ಅದ್ಧೂ​ರಿ ಜನ್ಮದಿನ ಆಚರಿಸುವ ಸಿದ್ದರಾಮಯ್ಯ ಯಾವ ಸಮಾಜವಾದಿ: ಈಶ್ವರಪ್ಪ

By Kannadaprabha News  |  First Published Jul 20, 2022, 5:00 AM IST

ಸಿದ್ದರಾಮೋತ್ಸವ ಪುಕ್ಸಟ್ಟೆ ಪ್ರಚಾರ ಹೊರತು, ಬೇರೇನು ಇಲ್ಲ. ಇಷ್ಟೊಂದು ಆಡಂಬರದ ಅಗತ್ಯವಿರಲಿಲ್ಲ. ಇಷ್ಟೊಂದು ವೆಚ್ಚದ ಬದಲಿಗೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡಬಹುದಿತ್ತು ಎಂದ ಈಶ್ವರಪ್ಪ


ಶಿವಮೊಗ್ಗ(ಜು.20): ಯಾರೇ ಆಗಲಿ ಹುಟ್ಟುಹಬ್ಬ ಮಾಡಿಕೊಳ್ಳುವುದಕ್ಕೆ ಯಾರದೂ ವಿರೋಧವಿಲ್ಲ. ಆದರೆ, ಸುಮಾರು .75 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ, ಜನ್ಮದಿನ ಆಚರಣೆ ಮಾಡಿಕೊಳ್ಳುವ ಅಗತ್ಯವೇನಿದೆ? ತಾವೊಬ್ಬ ಸಮಾಜವಾದಿ ಎನ್ನುವವರು ಇಂತಹ ಮಜಾ ಮಾಡಬಾರದು ಎಂದು ಶಾಸಕ ಹಾಗೂ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದನ್ನು ಪ್ರಶ್ನಿಸಿದರೆ ‘ಸಿದ್ದರಾಮೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಾನಲ್ಲ ಎಂದು ನಾಚಿಕೆ ಇಲ್ಲದೇ ಪ್ರತಿನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಇದು ಪುಕ್ಸಟ್ಟೆ ಪ್ರಚಾರ ಹೊರತು, ಬೇರೇನು ಇಲ್ಲ. ಇಷ್ಟೊಂದು ಆಡಂಬರದ ಅಗತ್ಯವಿರಲಿಲ್ಲ. ಇಷ್ಟೊಂದು ವೆಚ್ಚದ ಬದಲಿಗೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡಬಹುದಿತ್ತು ಎಂದರು.

ಸಿದ್ದರಾಮಯ್ಯನ ಪೂಜೆ ಮಾಡುವುದರ ಮೂಲಕ ವ್ಯಕ್ತಿ ಪೂಜೆಯನ್ನು ಕಾಂಗ್ರೆಸ್‌ನವರು ಪ್ರಾರಂಭಿಸಿದ್ದಾರೆ ಎಂದು ನನ್ನನ್ನು ಕೇಳುವುದರ ಬದಲು ಈ ಪ್ರಶ್ನೆಯನ್ನು ಸಿದ್ದರಾಮಯ್ಯಗೆ ಕೇಳಬೇಕಿದೆ. ಪ್ರವಾಹ ಮತ್ತಿತರೆ ಕಾರಣಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ 80 ನೇ ವರ್ಷದ ಹುಟ್ಟಿದ ಹಬ್ಬ ಆಚರಣೆ ಮಾಡುವುದಿಲ್ಲ. ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Tap to resize

Latest Videos

ಸಿದ್ದರಾಮೋತ್ಸವ ಮಾಡಲು ಹೊರಟಿರುವುದು ಕಾಂಗ್ರೆಸ್‌ನ ಶಿಖಂಡಿತನ: KS Eshwarappa

ಸಿಎಂ ಎನ್ನುವುದು ಇವರ ಭ್ರಮೆ:

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಇವರಿಬ್ಬರೂ ಮುಖ್ಯಮಂತ್ರಿ ಆಗುತ್ತೆವೆನ್ನುವ ಭ್ರಮೆಯಲ್ಲಿ ಬಿದ್ದಿದ್ದಾರೆ. ಇನ್ನು ಹೆಣ್ಣು ನೋಡಿಲ್ಲ, ನಿಶ್ಚಿತಾರ್ಥ ಆಗಿಲ್ಲ, ತಾಳಿ ಕಟ್ಟಿಲ್ಲ, ಮಗು ಹುಟ್ಟಿಲ್ಲ. ಹೀಗಿದ್ದರೂ ಮುಖ್ಯಮಂತ್ರಿ ನಾನೇ, ಮುಖ್ಯಮಂತ್ರಿ ನಾನೇ ಎಂದು ಹೆಸರಿಡಲು ಹೊರಟಿದ್ದಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್‌.ಈಶ್ವರಪ್ಪ

ಸಾಬರು ಇರುವ ಕ್ಷೇತ್ರದಲ್ಲಿಯೇ ಇವರ ಸ್ಪರ್ಧೆ:

ಮೊನ್ನೆ ನಡೆದ ವಿಧಾನ ಸಭೆ ಅಧಿವೇಶನ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಬದಾಮಿಯಿಂದ ಸ್ಪರ್ಧಿಸುತ್ತೇನೆ, ಬೇರೆಲ್ಲೂ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಇದೀಗ ಕೋಲಾರ, ವರುಣ, ಕೊಪ್ಪಳ ಎನ್ನುತ್ತಿದ್ದಾರೆ. ಹಾಗಾದರೆ ಬಾದಾಮಿ ಹೋಯಿತು ಎಂದರ್ಥವೇ? ಬರೆದಿಟ್ಟುಕೊಳ್ಳಿ ಸಿದ್ದರಾಮಯ್ಯ ಸ್ಪರ್ಧಿಸುವುದೇ ಸಾಬರು ಜಾಸ್ತಿ ಇರುವ ಕ್ಷೇತ್ರದಿಂದ. ಹೇಗೆ ರಾಹುಲ್‌ ಗಾಂಧಿ ಕೇರಳದ ವಯನಾಡಿಗೆ ಬಂದರೋ ನೋಡಿ. ಹಾಗೆ ಅತಿ ಹೆಚ್ಚು ಮುಸಲ್ಮಾನರು ಇರುವಂತಹ ಚಾಮರಾಜಪೇಟೆ ಜಮೀರ್‌ ಅಹ್ಮದ್‌ ಕಾಲಿಗೆ ಹೋಗಿ ಬೀಳುತ್ತಾರೆ. ಹಿಂದುಗಳು ಇರುವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಖಂಡಿತ ಸೋಲುವ ಭೀತಿ ಇದೆ. ಏಕೆಂದರೆ ಹಿಂದುಗಳಿಗೆ ಕಾಂಗ್ರೆಸ್‌ನವರು ಅಷ್ಟೊಂದು ದ್ರೋಹ ಬಗೆದಿದ್ದಾರೆ ಎಂದರು.

ಇನ್ನು ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ತಮಗಿಲ್ಲ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ಬದ್ಧನಾಗಿರುವುದಾಗಿ ಇದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳುತ್ತಾರೆ. ವ್ಯಕ್ತಿ ಪೂಜೆಗೆ ತಾವು ಸಿದ್ಧರಿಲ್ಲ ಎಂದು ಹೇಳಿದ ವ್ಯಕ್ತಿ ಇದೀಗ ಅದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಎಸ್‌.ಎಂ. ಕೃಷ್ಣ ಸಿಎಂ ಆದ ಬಳಿಕ ಒಕ್ಕಲಿಗರು ಉನ್ನತ ಸ್ಥಾನ ಪಡೆದಿಲ್ಲ. ಈಗ ಅಂತಹ ಅವಕಾಶ ಬಂದಿದೆ. ದಯವಿಟ್ಟು ಇದನ್ನು ಬಳಸಿಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಹಿಂದು-ಮುಸ್ಲಿಂ-ಕ್ರಿಶ್ಚಿಯನ್ನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎನ್ನುವ ಇವರು ಎಸ್‌.ಎಂ. ಕೃಷ್ಣ ಸಿಎಂ ಆದ ಬಳಿಕ ಇದೀಗ ಅವಕಾಶ ದೊರಕಿದೆ ಎನ್ನುತ್ತಾರಲ್ಲಾ ಹಾಗಾದರೆ ಇದು ಜಾತಿವಾದಿ ಅಲ್ಲವೇ? ನಮಗೆ ಅವಕಾಶ ದೊರಕಿದೆ ಎಂದರೇನು ಅರ್ಥ? ಹಾಗಾದರೆ ಒಕ್ಕಲಿಗ ಲೀಡರ್‌ ತಾವೇ ಎಂದು ನೇರವಾಗಿಯೇ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
 

click me!