ಎಂಟಿಬಿ ಬಿಟ್ಟು ಮಿತ್ರ ಮಂಡಳಿ ಒಗ್ಗಟ್ಟು : ದೂರ ಇಟ್ಟು ಅಚ್ಚರಿ

By Kannadaprabha NewsFirst Published Jun 17, 2021, 8:05 AM IST
Highlights
  • ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ 
  • ಕಾಂಗ್ರೆಸ್‌- ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ‘ಮಿತ್ರಮಂಡಳಿ’ ಸಭೆ 
  • ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ವಲಸಿಗ ಮುಖಂಡರು

ಬೆಂಗಳೂರು (ಜೂ.17): ನಾಯಕತ್ವ ಬದಲಾವಣೆ ಕುರಿತ ಚರ್ಚೆ ತೀವ್ರವಾಗಿರುವಾಗಲೇ, ಕಾಂಗ್ರೆಸ್‌- ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ‘ಮಿತ್ರಮಂಡಳಿ’ ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸಿದೆ.

 ಅಚ್ಚರಿ ಎಂದರೆ, ಈ ಸಭೆಗೆ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರಿಗೆ ಆಹ್ವಾನವಿರಲಿಲ್ಲ. ಅವರನ್ನು ಸಭೆಯಿಂದ ದೂರ ಇಡಲಾಗಿತ್ತು ಎನ್ನಲಾಗಿದೆ.

'ಸಿಎಂ ಹುದ್ದೆಯಿಂದ ಯಡಿಯೂರಪ್ಪ ಬದಲು ಬೇಡ' .

ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಾವೆಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಾಯಕತ್ವಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಪಕ್ಷದ ಹೈ ಕಮಾಂಡ್ ಯಾವ ನಿರ್ಧಾರ ಕೈಗೊಳ್ಳುವುದೋ ಅದಕ್ಕೆ ಬದ್ಧರಾಗಿರೋಣ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ. 

ಅರುಣ್ ಸಿಂಗ್ ರಾಜ್ಯ ಪ್ರವಾಸ, ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಇಂದಿನಿಂದ ಸರಣಿ ಸಭೆ! ... 

ಬಧುವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಅಗಮಿಸುವ ಮೊದಲೇ ಕೃಷಿ ಸಚಿವ ಬಿ ಸಿ ಪಾಟೀಲ್ ನಿವಾಸದಲ್ಲಿ ಸಭೆ ಸೇರಲಾಗಿತ್ತು. ಈ ಸಭೆಯಲ್ಲಿ ತೀರ್ಮಾನ  ಮಾಡಿದ್ದಾರೆ.

click me!