JanaMata: ಮೋದಿಯಿದ್ರೆ ಮಾತ್ರ ಬಿಜೆಪಿಗೆ ಬಹುಪರಾಕ್‌, ಇಲ್ದಿದ್ರೆ ಫುಲ್‌ ವೀಕ್‌!

By Santosh NaikFirst Published Apr 21, 2023, 8:30 PM IST
Highlights

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಸರ್ವೇ ಮೂಲಕ ರಾಜ್ಯದ ಜನರ ಮನದಾಳವನ್ನು ಅರಿಯುವ ಪ್ರಯತ್ನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಹಾಲಿ ಬಿಜೆಪಿ ಸರ್ಕಾರ, ವಿರೋಧ ಪಕ್ಷಗಳ ಆರೋಪ ಸೇರಿದಂತೆ ಭಿನ್ನ ಪ್ರಶ್ನೆಗಳನ್ನು ಜನರ ಮುಂದಿಟ್ಟಿತ್ತು. 

ಬೆಂಗಳೂರು (ಏ.21):  ಬಿಜೆಪಿ ರೈತ ಸ್ನೇಹಿ ಸರ್ಕಾರವೇ? ನರೇಂದ್ರ ಮೋದಿ ಪ್ರಚಾರಕ್ಕೆ ಬಂದರೆ ಬಿಜೆಪಿಗೆ ಲಾಭವಾಗುವುದೇ? ಹೀಗೇ ಇನ್ನಿತರ ಪ್ರಶ್ನೆಗಳನ್ನು ಇಟ್ಟುಕೊಂಡು ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯದ ಜನರ ಮನದಾಳವನ್ನು ಅರಿಯುವ ಪ್ರಯತ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕನ್ನಡ ಹಾಗೂ ಏಷ್ಯಾನೆಟ್‌ ನ್ಯೂಸ್‌ ಇಂಗ್ಲೀಷ್‌ ವೆಬ್‌ಸೈಟ್‌ ಮಾಡಿದ್ದವು.  ರಾಜ್ಯದ ಚುನಾವಣೆಯ ಮೇಲೆ ಪರಿಣಾಮ ಬೀರಬಲ್ಲ ಪ್ರಮುಖ ಪ್ರಶ್ನೆಗಳನ್ನು ಇರಿಸಿಕೊಂಡು ವೆಬ್‌ಸೈಟ್‌ನಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ದೊಡ್ಡ ಮಟ್ಟದ ಸ್ಪಂದನೆ ವ್ಯಕ್ತವಾಗಿದೆ. ಈ ಸಲ ಮತದಾರನ ಒಲವು ಯಾರ ಪರವಾಗಿದೆ ಯಾರ ವಿರುದ್ಧವಾಗಿದೆ ಎನ್ನುವುದರ ಸ್ಪಷ್ಟ ಜನಾಭಿಪ್ರಾಯ ಇದು ಎನ್ನಬಹುದು. ಯಾವೆಲ್ಲಾ ವಿಚಾರದಲ್ಲಿ ಜನರಿಗೆ ಆಡಳಿತಾರೂಢ ಬಿಜೆಪಿ ಪಕ್ಷದ ಮೇಲೆ ಸಿಟ್ಟಿದೆ? ರೈತರಿಗೆ ಹಾಲಿ ಸರ್ಕಾರದ ಮೇಲೆ ಸಿಟ್ಟಿದೆಯೇ ಎನ್ನುವುದರ ಬಗ್ಗೆ ಮತದಾರನ ನಾಡಿಮಿಡಿತವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೆಬ್‌ಸೈಟ್‌ ಸಂಗ್ರಹಿಸಿದೆ. ಬಿಜೆಪಿ ಪಾಲಿಗೆ ನರೇಂದ್ರ ಮೋದಿ ದೊಡ್ಡ ಅಸ್ತ್ರ ಅನ್ನೋದು ಅಭಿಪ್ರಾಯದಲ್ಲಿ ಸಾಬೀತಾಗಿದೆ. ದೇಶಾದ್ಯಂತ ಪಡೆದದ ಜನಾಭಿಪ್ರಾಯದಲ್ಲಿ ಬರೋಬ್ಬರಿ 35 ಲಕ್ಷ ಮಂದಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಅನಾನೂಕೂಲವಾಗಲಿದೆ ಎಂದು ಜನ ತಮ್ಮ ಅಭಿಪ್ರಾಯ ತಿಳಿಸಿದ್ದರೆ, ನರೇಂದ್ರ ಮೋದಿ ಪ್ರಚಾರಕ್ಕೆ ಬಂದರೆ ಕರ್ನಾಟಕದಲ್ಲಿ ಬಿಜೆಪಿಯೆ ಅನುಕೂಲವಾಗಲಿದೆಯೇ ಎಂದು ಪ್ರಶ್ನೆ ಕೇಳಲಾಗಿತ್ತು.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕನ್ನಡ ವೆಬ್‌ಸೈಟ್‌ನಲ್ಲಿ ಈ ಪ್ರಶ್ನೆಗೆ ಶೇ.58ರಷ್ಟು ಮಂದಿ ಪ್ರಧಾನಿ ಮೋದಿ ಬಂದಲ್ಲಿ ಮಾತ್ರವೇ ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಇಲ್ಲದೇ ಇದ್ದಲ್ಲಿ ಅಧಿಕಾರ ಹಿಡಿಯೋದು ಕಷ್ಟ ಎಂದಿದ್ದಾರೆ. ಇನ್ನು ಶೇ. 