ಜೆಡಿಎಸ್ ಸೇರಿದಂತೆ ರಾಜ್ಯದ ಯಾವುದೇ ಪ್ರಾದೇಶಿಕ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲ ಎನ್ನುವ ಮೂಲಕ ತಮ್ಮ ಆಪ್ತಮಿತ್ರ ಜನಾರ್ದನ ರೆಡ್ಡಿ ಪಕ್ಷವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಕಿದ್ದಾರೆ.
ಬಳ್ಳಾರಿ (ಜ.3) : ಜೆಡಿಎಸ್ ಸೇರಿದಂತೆ ರಾಜ್ಯದ ಯಾವುದೇ ಪ್ರಾದೇಶಿಕ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲ ಎನ್ನುವ ಮೂಲಕ ತಮ್ಮ ಆಪ್ತಮಿತ್ರ ಜನಾರ್ದನ ರೆಡ್ಡಿ ಪಕ್ಷವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಕಿದ್ದಾರೆ. ಇಲ್ಲಿನ ದೇವಿನಗರ ಪ್ರದೇಶದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜನಾರ್ದನ ರೆಡ್ಡಿಯವರ ನೂತನ ಕಲ್ಯಾಣರಾಜ್ಯ ಪ್ರಗತಿ ಪಕ್ಷ ಅಸ್ವಿತ್ವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಪರೋಕ್ಷವಾಗಿ ರೆಡ್ಡಿಯ ಪಕ್ಷ ರಾಜ್ಯದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.
ಮೈಸೂರು(mysuru) ಭಾಗವಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ(Kalyana karnataka)ದ ಎಲ್ಲ ಕಡೆಗಳಲ್ಲೂ ಬಿಜೆಪಿ(BJP) ಅಧಿಕಾರಕ್ಕೆ ಬರಲಿದೆ. ಪ್ರಾದೇಶಿಕ ಪಕ್ಷಗಳಿಗೆ ಮತದಾರರು ಈ ಬಾರಿ ಮಾನ್ಯತೆ ನೀಡುವುದಿಲ್ಲ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಜನರು ಹೆಚ್ಚು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರಾದೇಶಿಕ ಪಕ್ಷದ ಅಸ್ತಿತ್ವದಿಂದ ನಮ್ಮ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ, ಒಗ್ಗಟ್ಟಾಗಿದ್ದಾರೆ ಎಂದರು.
undefined
ಹೊಸ ವರ್ಷದ ಮೊದಲ ದಿನವೇ ಜನಾರ್ದನ ರೆಡ್ಡಿ ಹೊಸ ಆಟ: ಬಳ್ಳಾರಿಯಲ್ಲಿ ಕಣಕ್ಕಿಳೀತಾರಾ ರೆಡ್ಡಿ ಪತ್ನಿ..?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪಕ್ಷ ಸ್ಥಾಪಿಸಲು ಹಾಗೂ ಚುನಾವಣೆ ಎದುರಿಸಲು ಅವಕಾಶವಿದೆ. ಯಾರಾದರೂ ಪಕ್ಷ ಸ್ಥಾಪಿಸಬಹುದಾಗಿದೆ. ಶ್ರೀರಾಮುಲು ನೋಡಿ ಅಥವಾ ಮತ್ತೊಬ್ಬರನ್ನು ನೋಡಿ ಜನರು ಮತ ನೀಡುವುದಿಲ್ಲ. ಪಕ್ಷದ ಆಡಳಿತ ವೈಖರಿಯನ್ನು ನೋಡಿಯೇ ಗೆಲುವು ನೀಡುತ್ತಾರೆ. ರಾಜ್ಯದ ಮತದಾರರ ಒಲವು ಬಿಜೆಪಿ(BJP)ಯ ಮೇಲಿದೆ. ನಮ್ಮ ಪಕ್ಷ ರಾಜ್ಯದಲ್ಲಿ ಸದೃಢವಾಗಿದೆ. 150 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಬಳ್ಳಾರಿ ಹಾಗೂ ವಿಜಯನಗರ(Vijayanagara) ಜಿಲ್ಲೆಗಳ ಮೂರು ಸಾಮಾನ್ಯ ಕ್ಷೇತ್ರಗಳಲ್ಲಿ ಸೋಮಶೇಖರ ರೆಡ್ಡಿ,(Somashekhar reddy) ಕರುಣಾಕರ ರೆಡ್ಡಿ(karunakareddy) ಹಾಗೂ ಆನಂದ ಸಿಂಗ್ ಜಯಗಳಿಸಲಿದ್ದಾರೆ ಎಂದು ತಿಳಿಸಿದರು.
ಬೂತ್ ವಿಜಯ್ ಅಭಿಯಾನ
ಪಕ್ಷವನ್ನು ಬೂತ್ ಮಟ್ಟದಿಂದಲೇ ಸದೃಢಗೊಳಿಸಬೇಕು ಎಂಬ ಉದ್ದೇಶದಿಂದ ಪಕ್ಷದ ಸೂಚನೆ ಮೇರೆಗೆ ಬೂತ್ ವಿಜಯ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನವರಿ 2ರಿಂದ 10 ದಿನಗಳ ಕಾಲ ಅಭಿಯಾನ ಜರುಗಲಿದೆ ಎಂದು ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು. ಪಕ್ಷದ ಸೈದ್ಧಾಂತಿಕ ನಿಲುವು ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಜನವರಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ಅಭಿಯಾನ ವೇಳೆ ಆಗಲಿದೆ. ಅಭಿಯಾನ ವೇಳೆ ಪ್ರತಿ ಬೂತ್ ವ್ಯಾಪ್ತಿಯ 25 ಹಿತೈಷಿಗಳ ಮನೆಗಳ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಲಾಗುವುದು. ಜನರಲ್ಲಿ ಮತದಾನದ ಮಹತ್ವ ತಿಳಿಸುವುದು, ಶೇ. 100ರಷ್ಟುಮತದಾನ ಆಗುವಂತೆ ಮನವೊಲಿಕೆ ಮಾಡುವುದು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್‌ಕೀ ಬಾತ್ ಕಾರ್ಯಕ್ರಮವನ್ನು ಎಲ್ಲ ಬೂತ್‌ಗಳು ಹಾಗೂ ಹಳ್ಳಿಗಳಲ್ಲಿ ವೀಕ್ಷಿಸುವಂತೆ ಜನರನ್ನು ಪ್ರೇರೇಪಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಮಾಜಿ ಸಂಸದೆ ಜೆ.ಶಾಂತಾ, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಗುಣ, ಉಪಾಧ್ಯಕ್ಷೆ ಪುಷ್ಪಾ, ಪಕ್ಷದ ಮುಖಂಡರಾದ ಶ್ರೀನಿವಾಸ ಮೋತ್ಕರ್, ಮಲ್ಲನಗೌಡ, ರಾಜೀವ್ ತೊಗರಿ ಇತರರಿದ್ದರು. ಬಳ್ಳಾರಿ-ವಿಜಯನಗರ : ಎಲ್ಲ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ!