ನಮ್ಮ ಹೇಳಿಕೆಗಳಿಂದ ಬೇಸರವಾಗಿದ್ರೆ ಕ್ಷಮೆ ಕೇಳ್ತಿನಿ: ಡಿಕೆಶಿ ಮಾತಿನ ಅರ್ಥ ನಿಗೂಢ!

By Suvarna News  |  First Published Nov 2, 2021, 7:51 PM IST

* ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಪ್ರಕಟ
* ನಮ್ಮ ಹೇಳಿಕೆಗಳಿಂದ ಬೇಸರವಾಗಿದ್ರೆ ಕ್ಷಮೆ ಕೇಳ್ತಿನಿ ಎಂದ ಡಿಕೆಶಿ 
* ಡಿಕೆ ಶಿವಕುಮಾರ್ ಮಾತಿನ ಒಳ ಅರ್ಥ ಏನು?


ಬೆಂಗಳೂರು, (ನ.02): ಜಿದ್ದಾಜಿದ್ದಿಗೆ ಕಾರಣವಾಗಿದ್ದ  ಹಾವೇರಿಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ (By Election Result) ಇಂದು (ನ.02) ಹೊರಬಿದ್ದಿದೆ. 

ಹಾನಗಲ್​ನಲ್ಲಿ (Hangal) ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ (Srinivas Mane) ಗೆಲುವು ಸಾಧಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ.  

Latest Videos

undefined

ಬೈ ಎಲೆಕ್ಷನ್ ಅಖಾಡದಲ್ಲಿ 'ಜನನಾಯಕರ' ಬಾಯಲ್ಲಿ ಹಳಿ ತಪ್ಪಿದ ಮಾತುಗಳು!

ಚುನಾವಣೆ ಫಲಿತಾಂಶದ ವೇಳೆ ಮೂರು ಪಕ್ಷಳ ನಾಯಕರ ಆರೋಪ-ಪ್ರತ್ಯಾರೋಗಳು ತೀರಾ ಕೆಳಮಟ್ಟಕ್ಕೆ ಹೋಗಿದ್ದವು. ಅಲ್ಲದೇ ವೈಯಕ್ತಿ ಬಯದಾಟಗಳಿಗೂ ಇಳಿದಿದ್ರು. ಹಾಗಾಗಿ ಬೈ ಎಲೆಕ್ಷನ್ ಎನ್ನುವುದು ಬೈಯುವ ಎಲೆಕ್ಷನ್‌ ಆಗಿದೆ ಎಂದು ಜನರು ಹಾಡಿಕೊಂಡು ನಕ್ಕರು. ಇದೀಗ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕ್ಷಮೆ ಕೇಳುವ ಮಾತುಗಳನ್ನಾಡಿದ್ದಾರೆ. 

ಡಿಕೆಶಿ ಮಾತಿನ ಅರ್ಥ ನಿಗೂಢ
ಕುಮಾರಸ್ವಾಮಿ (HD Kumaraswamy) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ನಡೆದಿದ್ದ ವಾಕ್ಸಮರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ಹೇಳಿಕೆಗಳಿಂದ ಬೇಸರವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. 

 ಡಿಕೆಶಿ ಮಾತಿನ ಒಳ ಅರ್ಥ ಏನು? ಸಿದ್ದು ಹೇಳಿಕೆ ಸರಿ ಇರಲಿಲ್ಲ ಎನ್ನೋದನ್ನ ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದ್ರಾ? ಹೀಗಾಗಿ ಕ್ಷಮೆ ಕೇಳ್ತೇನೆ ಎಂದ್ರಾ ಕೆಪಿಸಿಸಿ ಅಧ್ಯಕ್ಷ  ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಬೆಳಗ್ಗೆ ಮಾಧ್ಯಮಕ್ಕೆ ಮಾತಾಡುವಾಗಲೂ ಟಾಂಗ್ ನೀಡಿದ್ದ ಡಿಕೆ, ನಮ್ಮ ನಾಯಕರು ಮಾತಾಡಿದ್ದು ಸರಿ ಇತ್ತು ಎಂದು ನಾನು ಹೇಳಲ್ಲ ಅಂದಿದ್ರು.

ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಚಾರವೇ ಪ್ರಖರವಾಗಿತ್ತು. ಸಿದ್ದರಾಮಯ್ಯ ಜೆಡಿಎಸ್ ಮತ್ತು  ಆರ್ ಎಸ್ ಎಸ್ ಮೇಲೆ ತೀವ್ರ ವಾಗ್ದಾಳಿ ಮಾಡಿದ್ರು. ಈಗ ನಮ್ಮಿಂದ ನೋವಾಗಿದ್ರೆ ಕ್ಷಮೆ ಕೇಳ್ತೇನೆ ಎಂದು ಡಿಕೆಶಿ  ಹೇಳಿತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಸ್ಥಳಿಯ ಕಾರ್ಯಕರ್ತರಿಂದ ಚುನಾವಣೆ ಗೆದ್ವಿ ಎಂದಿದ್ದ ಡಿಕೆ, ನಾವೆಲ್ಲಾ ಲೀಡರ್ಸ್ ಹೋಗಿ ಮಾಡಿದ ಪ್ರಚಾರ ದೊಡ್ಡದಲ್ಲ ಎಂದಿದ್ರು. ಹಾನಗಲ್ ಲ್ಲೆ ಬೀಡು ಬಿಟ್ಟು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿದ್ದರಾಮಯ್ಯಗೆ ಗೆಲುವಿನ ಕ್ರೆಡಿಟ್  ಕೊಡಲು ಡಿಕೆಶಿ ಹಿಂದೇಟು ಹಾಕಿದ್ರಾ ಎನ್ನುವ ಚರ್ಚೆಗೆ ಗ್ರಾಸವಾಗಿದೆ.

