
ಬೆಂಗಳೂರು (ಜೂ 17) ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ . ರೈತರಿಗೆ ಬೆಳೆ ವಿಮೆ ಸಿಗ್ತಿಲ್ಲ.. ರಾಜ್ಯ ಸರ್ಕಾರ ವಿಮಾ ಕಂಪನಿಗಳ ಜೊತೆ ಶಾಮೀಲಾಗಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಒಟ್ಟು 1516014 ಲಕ್ಷ ರೈತರು ಬೆಳೆ ವಿಮೆ ಕಂತು ಕಟ್ಟಿದ್ದಾರೆ. ಆದರೆ ರೈತರ ಬೆಳ ನಷ್ಟಕ್ಕೆ ಮಾತ್ರ ವಿಮಾ ಕಂಪನಿಗಳು ರೈತರಿಗೆ ಪರಿಹಾರ ನೀಡ್ತಿಲ್ಲ. ರಾಜ್ಯದಲ್ಲಿ ಪ್ರವಾಹ ಆಗಿ ಬೆಳೆ ನಷ್ಟವಾದಾಗ ವಿಮಾ ಕಂಪನಿಗಳು ರೈತರಿಗೆ ಶೇ. 25 ರಷ್ಟು ಪರಿಹಾರ ನೀಡಬೇಕಿತ್ತು. ಸುಮಾರು ಎರಡು ಸಾವಿರ ಕೋಟಿ ಪರಿಹಾರ ರಾಜ್ಯದ ರೈತರಿಗೆ ಪ್ರವಾಹದ ಸಂದರ್ಭದಲ್ಲಿ ದೊರೆಯಬೇಕಾಗಿತ್ತು. ಆದ್ರೆ ವಿಮಾ ಕಂಪನಿಗಳು ಒಂದು ರೂಪಾಯಿ ರೈತರಿಗೆ ಕೊಟ್ಟಿಲ್ಲ. ಬಿತ್ತನೆ ಬೀಜದ ಸಮಸ್ಯೆ ರಾಜ್ಯದ ರೈತರನ್ನು ತೀವ್ರವಾಗಿ ಕಾಡುತ್ತಿದೆ.
ಸರ್ಕಾರ ಪರವಾಗಿ ಕೃಷಿ ಇಲಾಖೆ, ಮುಂಚಿತವಾಗಿಯೇ ಬೀಜ ಉತ್ಪಾದಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಮುಂದಿನ ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳುಬೇಕಿತ್ತು. ಆದರೆ ಈ ಬಿಜೆಪಿ ಸರ್ಕಾರದಲ್ಲಿ ಕೃಷಿಕರ ಕಾಳಜಿಯೇ ಇಲ್ಲ. ಅಗತ್ಯ ಪ್ರಮಾಣದ ಬಿತ್ತನೆ ಬೀಜ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಿಲ್ಲ. ಪರಿಣಾಮ ಮೆಣಸಿನ ಕಾಯಿ ಬೀಜ, ಸೋಯಾಬೀನ್ ಬಿತ್ತನೆ ಬೀಜ ಸೂಕ್ತ ಪ್ರಮಾಣದಲ್ಲಿ ದೊರಕದೆ ರೈತರು ಸಂಕಷ್ಟ ಪಡುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳಿ ಹಕ್ಕಿಗೆ ಸಂಪೂರ್ಣ ಹುಚ್ಚು ಹಿಡಿದಿದೆ ಎಂದ ಬಿಜೆಪಿ ಶಾಸಕ
ಹೈದ್ರಾಬಾದ್ ಕರ್ನಾಟಕದ ಬೀದರ್ ಮತ್ತು ಕುಲ್ಬರ್ಗಿ ಹಾಗೂ ಇತರ ಭಾಗದಲ್ಲಿ ಹೆಚ್ಚಾಗಿ ಸೋಯಾಬೀನ್ ಬೆಳೆಯುತ್ತಾರೆ. ಆದರೆ ಸರ್ಕಾರ ಸೂಕ್ತ ಸಮಯದಲ್ಲಿ ಬಿತ್ತನೆ ಬೀಜಕ್ಕೆ ಒಪ್ಪಂದ ಮಾಡಿಕೊಳ್ಳದ ಕಾರಣ, ಬಿತ್ತನೆ ಬೀಜ ಬೆಲೆಯನ್ನು ಹೆಚ್ಚಳ ಮಾಡಿದ್ದು, ಬಹುತೇಕ ದುಪ್ಪಟ್ಟಾಗಿದೆ. ಕಳೆದ ವರ್ಷ ಸೋಯಾಬೀನ್ ಬಿತ್ತನೆ ಬೀಜ 30 ಕೆ.ಜಿ. ಚೀಲದ ದರ 1,260 ರೂಪಾಯಿ ಇದ್ದದ್ದು ಈ ವರ್ಷ 2,370 ರೂ. ಆಗಿದೆ. ಇದು ಮೊದಲೇ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳು ಸದ್ಯದಲ್ಲೇ ನಡೆಯಲಿವೆ. ಆಗಸ್ಟ್ 15 ರ ನಂತರ ರಾಜಕೀಯ ಬದಲಾವಣೆಗಳು ಗೋಚರಿಸ್ತಿವೆ ಎಂದು ಹೊಸ ಭವಿಷ್ಯ ಹೇಳಿದರು.
ಯಡಿಯೂರಪ್ಪ ಅವರನ್ನ ಸಿಎಂ ಆಗಿ ಮುಂದುವರಿಸುವುದು ಬಿಜೆಪಿ ಆಂತರಿಕ ವಿಚಾರ. ನಾನು ಆ ಬಗ್ಗೆ ಕಮೆಂಟ್ ಮಾಡಲ್ಲ. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ 17 ಜನ ಮಿತ್ರಮಂಡಳಿ ಶಾಸಕರೇ ಪ್ರತಿಕ್ರಿಯೆ ನೀಡಿದ್ದಾರೆ. ಈಗ 17 ಶಾಸಕರಿಗೆ ಪಶ್ಚಾತಾಪ ಕಾಡುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.