* ನಾಯಕತ್ವ ಬದಲಾವಣೆ ವಿಚಾರ
* ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ
* ಇಲ್ಲಿ ಎಲ್ಲರೂ ನಮ್ಮವರೆ ಹೊರಗಿನಿಂದ ಬಂದವರು ಎಂಬ ಮಾತಿಲ್ಲ
ಬೆಂಗಳೂರು (ಜೂ. 17) ಎಚ್. ವಿಶ್ವನಾಥ್ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಬೇಕಿಲ್ಲ. ಕೋವಿಡ್ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡಿದೆ. ಸಿಎಂ ಬದಲಾವಣೆ ವಿಚಾರಕ್ಕೆ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ನಮ್ಮಲ್ಲಿ ಪಾರ್ಲಿಮೆಂಟ್ ಬೋರ್ಡ್ ಅಂತಿಮ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬೆಲ್ಲದ್ ಪೋನ್ ಟ್ಯಾಪ್ ಆರೋಪದ ಹಿಂದಿನ ಕತೆ ಹೇಳಿದ ರೇಣುಕಾಚಾರ್ಯ
ನಾಯಕತ್ವ ಗೊಂದಲ ಬೀದಿಯಲ್ಲಿ ಬಗೆಹರಿಸೋದು ಅಲ್ಲ. ಈಗಾಗಲೇ ಅರುಣ್ ಸಿಂಗ್ ಮಾತಾಡಿದ್ದಾರೆ. ಅಂತಿಮವಾಗಿ ಪಾರ್ಲಿಮೆಂಟರಿ ಬೋರ್ಡ್ ನಿರ್ಣಯ ತೆಗೆದುಕೊಳ್ಳುತ್ತದೆ. ಯಾರು ಪಕ್ಷದ ಹಿತಕ್ಕೆ ಧಕ್ಕೆಯಾಗುವ ರೀತಿ ನಡೆದುಕೊಳ್ಳಬಾರದು. ನಮ್ಮ ಆದ್ಯತೆ ವೈಯಕ್ತಿಕ ಹಿತಾಸಕ್ತಿ ಗೆ ಅಲ್ಲ. ನಮ್ಮ ಚಿಂತನೆ ಜನರ ಹಿತದ ಕಡೆಗೆ ಮಾತ್ರ ಇರಬೇಕು. ಜನಸಮೂಹದ ವಿರುದ್ಧ ನಡೆದುಕೊಳ್ಳಬಾರದು. ಪಾರ್ಲಿಮೆಂಟ್ ಬೋರ್ಡ್ ತೀರ್ಮಾನ ಮಾಡಿದ್ದಕ್ಕೆ ಯಡಿಯೂರಪ್ಪ ಅವರು ಸಿಎಂ ಆಗಿದ್ದು. ನಾನು ಏನು ಹೇಳ್ತೇನೆ ಎನ್ನೋದರ ಮೇಲೆ ನಿರ್ಧಾರ ಮಾಡೋದಿಲ್ಲ ಎಂದರು.
17 ಜನರಿಂದ ಪಕ್ಷ ಹೀಗಾಯ್ತು ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ರವಿ, 17 ಜನ ಬಂದವರಿಂದಲೇ ನಮ್ಮ ಸರ್ಕಾರ ಬಂದಿದ್ದು. ಅಂಥ ಹೇಳಿಕೆ ನೀಡಿಲ್ಲ ಎಂದು ಈಶ್ವರಪ್ಪ ಸ್ಪಷ್ಟ ಮಾಡಿದ್ದಾರೆ. ಒಳಗೆ ಬಂದಮೇಲೆ ಎಲ್ಲರೂ ಒಂದೇ. ಅವರು ಬಂದಿದ್ದರಿಂದ ನಮಗೆ ಮೆಜಾರಿಟಿ ಸಿಕ್ಕಿದೆ. 104 ಮಂದಿಯನ್ನ ರಾಜ್ಯದ ಜನ ಗೆಲ್ಲಿಸಿದ್ದೂ ಸತ್ಯ. ಅವರು ಬಂದಿದ್ದಕ್ಕೆ ರಾಜಕೀಯ ಬೇಡ. ನಾವು ನಮ್ಮವರೆಂದೇ ಪರಿಗಣಿಸುತ್ತೇವೆ ಎಂದು ರವಿ ಸ್ಪಷ್ಟಪಡಿಸಿದರು.