7 ಬಾರಿ ಈ ಕ್ಷೇತ್ರದ ಸಂಸದರಾಗಿ ಹತ್ತು ವರ್ಷ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ತಮ್ಮ ಅಧಿಕಾರಾವಧಿಯಲ್ಲಿ ತಂದಿರುವ ಐದಾರು ಪಟ್ಟು ಹೆಚ್ಚು ಹಣವನ್ನು ಅಂದರೆ, ₹400 ಕೋಟಿಯನ್ನು ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ತಂದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ.
ಮಾಲೂರು (ನ.29): 20 ಕೋಟಿ ವೆಚ್ಚದಲ್ಲಿ ಮಾಲೂರು ರೈಲ್ವೇ ನಿಲ್ದಾಣವನ್ನು ಹೈಟೆಕ್ ನಿಲ್ದಾಣ ಮಾಡಲಾಗುವುದು ಎಂದು ಸಂಸದ ಮುನಿಸ್ವಾಮಿ ಹೇಳಿದರು. ಅವರು ಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಅಮೃತ್ ಭಾರತ್ ಯೋಜನೆಯಡಿ ನಡೆಯುತ್ತಿರುವ ₹20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಪತ್ರಕರ್ತರೂಡನೆ ಮಾತನಾಡುತ್ತ ರೈಲ್ವೇ ನಿಲ್ದಾಣದಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜತೆಯಲ್ಲಿ ರಾಜ್ಯದಲ್ಲೇ ಬಂಗಾರಪೇಟೆ ಹಾಗೂ ಮಾಲೂರು ರೈಲ್ವೇ ನಿಲ್ದಾಣವನ್ನು ಆಧುನೀಕತೆಯ ಮಾದರಿ ಸ್ಟೇಷನ್ ಮಾಡಲಾಗುವುದು ಎಂದರು.
7 ಬಾರಿ ಈ ಕ್ಷೇತ್ರದ ಸಂಸದರಾಗಿ ಹತ್ತು ವರ್ಷ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ತಮ್ಮ ಅಧಿಕಾರಾವಧಿಯಲ್ಲಿ ತಂದಿರುವ ಐದಾರು ಪಟ್ಟು ಹೆಚ್ಚು ಹಣವನ್ನು ಅಂದರೆ, ₹400 ಕೋಟಿಯನ್ನು ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ತಂದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕಳೆದ ಐದಾರು ದಶಕಗಳಿಂದ ನನೆಗುದ್ದಿಗೆ ಬಿದಿದ್ದ ರೈಲ್ವೇ ಸೇತುವೆ ಅಗಲೀಕರಣಕ್ಕೆ ಈಗ ಮುಕ್ತಿ ಸಿಗುತ್ತಿದ್ದು, ಗಡ್ಕರಿ ಸಾಹೇಬರ ಕೃಪೆಯಿಂದ ನ್ಯಾಷನಲ್ ಹೈವೇ ಇಲಾಖೆಯ ಸಹಕಾರದಲ್ಲಿ ಸಿಆರೈಎಫ್ ಯೋಜನೆಯಡಿ ₹30 ಕೋಟಿ ಮಂಜೂರು ಮಾಡಲಾಗಿದ್ದು, ಮುಂದಿನ ವಾರ ರೈಲ್ವೇ ಅಧಿಕಾರಿಗಳ ಜತೆ ಜಂಟಿ ಸರ್ವೆ ನಡೆಸಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು.
undefined
ಆತ್ಮಸಾಕ್ಷಿಯಿಂದ ಕೆಲಸ ಮಾಡಿದರೆ ಮಾತ್ರ ರಾಜಕಾರಣದಲ್ಲಿ ಉಳಿಯಲು ಸಾಧ್ಯ: ಡಿ.ಕೆ.ಸುರೇಶ್
ಈ ತಾಲೂಕಿನ ಮಗನಾಗಿ ಕ್ಷೇತ್ರ ಮತದಾರರ ಋಣ ತೀರಿಸಲು ಸದಾ ಶ್ರಮಿಸುತ್ತಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ದಾಖಲೆಯ ₹400 ಕೋಟಿ ಅಭಿವೃದ್ಧಿಗಳು ಮಾತನಾಡುತ್ತಿವೆ ಎಂದರು. ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ಯೋಜನೆಗಳನ್ನು ತಮ್ಮ ಸಾಧನೆ ಎನ್ನುವ ಸ್ಥಳೀಯ ಶಾಸಕರು, ಕೇಂದ್ರ ಸರ್ಕಾರ ಮಂಜೂರು ಮಾಡಿದ್ದನ್ನು ರಾಜ್ಯ ಸರ್ಕಾರದ ಕೊಡುಗೆ ಎನ್ನುತ್ತಿದ್ದು, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅವರು ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್. ಅವರು ನನ್ನ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಹಣ ತರಲಿ ಎಂದರು.
