ಐಕ್ಯತಾ ಯಾತ್ರೆ ಮೂಲಕ ದೇಶದಲ್ಲಿ ಬದಲಾವಣೆ ತರಬೇಕು: ಡಿಕೆಶಿ

By Govindaraj S  |  First Published Sep 17, 2022, 9:18 PM IST

ಭಾರತ ಐಕ್ಯತಾ ಯಾತ್ರೆ ಈ ದೇಶದಲ್ಲಿ ಬದಲಾವಣೆ ತರಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ತುಂಬಿ ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಈ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಐಕ್ಯತಾ ಯಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. 


ಶಿರಾ (ಸೆ.17): ಭಾರತ ಐಕ್ಯತಾ ಯಾತ್ರೆ ಈ ದೇಶದಲ್ಲಿ ಬದಲಾವಣೆ ತರಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ತುಂಬಿ ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಈ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಐಕ್ಯತಾ ಯಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದ ಶ್ರೇಯಸ್‌ ಕಂಫರ್ಟ್‌ನಲ್ಲಿ ಗುರುವಾರ ಸಂಜೆ ಭಾರತ ಐಕ್ಯತಾ ಯಾತ್ರೆಯ ಪಾದಯಾತ್ರೆ ಶಿರಾ ನಗರದ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ನಂತರ ಕಾರ್ಯಕರ್ತರೊಂದಿಗೆ ಚರ್ಚಿಸಿ ಮಾತನಾಡಿದರು. 

ಭಾರತ ಐಕ್ಯತಾ ಯಾತ್ರೆಯ ಯಶಸ್ವಿಗೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪ್ರತಿ ಪಂಚಾಯಿತಿ, ಪ್ರತಿ ಹಳ್ಳಿಗೂ ಹೋಗಿ ಪ್ರತಿ ಮನೆಯವರನ್ನು ಕರೆತರಬೇಕು. ಜೆಡಿಎಸ್‌ ಪಕ್ಷದವರಾಗಲಿ, ಬಿಜೆಪಿ ಪಕ್ಷದವರಾಗಲಿ ಎಲ್ಲರನ್ನು ಆಹ್ವಾನಿಸಿ ಮತ್ತೊಮ್ಮೆ ದೇಶಕ್ಕೆ ಬದಲಾವಣೆಯನ್ನು ಕರ್ನಾಟಕದ ಮೂಲಕ ನೀಡೋಣ. ಎಲ್ಲಾ ಧರ್ಮದ ನಾಯಕರು ಎಲ್ಲರೂ ಭಾರತ ಐಕ್ಯತಾ ಯಾತ್ರೆಗೆ ಕೈಜೋಡಿಸಿ. ರಾಜ್ಯದ ನಾಯಕರು ನಿಮ್ಮ ಗ್ರಾಮಕ್ಕೆ ಬರುತ್ತಿದ್ದಾರೆ. ನಿಮ್ಮ ಶಕ್ತಿ ಪ್ರದರ್ಶನ ತೋರಿಸಿ ಎಂದರು.

Tap to resize

Latest Videos

ಪಾವಗಡ: ಸ್ಫೋಟಕ ಬಳಸಿ ಗ್ರಾಪಂ ಕಚೇರಿ ಧ್ವಂಸಕ್ಕೆ ಯತ್ನ

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರಾಹುಲ್‌ ಗಾಂಧಿಯವರು ಭಾರತ ಐಕ್ಯತಾ ಯಾತ್ರೆ ಮಾಡುವ ಮೂಲಕ ಈ ದೇಶದಲ್ಲಿ ಹೊಡೆದು ಹೋಗಿರುವ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟುದೊಡ್ಡಮಟ್ಟದ ಪಾದಯಾತ್ರೆ ಯಾರು ಮಾಡಿರಲಿಲ್ಲ. ಯಾತ್ರೆಯೂ ಶಿರಾ ತಾಲೂಕಿನಲ್ಲಿ ಸುಮಾರು 25 ಕಿ.ಮೀ. ಸಾಗುತ್ತದೆ. ನಮ್ಮ ತಾಲೂಕಿನಲ್ಲಿ ರಾಹುಲ್‌ ಗಾಂಧಿಯವರು 25 ಕಿ.ಮೀ. ಪಾದಯಾತ್ರೆ ಮಾಡುತ್ತಾರೆ. ನಾವೆಲ್ಲರೂ ಅವರ ಜೊತೆ ಹೆಜ್ಜೆ ಹಾಕಿದರೆ ಮುಂದೆ ಈ ದೇಶದ ಪ್ರಧಾನಮಂತ್ರಿಯವರ ಜೊತೆ ಹೆಜ್ಜೆ ಹಾಕಿದೆ ಎಂಬುದು ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ತಮಿಳುನಾಡು, ಕೇರಳದಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಹನುಮಂತಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪಿ.ಆರ್‌.ಮಂಜುನಾಥ್‌, ನಟರಾಜ್‌ ಬರಗೂರು, ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್‌.ಗುರುಮೂರ್ತಿ ಗೌಡ, ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಸುನಿಲ್‌, ದಯಾನಂದ್‌ ಗೌಡ ಸೇರಿದಂತೆ ಹಲವರು ಹಾಜರಿದ್ದರು.

ನಾನು ಸಿಎಂ ಆಗೋದಲ್ಲ, ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು: ಡಿಕೆಶಿ

ಟಿ.ಬಿ.ಜಯಚಂದ್ರ ಅವರು ಕೇವಲ ಶಿರಾ ಕ್ಷೇತ್ರಕ್ಕೆ ಅಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯರು. ಅವರಿಗೆ ಟಿಕೆಟ್‌ ಕೊಡುವ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ. ಮೊದಲು ನೀವು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿ. ಭಾರತ ಐಕ್ಯತಾ ಯಾತ್ರೆಯನ್ನು ಜಯಚಂದ್ರ ಅವರ ನೇತೃತ್ವದಲ್ಲಿ ಯಶಸ್ವಿಗೊಳಿಸಿ. ನಿಮ್ಮ ಶಕ್ತಿ ಪ್ರದರ್ಶನ ತೋರಿಸಿ. ನಿಮ್ಮ ಗುರಿ ಒಂದೇ ರಾಹುಲ್‌ ಗಾಂಧಿ ಅವರಿಗೆ ಸಂದೇಶ ಹೋಗಬೇಕು.
-ಡಿ.ಕೆ.ಶಿವಕುಮಾರ್‌ ಅಧ್ಯಕ್ಷ, ಕೆಪಿಸಿಸಿ

click me!