‘ಸುಪ್ರೀಂ ನೀಡಿದ ತೀರ್ಪು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಂದು ಪಾಠ’

By Web Desk  |  First Published Nov 13, 2019, 2:53 PM IST

ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದೆ| ಸುಪ್ರೀಂ ನಮ್ಮ ಸ್ಪೀಕರ್ ರಮೇಶಕುಮಾರ್ ಅವರ ಆದೇಶವನ್ನು ಎತ್ತಿ ಹಿಡಿದಿದೆ|  ಈ ತೀರ್ಪಿನಿಂದ ಗೊತ್ತಾಗುತ್ತೆ ಇಲ್ಲಿ‌ ಕುದುರೆ ವ್ಯಾಪಾರ ಆಗಿದೆ ಅಂತ|ಬಿಜೆಪಿಯ ಆಮಿಷಕ್ಕೆ ಒಳಗಾಗಿ 17 ಶಾಸಕರು ಪಕ್ಷ ಬದಲಾಯಿಸಿದ್ದಾರೆ|


ರಾಯಚೂರು[ನ.13]: ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಂದು ಪಾಠವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಸುಪ್ರೀಂ ಕೋರ್ಟ್ ನಮ್ಮ ಸ್ಪೀಕರ್ ರಮೇಶಕುಮಾರ್ ಅವರ ಆದೇಶವನ್ನು ಎತ್ತಿ ಹಿಡಿದಿದೆ. ಈ ತೀರ್ಪಿನಿಂದ ಗೊತ್ತಾಗುತ್ತೆ ಇಲ್ಲಿ‌ ಕುದುರೆ ವ್ಯಾಪಾರ ಆಗಿದೆ ಎಂಬುದು ತಿಳಿದುಬರುತ್ತದೆ ಎಂದು ಹೇಳಿದ್ದಾರೆ. 

Latest Videos

undefined

ನಮಗೆ ಬೇಕಾಗಿದ್ದ ತೀರ್ಪು ಬಂದಿದೆ ಎಂದ ಅನರ್ಹ ಶಾಸಕ

ಬಿಜೆಪಿಯ ಆಮಿಷಕ್ಕೆ ಒಳಗಾಗಿ 17 ಶಾಸಕರು ಪಕ್ಷ ಬದಲಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು.  ಕೇಂದ್ರ ಗೃಹ ಮಂತ್ರಿ ಅಮಿತ್ ಶಾ  ಕೂಡ ರಾಜೀನಾಮೆ ‌ನೀಡಬೇಕು ಎಂದು ಈಶ್ವರ್ ಖಂಡ್ರೆ ಅವರು ಒತ್ತಾಯಿಸಿದ್ದಾರೆ. 

ಸೋತರೂ ಗೆದ್ದ ಅನರ್ಹ ಶಾಸಕರು: ಚುನಾವಣೆಗೆ ಸ್ಪರ್ಧೆಗೆ ಅಸ್ತು ಎಂದ ಸುಪ್ರೀಂ

ರಾಜ್ಯ 17 ಅನರ್ಹ ಶಾಸಕರ ತೀರ್ಪು ಕೊನೆಗೂ ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ. ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಇದೇ ವೇಳೆ ರಿಲೀಫ್ ಕೂಡ ನೀಡಿದೆ. ರಾಜ್ಯದಲ್ಲಿ ಶೀಘ್ರ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಹೇಳಿದೆ. 

ಸೋತು ಬೀಗಿದ ಅನರ್ಹರು: ಚುನಾವಣೇಲಿ ಗೆದ್ದರೆ ಸಚಿವ ಪದವಿ ಖಚಿತ!

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ನ.18 ರಂದು ಕಡೆಯ ದಿನ. 19 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5 ಕ್ಕೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.
 

click me!