MLC ಎಲೆಕ್ಷನ್: ಅವಿರೋಧ ಆಯ್ಕೆ ಕನಸು ಕಾಣ್ತಿದ್ದ ಸವದಿಗೆ ಬಿಗ್ ಶಾಕ್

By Ramesh BFirst Published Feb 6, 2020, 4:46 PM IST
Highlights

ಬಿಜೆಪಿಯ ಸಂಖ್ಯಾಬಲದಿಂದ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಉಪಮುಖ್ಯಮಂತ್ರಿಯಾಗಿಯೇ ಮುಂದುವರೆಯುವ ಕನಸು ಕಾಣುತ್ತಿದ್ದ ಸವದಿಗೆ ಕೊನೆಗಳಿಗೆಯಲ್ಲಿ ಮೋಡವೇ ತಲೆ ಮೇಲೆ ಬಿದ್ದಂತಾಗಿದೆ. ದೂರವಾಗಿದ್ದ ಮೈತ್ರಿ ನಾಯಕರು ವಿಧಾನಪರಿಷತ್ ಉಚನಾವಣೆಯಲ್ಲಿ ಒಂದಾಗಿರುವುದು ಬಿಜೆಪಿಗೆ ಆತಂಕ ಶುರುವಾಗಿದೆ.

ಬೆಂಗಳೂರು,(ಫೆ. 06): ಶಾಸಕ ರಿಷ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ವಿಧಾನಪರಿಷತ್ (MLC) ಸ್ಥಾನ ಇದೇ ಫೆಬ್ರವರಿ 17ಕ್ಕೆ ಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ  ಕೈ ಮುಖಂಡ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದರು.

ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಎಂ.ಕೆ.ನಿಶಾಲಾಕ್ಷಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ತಿಪ್ಪೇಸ್ವಾಮಿ ಮತ್ತು ಕೋನರೆಡ್ಡಿ ಉಪಸ್ಥಿತರಿದ್ದರು.

ಸೋತಿದ್ದ ಸವದಿಗೆ MLC ಟಿಕೆಟ್, ತ್ಯಾಗ ಮಾಡಿದ್ದ ಶಂಕರ್‌ಗೆ ಶಾಕ್

ಈ ಮೂಲಕ ಅವಿರೋಧ ಗೆಲುವಿನ ಕನಸು ಕಾಣುತ್ತಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಆತಂಕ ಶುರುವಾಗಿದೆ. ವಿಧಾನಸಭೆ ಸಂಖ್ಯಾಬಲದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸುಲಭ. 

ಸಚಿವ ಸ್ಥಾನ ಕೈತಪ್ಪಿರುವುದರಿಂದ ಕೆಲ ಶಾಸಕರುಗಳು ಅಸಮಾಧಾನಗೊಂಡಿದ್ದು, ಅಡ್ಡ ಮತದಾನವಾಗುತ್ತೋ ಎನ್ನುವ ಭಯ ಬಿಜೆಪಿಗೆ ಕಾಡತೊಡಗಿದೆ. ಮತ್ತೊಂದೆಡೆ ಲಕ್ಷ್ಮಣ ಸವದಿಗೂ ಸಹ ಆತಂಕ ಶುರುವಾಗಿದೆ.

ಇಲ್ಲಿವರೆಗೂ ಲಕ್ಷ್ಮಣ ಸವದಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಹೇಳಿದ್ದ ಮೈತ್ರಿ ನಾಯಕರ ನಡುವೆ ನಡೆದಿರುವ ದಿಢೀರ್ ಬೆಳವಣಿಗೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

DCM ರದ್ದು: ರೇಣುಕಾಚಾರ್ಯಗೆ ಲಕ್ಷ್ಮಣ ಸವದಿ ಗುದ್ದು !