21 ರಷ್ಟು ಮಂದಿ ಮೋದಿ ಪ್ರಚಾರದಿಂದ ಬಿಜೆಪಿಗೆ ಎಳ್ಳಷ್ಟೂ ಪ್ರಯೋಜನವಾಗುವುದಿಲ್ಲ. ತಮ್ಮದೇ ಸ್ಥಳೀಯ ನಾಯಕರ ಮೂಲಕವೇ ಪ್ರಚಾರಕ್ಕೆ ಹೋಗಬೇಕು ಎಂದಿದ್ದಾರೆ. ಇನ್ನು ಶೇ.17ರಷ್ಟು ಮಂದಿ ಮೋದಿ ಪ್ರಚಾರಕ್ಕೆ ಬಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಬಹುದು ಎಂದು ಹೇಳಿದ್ದಾರೆ. ಇನ್ನು ಶೇ. 3ರಷ್ಟು ಮಂದಿ ಈ ವಿಚಾರದಲ್ಲಿ ಏನನ್ನೂ ಸ್ಪಷ್ಟವಾಗಿ ಹೇಳು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಏಷ್ಯಾನೆಟ್‌ ನ್ಯೂಸ್‌ ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಇದೇ ಪ್ರಶ್ನೆಗೆ, ಶೇ. 48ರಷ್ಟು ಮಂದಿ ಮೋದಿ ಪ್ರಚಾರಕ್ಕೆ ಬಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದಿದ್ದಾರೆ. ಇನ್ನು ಶೇ. 38ರಷ್ಟು ಮಂದಿ ಕರ್ನಾಟಕದಲ್ಲಿ ಮೋದಿ ಪ್ರಚಾರ ಮಾಡಿದರೆ, ಬಿಜೆಪಿಗೆ ಅನಾನುಕೂಲವೇ ಜಾಸ್ತಿ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಶೇ. 11 ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಲಾಭವಾಗಬಹುದು ಎಂದಿದ್ದಾರೆ. ಶೇ. 4ರಷ್ಟು ಮಂದಿ ಇದನ್ನು ಹೇಳಲು ಸಾಧ್ಯವಾಗದು ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಿಜೆಪಿ ರೈತ ಸ್ನೇಹಿ ಸರ್ಕಾರವೇ ಎನ್ನುವ ಪ್ರಶ್ನೆಗೆ ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 45ರಷ್ಟು ಮಂದಿ ಬಿಜೆಪಿ ರೈತ ಸ್ನೇಹಿ ಸರ್ಕಾರ ಎಂದಿದ್ದರೆ, ಶೇ. 32ರಷ್ಟು ಮಂದಿ ಇಲ್ಲ ಎಂದಿದ್ದಾರೆ. ಇನ್ನು ಶೇ.18 ರಷ್ಟು ಮಂದಿ ರೈತ ಸ್ನೇಹಿ ಸರ್ಕಾರ ಇರಬಹುದು. ಆದರೆ, ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಶೇ. 5ರಷ್ಟು ಮಂದಿ ಇದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ಪ್ರಶ್ನೆಗೆ ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಶೇ. 42ರಷ್ಟು ಮಂದಿ ಬಿಜೆಪಿಯದ್ದು ರೈತ ಸ್ನೇಹಿ ಸರ್ಕಾರವಲ್ಲ ಎಂದಿದ್ದಾರೆ. ಶೇ.39ರಷ್ಟು ಮಂದಿ ಬಿಜೆಪಿಯದು ರೈತ ಪರ ಸರ್ಕಾರ ಎಂದಿದ್ದಾರೆ. ಇನ್ನು ಶೇ. 11ರಷ್ಟು ಮಂದಿ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರೆ, ಉಳಿದವರು ಇದನ್ನು ಹೇಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ.