ಇಡೀ ಭಾರತದಲ್ಲಿ ಬದಲಾವಣೆ ಅಲೆ ಪ್ರಾರಂಭ
ಇನ್ನು ಈ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಈ ಉಪಚುನಾವಣೆಯ ಫಲಿತಾಂಶ ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಲ್ಲ, ಇಡೀ ಭಾರತದಲ್ಲಿ ಬದಲಾವಣೆ ಅಲೆ ಪ್ರಾರಂಭವಾಗಿದೆ ಎಂದು ಹೇಳಿದರು.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ. ಸಿಂದಗಿ ಕ್ಷೇತ್ರದ ಮತದಾರರ ತೀರ್ಪು ಗೌರವಿಸುತ್ತೇವೆ. ಆದರೆ ಕೊಟ್ಟ ಮತವನ್ನು ಗೌರವದಿಂದ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

ಸಿಂದಗಿಯಲ್ಲಿ ಯಾರ ಜತೆಗೂ ಮೈತ್ರಿ ಮಾಡಿಕೊಂಡಿರಲಿಲ್ಲ. ಸಿಂದಗಿ ಕ್ಷೇತ್ರದಲ್ಲಿ ಈ ಬಾರಿ ಪಡೆದ ಮತ ಖುಷಿ ತಂದಿದೆ. ಮುಂದೆ ಸಿಂದಗಿ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲಿದ್ದೇವೆ. ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಕೆಲಸ ಮಾಡಬೇಕು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

ಸಿಂದಗಿ ಸೋಲಿಗೆ ಸ್ಪಷ್ಟನೆ
ಬಿಜೆಪಿಗೆ ತನ್ನ ಸ್ಥಾನ ಉಳಿಸಿಕೊಳ್ಳಲು ಆಗ್ಲಿಲ್ಲ ಸಿಂದಗಿಯಲ್ಲಿ ನಾವು ಸೋತಿದ್ದೇವೆ. ಕಳೆದ ಚುನಾವಣೆಲಿ ನಾವು ಮೂರನೇ ಸ್ಥಾನದಲ್ಲಿ ಇದ್ದೆವು ಎಂದು ಸಿಂದಗಿ ಸೋಲನ್ನು ಸಮರ್ಥಿಸಿಕೊಂಡರು.

ಕೊಟ್ಟ ಮತವನ್ನು ಗೌರವದಿಂದ ಸ್ವೀಕಾರ ಮಾಡ್ತೇವೆ. ಸ್ವಾಭಿಮಾನಿ ಮತದಾರರು ಆಮೀಷಕ್ಕೆ ಒಳಗಾಗಿಲ್ಲ. ಕಾಂಗ್ರೆಸ್ ಧ್ವಜ ಹಿಡಿದು ಮತ ಕೇಳಿದ್ದಾರೆ/ ಅಭಿಮಾನದಿಂದ ಮತ ಕೊಟ್ಟಿದ್ದಾರೆ. ನಾವು ವಿಪಕ್ಷವಾಗಿ ಇದ್ದು ಮುಂದಿನ ದಿನಗಳಲ್ಲಿ ಕೆಲಸ ಮಾಡ್ತೇವೆ. ನಾವು ಯಾರ ಜೊತೆಯೂ ಅಲೈನ್ಸ್ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಂದಗಿಯಲ್ಲಿ ವೋಟ್ ಬ್ಯಾಂಕ್ ಹೆಚ್ಚಾಗಿದೆ. ನಾವು ಪಕ್ಷ ನಮ್ಮ ಸಿದ್ಧಾಂತದ ಮೇಲೆ ಚುನಾವಣೆ ಮಾಡಿದ್ದೇವೆ. ಯಡಿಯೂರಪ್ಪರು ಎನ್ ಹೇಳಿದ್ರು ಕೇಳೊಣ ಅವರು ದೊಡ್ಡವರು. ಮುಖ್ಯಮಂತ್ರಿ ಕ್ಷೇತ್ರ ಅದು ಇದು ನಾವು ನೋಡಿಲ್ಲ ನಾವು ಸಿದ್ಧಾಂತದ ಮೇಲೆ ಚುನಾವಣೆ ಮಾಡಿದ್ದೇವೆ ಎಂದರು.

click me!