ಮಂತ್ರಿ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರನ್ನು ಸೆಳೆದು ವಿಧಾನ ಪರಿಷತ್​ನಲ್ಲಿ ಮತ ಹಾಕಿಸಿಕೊಳ್ಳಲು ಮೈತ್ರಿ ನಾಯಕರ ಪ್ಲಾನ್ ಆಗಿದೆ. 

ಸವದಿಗೆ ಶುರುವಾಯ್ತು ಆತಂಕ
ಹೌದು...ಕಳೆದ ವಿಧಾಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸೋಲುಕಂಡಿರುವ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ಈಗಾಗಲೇ ಬಿಜೆಪಿ ಶಾಸಕರ ಕಣ್ಣುಕೆಂಪಾಗಿಸಿರುವುದು ಒಂದಾದರೆ, ಮಂತ್ರಿಗಿರಿ ಸಿಗದೇ ಅಸಮಾಧಾನಗೊಂಡಿರುವ ಸಚಿವಾಕಾಂಕ್ಷಿಗಳ ಸಿಟ್ಟು ಕುದಿಯುತ್ತಿದೆ.  ಇದೇ ಸಿಟ್ಟನ್ನು ಲಕ್ಷ್ಮಣ ಸವದಿ ವಿರುದ್ಧವಾಗಿ ಮತ ಚಲಾಯಿಸಿ ಹೈಕಮಾಂಡ್‌ಗೆ ಖಡಕ್ ಸಂದೇಶ ನೀಡುದರೂ ಅಚ್ಚರಿ ಇಲ್ಲ. ಇದ್ರಿಂದ ಸವದಿಗೆ ಢವ-ಢವ ಶುರುವಾಗಿದಂತೂ ಸತ್ಯ.

ಮೈತ್ರಿ ನಾಯಕ ಗೇಮ್ ಪ್ಲಾನ್


ಎಂಎಲ್‌ಸಿ ಎಲೆಕ್ಷನ್‌ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಇದೀಗ ನಾಮಪತ್ರ ಸಲ್ಲಿಸಲು ಇಂದು (ಗುರುವಾರ) ಕೊನೆ ದಿನದಂದು ಏಕಾಏಕಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರ ಹಿಂದೆ ಏನೋ ಮಸಲತ್ತು ಇದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮಂತ್ರಿಗಿರಿ ಸಿಗದೇ ಮುನಿಸಿಕೊಂಡಿರುವ ಶಾಸಕರುಗಳ ಮನವೊಲಿಸಿ ಅವರ ಮತಗಳನ್ನು ಸೆಳೆಯುವ ಪ್ಲಾನ್ ಮೈತ್ರಿ ನಾಯಕರದ್ದಾಗಿದೆ.

ಬಿಜೆಪಿಗೆ ಗೆಲುವು ಸುಲಭ
ವಿಧಾನಸಭೆಯಿಂದ ಆಯ್ಕೆಯಾಗುವ ಈ ವಿಧಾನ ಪರಿಷತ್ ಸದಸ್ಯತ್ವ ಬಿಜೆಪಿ ಅಭ್ಯರ್ಥಿಗೆ ಒಲಿಯುವುದು ಸ್ಪಷ್ಟವಾಗಿದೆ. 116 ಸದಸ್ಯರಿರುವ ಬಿಜೆಪಿಗೆ ಬಹುಮತವಿದ್ದು, ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಕಾರಣ ಪಕ್ಷ ಕಣಕ್ಕಿಳಿಸುವ ಅಭ್ಯರ್ಥಿಗೆ ಗೆಲುವು ಖಚಿತ.