Latest Videos

JanaMata: ರಾಹುಲ್‌ ಗಾಂಧಿ ಪ್ರಚಾರಕ್ಕೆ ಬಂದ್ರೆ ಕಾಂಗ್ರೆಸ್‌ ಡಲ್ಲು, ಬಿಜೆಪಿ+ಜೆಡಿಎಸ್‌ ಮೈತ್ರಿ ಆದ್ರೆ ಫುಲ್‌ ಥ್ರಿಲ್ಲು!

ಬಿಜೆಪಿ ಸರ್ಕಾರದಲ್ಲಿ ಕೈಗಾರಿಕಾ ವಲಯದ ಅಭಿವೃದ್ಧಿ ಬಗ್ಗೆ ನಿಮ್ಮ ಅಭಿಪ್ರಾಯ ಏನು..? ಎನ್ನುವ ಪ್ರಶ್ನೆಗೆ ಕನ್ನಡ ವೆಬ್‌ ಸೈಟ್‌ನಲ್ಲಿ ಶೇ. 36ರಷ್ಟು ಮಂದಿ ಒಳ್ಳೆಯ ಅಭಿವೃದ್ಧಿ ಆಗಿದೆ ಎಂದಿದ್ದರೆ, ಶೇ.31ರಷ್ಟು ಮಂದಿ ಪರವಾಗಿಲ್ಲ ಕೆಲ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಶೇ. 14ರಷ್ಟು ಮಂದಿ ಅಭಿವೃದ್ಧಿ ಋಣಾತ್ಮಕವಾಗಿದೆ ಎಂದಿದ್ದರೆ, ಶೇ. 14ರಷ್ಟು ಮಂದಿ ಹೇಗಿತ್ತೋ ಹಾಗೆಯೇ ಇದೆ. ಯಾವುದೇ ಬದಲಾವಣೆ ಆಗಿಲ್ಲ ಎಂದಿದ್ದಾರೆ. ಶೇ. 5ರಷ್ಟು ಮಂದಿ ಇದನ್ನು ಹೇಳೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಇದೇ ಪ್ರಶ್ನೆಗೆ ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಶೇ. 36ರಷ್ಟು ಮಂದಿ ಒಳ್ಳೆಯ ಅಭಿವೃದ್ಧಿ ಆಗಿದೆ ಎಂದಿದ್ದರೆ, ಶೇ. 21ರಷ್ಟು ಮಂದಿ ಪರವಾಗಿಲ್ಲ ಕೆಲ ಅಭಿವೃದ್ಧಿಯಾಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಶೇ. 25ರಷ್ಟು ಮಂದಿ ಋಣಾತ್ಮಕ ಅಭಿವೃದ್ಧಿಯಾಗಿದೆ ಎಂದಿದ್ದರೆ, ಶೇ. 9ರಷ್ಟು ಮಂದಿ ಹೇಗಿತ್ತೋ ಹಾಗೆಯೇ ಇದೆ, ಬದಲಾವಣೆ ಕಾಣುತ್ತಿಲ್ಲ ಎಂದಿದ್ದಾರೆ. ಶೇ. 8ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ.

JanaMata: ಬಿಜೆಪಿಗೆ ಮೀಸಲಾತಿ ನಿರ್ಧಾರವೇ ಇಂಜಿನ್‌, ಉಳಿದವು ಬರೀ ಕರಪ್ಷನ್‌!

 

ಗಮನಕ್ಕೆ: ಇದು ವೈಜ್ಞಾನಿಕವಾಗಿ ಮಾಡಿರುವ ಸಮೀಕ್ಷೆಯಲ್ಲ. ಇಲ್ಲಿ ಪ್ರತಿಕ್ರಿಯಿಸಿದ ಶೇಕಡಾ 48 ರಷ್ಟು ಜನರು ಕರ್ನಾಟಕದವರಲ್ಲ. ಹಾಗಾಗಿ ಹೆಚ್ಚಿನವರು ಇಲ್ಲಿ ಮತದಾರರಲ್ಲ. ಇಂಗ್ಲೀಷ್‌ನಲ್ಲಿ ಬಂದಿರುವ ಉತ್ತರಗಳು ಹಾಗೂ ಕನ್ನಡದಲ್ಲಿ ಬಂದಿರುವ ಉತ್ತರಗಳಿಗಿಂದ ಭಿನ್ನವಾಗಿರುತ್ತದೆ. ಕನ್ನಡದಲ್ಲಿ ಉತ್ತರಗಳು ರಾಜ್ಯದಲ್ಲಿನ ನೈಜ ಪರಿಸ್ಥಿತಿಗೆ ಹತ್ತಿರವಾಗಬಹುದು.

click me!