JanaMata: ಬಿಜೆಪಿಗೆ ಮೀಸಲಾತಿ ನಿರ್ಧಾರವೇ ಇಂಜಿನ್‌, ಉಳಿದವು ಬರೀ ಕರಪ್ಷನ್‌!

By Santosh NaikFirst Published Apr 21, 2023, 8:57 PM IST
Highlights

ಚುನಾವಣೆ ಇನ್ನೇನು ಘೋಷಣೆ ಆಗಬೇಕು ಅನ್ನೋವಾಗ ಬಿಜೆಪಿ ಮೀಸಲಾತಿ ವಿಚಾರದಲ್ಲಿ ದೊಡ್ಡ ನಿರ್ಧಾರವನ್ನು ಮಾಡಿತ್ತು. ಇದು ಬಿಜೆಪಿಗೆ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಲಾಭ ತರುತ್ತದೆ ಎನ್ನುವ ಪ್ರಶ್ನೆಗೆ ಜನರು ನೀಡಿರುವ ಅಭಿಪ್ರಾಯ
 

ಬೆಂಗಳೂರು (ಏ.21): ಬರೋಬ್ಬರಿ 35 ಲಕ್ಷ ಜನರು ನೀಡಿರುವ ಆನ್‌ಲೈನ್‌ ಸಮೀಕ್ಷೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ 'ಜನಮತ' ಕೇಳಲಾಗಿತ್ತು. ಇದರಲ್ಲಿ ಮುಖ್ಯವಾಗಿದ್ದು ಮೀಸಲಾತಿ ವಿಚಾರ. ಇನ್ನೇನು ಚುನಾವಣೆ ಘೋಷಣೆಯಾಗೋಕೆ ಕೆಲವೇ ದಿನಗಳು ಇರೋವಾಗ ಬಹುಮುಖ್ಯ ಮೀಸಲಾತಿ ನಿರ್ಧಾರವನ್ನು ಮಾಡಿತ್ತು. ಆ ಮೂಲಕ ಮತಬೇಟೆಗೆ ಸಜ್ಜಾಗಿತ್ತು. ಆದರೆ, ಈ ನಿರ್ಧಾರ ಚುನಾವಣೆಯಲ್ಲಿ ಅವರಿಗೆ ಎಷ್ಟು ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗಿತ್ತು. ವಿರೋಧ ಪಕ್ಷಗಳು ಬಿಜೆಪಿಯ 40 ಪರ್ಸೆಂಟ್‌ ಕಮೀಷನ್‌ ಕರಪ್ಷನ್‌ ಎನ್ನುತ್ತಿದ್ದರೆ, ಬಿಜೆಪಿ ಪಾಲಿಗೆ ಮೀಸಲಾತಿ ನಿರ್ಧಾರವೇ ಚುನಾವಣೆಗೆ ಇಂಜಿನ್‌ ಆಗುವ ಸಾಧ್ಯತೆ ಇದೆ.  ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಆ ಪ್ರಮಾಣವನ್ನು ಒಕ್ಕಲಿಗ, ಲಿಂಗಾಯತರಿಗೆ ಹಂಚಿಕೆ ಮಾಡಿದ ಬಿಜೆಪಿ ಸರ್ಕಾರದ ನಿರ್ಧಾರ ಸರಿಯೇ ಎನ್ನುವ ಪ್ರಶ್ನೆಯನ್ನು ವೆಬ್‌ಸೈಟ್‌ನಲ್ಲಿ ಕೇಳಲಾಗಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 62ರಷ್ಟು ಮಂದಿ ಇದು ಸರಿಯಾದ ನಿರ್ಧಾರ ಎಂದಿದ್ದರೆ, ಶೇ. 26ರಷ್ಟು ಮಂದಿ ಬಿಜೆಪಿ ಸರ್ಕಾರ ಮಾಡಿರುವ ಈ ನಿರ್ಧಾರ ತಪ್ಪು ತಂದಿದ್ದಾರೆ. ಇನ್ನು ಶೇ. 12 ರಷ್ಟು ಮಂದಿ ಇದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ಪ್ರಶ್ನೆಗೆ ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಶೇ 48ರಷ್ಟು ಮಂದಿ ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಶೇ. 26ರಷ್ಟು ಮಂದಿ ಇದು ತಪ್ಪು ನಿರ್ಧಾರ ಎಂದಿದ್ದರೆ, ಶೇ. 18 ರಷ್ಟು ಮಂದಿ ಇದನ್ನು ಹೇಳೋಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರಕಾರ ಯಾವುದು ಹೆಚ್ಚು ಭ್ರಷ್ಟ ಸರ್ಕಾರ? ಎನ್ನುವ ಪ್ರಶ್ನೆಗೆ, ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 19ರಷ್ಟು ಮಂದಿ ಈಗಿರುವ ಬಸವರಾಜ್‌ ಬೊಮ್ಮಾಯಿ ಅವರ ಸರ್ಕಾರವೇ ಭ್ರಷ್ಟ ಎಂದಿದ್ದರೆ, ಶೇ.17 ರಂದು ಮಂದಿ ಇದಕ್ಕೂ ಹಿಂದಿನ ಯಡಿಯೂರಪ್ಪ ಸರ್ಕಾರ ಭಷ್ಟ ಸರ್ಕಾರವಾಗಿತ್ತು ಎಂದಿದ್ದಾರೆ. ಶೇ. 18 ರಂದು ಮಂದಿ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟವಾಗಿತ್ತು ಎಂದಿದ್ದಾರೆ. ಇನ್ನು ಶೇ.46ರಷ್ಟು ಮಂದಿ ಹಾಲಿ ವಿಧಾನಭೆಯಲ್ಲಿ ಅಧಿಕಾರ ನಡೆಸಿದ ಎಲ್ಲಾ ಮೂರೂ ಸರ್ಕಾರಗಳು ಭ್ರಷ್ಟವಾಗಿತ್ತು ಎಂದಿದ್ದಾರೆ. ಇಂಗ್ಲೀಷ್‌ ವೆಬ್‌ಸೈಟ್‌ನಲ್ಲೂ ಬಹುತೇಕ ಇದೇ ರೀತಿಯ ಜನಾಭಿಪ್ರಾಯ ವ್ಯಕ್ತವಾಗಿದೆ. ಶೇ. 48 ರಷ್ಟು ಮಂದಿ ಮೂರೂ ಸರ್ಕಾರ ಭ್ರಷ್ಟವಾಗಿತ್ತು ಎಂದಿದ್ದರೆ, ಮೈತ್ರಿ ಸರ್ಕಾರ ಶೇ. 19, ಬಿಎಸ್‌ವೈ ಸರ್ಕಾರ ಶೇ. 16 ಹಾಗೂ ಬೊಮ್ಮಾಯಿ ಸರ್ಕಾರ ಶೇ. 17ರಷ್ಟು ಮಂದಿ ಭ್ರಷ್ಟವಾಗಿತ್ತು ಎಂದು ತೀರ್ಪು ನೀಡಿದ್ದಾರೆ.

