ಎಚ್‌.ಡಿ.ಕುಮಾರಸ್ವಾಮಿಗೆ ಅಮಿತ್‌ ಶಾ ಸುಪಾರಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಆರೋಪ

By Kannadaprabha NewsFirst Published Nov 30, 2023, 12:43 PM IST
Highlights

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಅಮಿತ್‌ ಶಾ ಅವರು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಅವರು ಆರೋಪಿಸಿದ್ದಾರೆ.

ಚಿಕ್ಕಮಗಳೂರು (ನ.29): ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಅಮಿತ್‌ ಶಾ ಅವರು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಅವರು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್‌ ಶಾ ಕೊಟ್ಟಿರುವ ಕೆಲಸವನ್ನ ಕುಮಾರಸ್ವಾಮಿ ನೀಟಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಬೆಳಗ್ಗೆ ಎದ್ದೊಡನೆ, ಸಂಜೆ ಪ್ರೆಸ್‌ಮೀಟ್‌ ಮಾಡಬೇಕು, ಸಿದ್ದರಾಮಯ್ಯ ಅವರನ್ನು ಬೈಯ್ಯಬೇಕು, ಡಿ.ಕೆ. ಶಿವಕುಮಾರ್‌ ಅವರನ್ನು ಬೈಯ್ಯಬೇಕು ಎನ್ನುವ ಕೆಲಸವನ್ನು ಅಮಿತಾ ಶಾ ಅವರು ಕುಮಾರಸ್ವಾಮಿ ಅವರಿಗೆ ವಹಿಸಿದ್ದಾರೆ. 

ಹಾಗಾಗಿ ಅವರು ತಪ್ಪದೆ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಕುಮಾರಸ್ವಾಮಿ ಪೆನ್‌ಡ್ರೈವ್ ತೋರ್ಸುದ್ರಲ್ಲಾ ಅದೇನಾಯ್ತು ಎಂದು ಮಾಧ್ಯಮದವರು ದಯಮಾಡಿ ಹೇಳಬೇಕು. ಪ್ರತಿ ದಿನ ಪ್ರೆಸ್ ಮೀಟ್ ಮಾಡ್ತಾರೆ, ಎಲ್ಲಾದ್ರು ಲಾಜಿಕ್ ಎಂಡ್‌ಗೆ ತೆಗೆದುಕೊಂಡು ಹೋಗ್ತಾರಾ? ಮಾಧ್ಯಮಗಳಿಗೆ ಬೆಳಗ್ಗೆಯಿಂದ ಸಂಜೆವರೆಗೆ ಚರ್ಚೆಗೆ ವಸ್ತು ಕೊಡ್ತಿದ್ದಾರೆ ಅಷ್ಟೆ ಎಂದು ಹೇಳಿದರು. 

Latest Videos

ಶಾಸಕರೇ ವೃಥಾ ಆರೋಪ ಬಿಡಿ, ನಿಮ್ಮ ಸಾಧನೆಗಳು ಮಾತನಾಡಲಿ: ಸಂಸದ ಮುನಿಸ್ವಾಮಿ

ಯತೀಂದ್ರ ಅವರು ಸಿಎಸ್ಆರ್ ಫಂಡ್ ಬಗ್ಗೆ ಮಾತನಾಡಿರುವುದು ಕುಮಾರಸ್ವಾಮಿ ಅವರು ದಂಧೆ ಅನ್ನುತ್ತಿದ್ದಾರೆ. ಇವರ ಕಾಲದಲ್ಲಿ ಇನ್ಸ್‌ಸ್ಪೆಕ್ಟರ್‌ಗೆ 70- 80 ಲಕ್ಷ ರು. ಫಿಕ್ಸ್‌ ಮಾಡಿದ್ದು, ಶೇ. 40ರ ಆಧಾರದಲ್ಲಿ ಕೆಲಸ ಮಾಡೋ ಚಾಳಿ ಬಿಜೆಪಿ, ಜೆಡಿಎಸ್‌ಗೆ ಇರೋದು. ಸಿದ್ದು ಸರ್ಕಾರದಲ್ಲಿ ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡಿದ್ದಾರೆಂದು ಒಬ್ಬರಾದರೂ ಹೇಳಲಿ ನೋಡೋಣ. ಹಣ ಪಡೆದು ವರ್ಗಾವಣೆ ಮಾಡಿದ್ರೆ ಇಷ್ಟೊತ್ತಿಗೆ ಹೊರಬರ್ತಿತ್ತು. ಆಧಾರ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಕಾಂಗ್ರೆಸ್‌ ಪ್ರಣಾಳಿಕೆ: ಶಿಕ್ಷಕರ ದೊಡ್ಡ ಬೇಡಿಕೆಯಾದ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆಯನ್ನು ಮುಂಬರುವ ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದ್ದು, ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಮೈಸೂರು ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್‌ ಹೇಳಿದ್ದಾರೆ.  ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ನೌಕರರ ವಿರೋಧಿ ಕೆಲಸವನ್ನು ಬಿಜೆಪಿ, ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಮಾಡಿದ್ದಾರೆ. 

ಆದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ರಾಜ್ಯದಲ್ಲೂ ಇದು ಜಾರಿಯಾಗಲಿದೆ ಎಂದು ತಿಳಿಸಿದರು. ಲಕ್ಷ್ಮಣ್‌ ಮೈಸೂರು ಮಾತನಾಡಿ, 4 ಶಿಕ್ಷಕರ ಕ್ಷೇತ್ರ, 3 ಪದವೀಧರ ಕ್ಷೇತ್ರ ಸೇರಿ 7 ಎಂಎಲ್ಸಿ ಸ್ಥಾನಗಳಿಗೆ ಮುಂದಿನ ವರ್ಷ ಜೂನ್‌ನಲ್ಲಿ ಚುನಾವಣೆ ನಡೆಯಲಿದೆ. ಮಂಜುನಾಥ್ ಅವರು ಹಿಂದಿನ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದಾಗ ಕೇವಲ 170 ಮತಗಳಿಂದ ಪರಾಭವಗೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅತಿ ಕಡಿಮೆ ಮತಗಳಿಂದ ಸೋತಿದ್ದರು. ಈ ಬಾರಿಯ ಚುನಾವಣೆಗೂ ಅವರನ್ನೇ ಆಯ್ಕೆ ಮಾಡಲಾಗಿದೆ. 

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಂಚ ಗ್ಯಾರಂಟಿ ಜಾರಿ: ಸಂಸದ ಡಿ.ಕೆ.ಸುರೇಶ್

ಅವರು ಚುನಾಯಿತರಾದ ಬಳಿಕ ರಾಜ್ಯದಲ್ಲಿ 4 ವರ್ಷಗಳ ಕಾಲ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿ ಇರುವುದರಿಂದ ಶಿಕ್ಷಕರ ಸಾಕಷ್ಟು ಬೇಡಿಕೆಗಳಿಗೆ ಸ್ಪಂದಿಸಲು ಉತ್ತಮ ಅವಕಾಶ ಒದಗಲಿದೆ ಎಂದು ತಿಳಿಸಿದರು. ಹಾಲಿ ಎಂಎಲ್ಸಿ ಭೋಜೆಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತರಾಗಿದ್ದರೂ ಕಳೆದ 6 ವರ್ಷಗಳಲ್ಲಿ ಶಿಕ್ಷಕರಿಗಾಗಿ ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ತಿಳಿಸಲಿ. ಶಿಕ್ಷಕರ ಸಮಸ್ಯೆ ನೂರಾರಿವೆ. ಅವುಗಳಲ್ಲಿ ಒಂದಾದರೂ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದರು.

click me!