ಸಿಗುತ್ತಾರೆ. ಕಾಂಗ್ರೆಸ್ ಗೆ ಬೂತ್ ಗೆ ಒಬ್ಬನೇ ಒಬ್ಬ ಹಿಂದೂ ಸಿಗಲ್ಲ. ಮುಂದಿನ ಚುನಾವಣೆ ಒಳಗೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ಎಂದು ಹೇಳಿದ್ದರು.

ಅಸೆಂಬ್ಲಿ ಚುನಾವಣೆ ಮುನ್ನ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿ ನಾಯಕರಿಂದ ದೇಶ ವಿಭಜನೆ ಕಾರ್ಯ: ಸಂಸದ ನಳಿನ್ ಕುಮಾರ್ ಕಟೀಲ್ ಅವರ ಲವ್ ಜಿಹಾದ್ ಹೇಳಿಕೆ ನೀಡುವ ಮೂಲಕ ಧರ್ಮಗಳನ್ನು ಒಡೆಯುವ ಹಾಗೂ ದೇಶ ವಿಭಜನೆಯ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರು ಅಭಿವೃದ್ಧಿಯನ್ನು ನೋಡದೇ ಧರ್ಮಗಳ ನಡುವಿನ ದ್ವೇಷವನ್ನು ನೋಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ನಾವು ಅಭಿವೃದ್ಧಿಯ ಬಗ್ಗೆ ಜನರೊಂದಿಗೆ ಮಾತನಾಡುತ್ತಾ ಜನರ ಹೊಟ್ಟೆ ತುಂಬಿಸುತ್ತೇವೆ. ನಾವು ಉದ್ಯೋಗ ಸೃಷ್ಟಿಯನ್ನು ಬಯಸುತ್ತೇವೆ. ಬೆಲೆಗಳು ನಿಯಂತ್ರಣದಲ್ಲಿರಬೇಕು ಎಂದು ನಾವು ಬಯಸುತ್ತೇವೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಚಿಂತನೆಗಳಿಗೆ ಇರುವ ವ್ಯತ್ಯಾಸವಾಗಿದೆ.

-ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬಿಜೆಪಿ ಕೋಮು ವಿಚಾರಗಳನ್ನು ಜನರ ಮುಂದಿಡುತ್ತೇವೆ: ಈ ಕೋಮುವಾದಿ ವಿಷಯಗಳ ಬಗ್ಗೆ ಬಿಜೆಪಿಯನ್ನು ಬಹಿರಂಗಪಡಿಸಲು ಕಾಂಗ್ರೆಸ್‌ ಯೋಜನೆ ರೂಪಿಸಿಕೊಂಡಿದೆ.  ಜ.11ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ನಾವು ಎಲ್ಲಾ ಮೂಲೆ ಮೂಲೆಗಳಿಗೆ ಪ್ರಯಾಣಿಸಿ ಸಮಾಜದ ಎಲ್ಲಾ ವರ್ಗಗಳ ಜನರನ್ನು ಭೇಟಿ ಮಾಡುತ್ತೇವೆ. ಬಿಜೆಪಿ ಮಾಡಿದ್ದೆಲ್ಲವನ್ನೂ ನಾವು ಜನರ ಮುಂದಿಡುತ್ತೇವೆ. ಈ ಚುನಾವಣೆ ರಾಜ್ಯದಲ್ಲಿ ಬಿಜೆಪಿಯ ಕೊನೆಯ ದಿನಗಳು ಆಗಲಿದ್ದು, ಅವರ ಜ್ಯೋತಿ ನಂದಿ ಹೋಗಲಿದೆ. ನಂತರ ಕಾಂಗ್ರೆಸ್‌ ಜ್ಯೋತಿ ಬೆಳಗಲಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

click me!