ದಲಿತ ಒಳ ಮೀಸಲಾತಿ ನಿರ್ಧಾರದಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಸಿಗುತ್ತದೆಯೇ..? ಎನ್ನುವ ಪ್ರಶ್ನೆಯನ್ನೂ ಇಡಲಾಗಿತ್ತು. ಏಷ್ಯಾನೆಟ್‌ ಸುವರ್ಣನ್ಯೂಸ್‌ ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 50 ರಷ್ಟು ಮಂದಿ ಹೌದು ಎಂದಿದ್ದರೆ, ಶೇ. 25ರಷ್ಟು ಮಂದಿ ಸ್ವಲ್ಪ ಪ್ರಮಾಣದಲ್ಲಿ ಎಂದಿದ್ದಾರೆ. ಶೇ. 21 ರಷ್ಟು ಮಂದಿ ಇಲ್ಲ ಎಂದು ವೋಟ್‌ ಮಾಡಿದ್ದರೆ, ಶೇ. 3ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ಪ್ರಶ್ನೆಗೆ ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಶೇ. 36 ರಷ್ಟು ಮಂದಿ ಹೌದು ಎಂದಿದ್ದರೆ, ಶೇ. 22 ರಷ್ಟು ಮಂದಿ ಸ್ವಲ್ಪ ಪ್ರಮಾಣದ ನ್ಯಾಯ ಸಿಗಬಹುದು ಎಂದಿದ್ದಾರೆ. ಶೇ. 22 ರಷ್ಟು ಮಂದಿ ಇಲ್ಲ ಎಂದಿದ್ದರೆ, ಶೇ. 21 ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದು ಮತ ಹಾಕಿದ್ದಾರೆ.