ರಿಜ್ವಾನ್ ಅರ್ಷದ್‌ರಿಂದ ತೆರವಾದ MLC ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ

ಕಾಂಗ್ರೆಸ್, ಜೆಡಿಎಸ್ ಕೈಜೋಡಿಸಿದರೂ 103 ಮತಗಳಷ್ಟೇ. ಆಗಾಗಿ ಮೈತ್ರಿ ಅಭ್ಯರ್ಥಿ ಗೆಲುವು ಕಷ್ಟ ಸಾಧ್ಯ. ಒಂದು ವೇಳೆ ಅಸಮಧಾನಗೊಂಡ ಬಿಜೆಪಿ ಶಾಸಕರು ತಮ್ಮ ಸಿಟ್ಟು ಪರಿಷತ್ ಚುನಾವಣೆಯಲ್ಲಿ ತೋರಿಸಿ ಲಕ್ಷ್ಮಣ ಸವದಿಯನ್ನು ಸೋಲಿಸಿದ್ರೆ ಅಚ್ಚರಿಪಡಬೇಕಿಲ್ಲ.

ಮತ್ತೆ ಶುರುವಾಯ್ತು ನಂಬರ್ ಗೇಮ್
ವಿಧಾನಪರಿಷತ್ ಚುನಾವಣೆಯನ್ನು ಜೆಡಿಎಸ್ ಗಂಭೀರವಾಗಿ ತೆಗೆದುಕೊಂಡಿದ್ದು, ಮತ್ತೆ ರಾಜ್ಯ ರಾಜಕಾರಣದಲ್ಲಿ ಮತ್ತೆ ನಂಬರ್ ಗೇಮ್ ಶುರುವಾಗಿದೆ.  ವಿಧಾನಪರಿಷತ್ ಚುನಾವಣೆ ಅಖಾಡದಲ್ಲಿ ಬಿಎಸ್​​ವೈ ಸೋಲಿಸಲು ಜೆಡಿಎಸ್ ಹಾಗೂ ಪ್ಲಾನ್ ಮಾಡಿದೆ. ಇದೇ ಉದ್ದೇಶ ಇಟ್ಟುಕೊಂಡು ಎಚ್​ಡಿಕೆ ಮೈಸೂರಲ್ಲಿ ಕಡುಬಿನ ಹೇಳಿಕೆ ಕೊಟ್ಟಿದ್ದಾರೆ. 

ಕ್ರಾಸ್ ವೋಟಿಂಗ್ ಪಕ್ಕಾ ಆದ್ರೆ, ಕಾಂಗ್ರೆಸ್ ಅಧಿಕೃತ ಎಂಟ್ರಿಕೊಡುವ ಎಲ್ಲಾ ಸಾಧ್ಯತೆಗಳಿದ್ದು, ಮತ್ತೊಮ್ಮೆ ರಾಜಕೀಯ ಹೈಡ್ರಾಮಕ್ಕೆ ಕರ್ನಾಟಕ ಸಾಕ್ಷಿಯಾದರೂ ಅಚ್ಚರಿಪಡಬೇಕಿಲ್ಲ.

ಪ್ರಸ್ತುತ ಕರ್ನಾಟಕ ವಿಧಾನಸಭೆ ಒಟ್ಟು 222ರಲ್ಲಿ 112 ಮತಗಳನ್ನು ಪಡೆಯುವವರು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಸದ್ಯ ಬಿಜೆಪಿಯ ಬಲ 117 + ಪಕ್ಷೇತರ - 1, ಬಿಎಸ್​​ಪಿ - 1 ಬಲ ಹೊಂದಿದೆ. ಕಾಂಗ್ರೆಸ್ - ಜೆಡಿಎಸ್ ​​ಒಂದಾದರೆ 103 ಶಾಸಕರಿದ್ದಾರೆ. ಇನ್ನು 9 ಬಿಜೆಪಿ ಶಾಸಕರು ಕ್ರಾಸ್ ವೋಟ್ ಮಾಡಿದ್ರೆ ಸವದಿ ಸೋಲುತ್ತಾರೆ.

ಒಟ್ಟಿನಲ್ಲಿ ಜೆಡಿಎಸ್ ಗೇಮ್​​ಗೆ ಸಿದ್ದರಾಮಯ್ಯ ಕೈ ಜೋಡಿಸಿದ್ರೆ ಭೂಕಂಪ ಗ್ಯಾರಂಟಿ

click me!