₹2100 ಕೋಟಿ ಯರಗೋಲು ಯೋಜನೆಗೆ ಬಿಜೆಪಿ ಸರ್ಕಾರದಿಂದ ಬಂದ ಹಣ ₹1880 ಕೋಟಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಗಿಯವರೆಗೂ ಪ್ರತಿ ಕ್ಷೇತ್ರದ ರಸ್ತೆ ರಿಪೇರಿಗಳಿಗಾಗಿ ತಲಾ ೨೫-೨೭ ಕೋಟಿ ರು. ಮಂಜೂರು ಮಾಡಿತ್ತು. ಆದರೆ ಈ ಸರ್ಕಾರ ಬಂದ ಮೇಲೆ ಕ್ಷೇತ್ರಗಳಿಗೆ ತಲಾ ಒಂದು ಕೋಟಿ ಸಹ ನೀಡಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದ ಸಂಸದರು, ಐದು ಗ್ಯಾರಂಟಿಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಆರು ತಿಂಗಳಲ್ಲಿ ಜನರಿಂದ ತಿರಸ್ಕಾರಗೊಂಡಿದೆ ಎಂದರು.
ಗೆದ್ದು ಆರು ತಿಂಗಳಾದರೂ ಕ್ಷೇತ್ರಕ್ಕೆ ನಯಾ ಪೈಸೆ ಬಿಡುಗಡೆ ಮಾಡದಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಲೋಕಸಭೆ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ‍್ಯಗಳ ಪಟ್ಟಿ ನೀಡುವೆ. ಇಲ್ಲಿನ ಶಾಸಕ ನಂಜೇಗೌಡರು ತಮ್ಮ 5 ವರ್ಷ 6 ತಿಂಗಳ ಅಧಿಕಾರವಾಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ‍್ಯಗಳ ಪಟ್ಟಿ ನೀಡಿಲಿ ನೋಡೋಣ ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಂಚ ಗ್ಯಾರಂಟಿ ಜಾರಿ: ಸಂಸದ ಡಿ.ಕೆ.ಸುರೇಶ್
ಅತಿ ಕಡಿಮೆ ಮತಗಳಲ್ಲಿ ಗೆದ್ದ ನೀವು, ದುಪಟ್ಟು ಮತದಾರರ ವಿಶ್ವಾಸ ಪಡೆಯುವಲ್ಲಿ ವಿಫಲರಾಗಿದ್ದೀರಿ ಎಂಬುದನ್ನು ಮರೆಯಬೇಡಿ ಎಂದರು. ಸದರನ್ ರೈಲ್ವೇ ವಲಯದ ಎಡಿ ರಾಮ್ ಮೋಹನ್ ರಾವ್, ಸಹಾಯಕ ಅಭಿಯಂತರ ನಿಪುಣ್, ಬಿಜೆಪಿ ಮುಖಂಡರಾದ ಚಂದ್ರಾ ರೆಡ್ಡಿ, ಮಾಜಿ ಜಿ.ಪಂ. ಸದಸ್ಯ ಮಹೇಶ್, ಕಾರ್ಯದರ್ಶಿ ವೆಂಕಟೇಶ್, ಶಶಿಧರ್, ದೂಡ್ಡಿ ರಾಜಪ್ಪ, ಪುರಸಭೆ ಸದಸ್ಯ ವೇಮನ, ತೇಜಸ್, ಚಂದ್ರಶೇಖರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪದ್ಮಾವತಿ ನಾರಾಯಣಸ್ವಾಮಿ, ಅಮುದಾ ವೇಣು, ಅನಿತಾ, ಬೆಳ್ಳಾವಿ ಸೋಮಣ್ಣ, ರಾಮಕೃಷ್ಣ ಗೌಡ, ರೇಣುಕಾ ಪ್ರಸಾದ್, ನಾಗರಾಜ್ ಇನ್ನಿತರರು ಇದ್ದರು.