JanaMata: ರಾಹುಲ್‌ ಗಾಂಧಿ ಪ್ರಚಾರಕ್ಕೆ ಬಂದ್ರೆ ಕಾಂಗ್ರೆಸ್‌ ಡಲ್ಲು, ಬಿಜೆಪಿ+ಜೆಡಿಎಸ್‌ ಮೈತ್ರಿ ಆದ್ರೆ ಫುಲ್‌ ಥ್ರಿಲ್ಲು!

Latest Videos

ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ತೃಪ್ತಿಕರವಾಗಿದೆಯೇ..?
ಈ ಪ್ರಶ್ನೆಗೆ ಕನ್ನಡ ವೆಬ್‌ ಸೈಟ್‌ನಲ್ಲಿ ಶೇ. 32ರಷ್ಟು ಮಂದಿ ತುಂಬಾ ತೃಪ್ತಿಯಾಗಿದೆ ಎಂದು ಹೇಳಿದ್ದಾರೆ. ಶೇ. 8ರಷ್ಟು ಮಂದಿ ಪರವಾಗಿಲ್ಲ ಎಂದಿದ್ದರೆ, ಶೇ. 21 ರಷ್ಟು ಮಂದಿ ತೃಪ್ತಿಕರವಾಗಿದೆ ಎಂದು ವೋಟ್‌ ಮಾಡಿದ್ದಾರೆ. ಶೇ. 11 ರಷ್ಟು ಮಂದಿ ಅಷ್ಟೇನೂ ತೃಪ್ತಿಯಿಲ್ಲ ಎಂದು ಹೇಳಿದ್ದರೆ, ಶೇ. 24 ರಷ್ಟು ಮಂದಿ ಸ್ವಲ್ಪವೂ ಚೆನ್ನಾಗಿಲ್ಲ ಎಂದಿದ್ದಾರೆ. ಶೇ.4ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ಪ್ರಶ್ನೆಗೆ ಇಂಗ್ಲೀಷ್ ವೆಬ್‌ಸೈಟ್‌ನಲ್ಲಿ ಶೇ. 29 ರಷ್ಟು ಮಂದಿ ತುಂಬಾ ತೃಪ್ತಿ ನೀಡಿದೆ ಎಂದಿದ್ದರೆ, ಶೇ. 10 ರಷ್ಟು ಮಂದಿ ಪರವಾಗಿಲ್ಲ ಎಂದಿದ್ದಾರೆ. ಶೇ. 15ರಷ್ಟು ಮಂದಿ ತೃಪ್ತಿಕರ ಎಂದು ಹೇಳಿದ್ದರೆ, ಶೇ.8 ರಷ್ಟು ಮಂದಿ ಅಷ್ಟೇನೂ ತೃಪ್ತಿಯಿಲ್ಲ ಎಂದಿದ್ದಾರೆ. ಶೇ. 34ರಷ್ಟು ಮಂದಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ತೀರ್ಪು ನೀಡಿದ್ದು, ಶೇ. 5ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

JanaMata: ಮೋದಿಯಿದ್ರೆ ಮಾತ್ರ ಬಿಜೆಪಿಗೆ ಬಹುಪರಾಕ್‌, ಇಲ್ದಿದ್ರೆ ಫುಲ್‌ ವೀಕ್‌!

ಗಮನಕ್ಕೆ: ಇದು ವೈಜ್ಞಾನಿಕವಾಗಿ ಮಾಡಿರುವ ಸಮೀಕ್ಷೆಯಲ್ಲ. ಇಲ್ಲಿ ಪ್ರತಿಕ್ರಿಯಿಸಿದ ಶೇಕಡಾ 48 ರಷ್ಟು ಜನರು ಕರ್ನಾಟಕದವರಲ್ಲ. ಹಾಗಾಗಿ ಹೆಚ್ಚಿನವರು ಇಲ್ಲಿ ಮತದಾರರಲ್ಲ. ಇಂಗ್ಲೀಷ್‌ನಲ್ಲಿ ಬಂದಿರುವ ಉತ್ತರಗಳು ಹಾಗೂ ಕನ್ನಡದಲ್ಲಿ ಬಂದಿರುವ ಉತ್ತರಗಳಿಗಿಂದ ಭಿನ್ನವಾಗಿರುತ್ತದೆ. ಕನ್ನಡದಲ್ಲಿ ಉತ್ತರಗಳು ರಾಜ್ಯದಲ್ಲಿನ ನೈಜ ಪರಿಸ್ಥಿತಿಗೆ ಹತ್ತಿರವಾಗಬಹುದು.
 

click me!