ನಾನು ಸಿದ್ದು ಒಂದಾಗಿದ್ದೇವೆ, ಬಿಜೆಪಿ ಆಟ 6 ತಿಂಗಳಷ್ಟೇ: ಡಿಕೆಶಿ

By Govindaraj SFirst Published Oct 4, 2022, 1:30 AM IST
Highlights

‘ನಾವು ಒಗ್ಗಟ್ಟಾಗಿಯೇ ಇದ್ದೇವೆ. ಒಂದಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಒಂದಾಗಲಿ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾವು ಒಂದಾಗಿಯೇ ಇದ್ದೇವೆ. ನಾವೀಗ ವಿರೋಧ ಪಕ್ಷದಲ್ಲಿದ್ದು, ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಮೈಸೂರು (ಅ.04): ‘ನಾವು ಒಗ್ಗಟ್ಟಾಗಿಯೇ ಇದ್ದೇವೆ. ಒಂದಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಒಂದಾಗಲಿ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾವು ಒಂದಾಗಿಯೇ ಇದ್ದೇವೆ. ನಾವೀಗ ವಿರೋಧ ಪಕ್ಷದಲ್ಲಿದ್ದು, ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಮೊದಲು ನೀವು ನಿಮ್ಮ ಪಕ್ಷವನ್ನು ನೋಡಿಕೊಳ್ಳಿ. ನಿಮ್ಮ ಪಕ್ಷದಲ್ಲಿ ಎಷ್ಟುಗುಂಪಿದೆ? ಯಾವ್ಯಾವ ಸಚಿವರನ್ನು ಒಂದು ಮಾಡಬೇಕಿದೆ ಅದನ್ನು ನೋಡಿ. ಈಶ್ವರಪ್ಪನವರು ತಾವು ಸಚಿವರಾಗಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ವಿರುದ್ಧ ಮಾಡಲಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ‘ಬಿ’ ರಿಪೋರ್ಟ್‌ ಬರೆಸಿಕೊಂಡು ಸಚಿವರಾಗಲು ಕಾಯುತ್ತಿದ್ದಾರೆ. ಮೊದಲು ಅವರನ್ನು ಸಮಾಧಾನ ಮಾಡಿಕೊಳ್ಳಿ ಎಂದು ಬಿಜೆಪಿಯನ್ನು ಕುಟುಕಿದರು. ಭಾರತ ಐಕ್ಯತಾ ಯಾತ್ರೆಯಿಂದ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಟೀಕಿಸಿದ ಅವರು, ‘ನಿಮ್ಮದು ಇನ್ನೇನಿದ್ದರೂ 6 ತಿಂಗಳ ಆಟ’ ಎಂದು ತಿರುಗೇಟು ನೀಡಿದರು.

ರಾಹುಲ್‌ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!

ರಾಹುಲ್‌ ಗಾಂಧಿ ಬಂದ ಕಡೆ ಕಾಂಗ್ರೆಸ್‌ ಗೆಲ್ಲಲ್ಲ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾವಾಗ ಭವಿಷ್ಯ ಹೇಳುವುದನ್ನು ಕಲಿತರೊ ಗೊತ್ತಿಲ್ಲ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ‘ಆಪರೇಷನ್‌ ಕಮಲ’ದ ಯೋಗದಿಂದ ಅಧಿಕಾರಕ್ಕೆ ಬಂದವರು ಕೊರೋನಾ ಸಂದರ್ಭದಲ್ಲಿ ಜನರ ಯೋಗಕ್ಷೇಮ ವಿಚಾರಿಸಲಿಲ್ಲ. ಇನ್ನಾರು ತಿಂಗಳು ಅವರು ಸುಖವಾಗಿರಲಿ ಎಂದು ವ್ಯಂಗ್ಯವಾಡಿದರು.

ನಾನು, ಸಿದ್ದು ಅದೇ ಶರ್ಟ್‌ ಹಾಕ್ತೇವೆ, ಬಂಧಿಸ್ತೀರಾ: ಪೇಸಿಎಂ ಟೀಶರ್ಟ್‌ ಹಾಕಿದ್ದಕ್ಕೆ ಹುಡುಗನೊಬ್ಬನನ್ನು ಬಂಧಿಸಲಾಗಿದೆ. ನಾಳೆ ನಾನು, ಸಿದ್ದರಾಮಯ್ಯ ಅದೇ ಟೀಶರ್ಟ್‌ ಹಾಕ್ತೇವೆ, ನಮ್ಮನ್ನೂ ಅರೆಸ್ಟ್‌ ಮಾಡ್ತಾರಾ? ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ಭಾರತ್‌ ಐಕ್ಯತಾ ಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೇಸಿಎಂ ಟೀಶರ್ಟ್‌ ಹಾಕಿದ ಯುವಕನನ್ನು ಬಂಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾಳೆ ನಾನು, ಸಿದ್ದರಾಮಯ್ಯ ಕೂಡ ಅದೇ ಟೀಶರ್ಟ್‌ ಹಾಕ್ತೇವೆ. ಹಾಗಾದರೆ, ನಮ್ಮನ್ನೂ ಅವರು ಅರೆಸ್ಟ್‌ ಮಾಡ್ತಾರಾ? ಎಂದು ಪ್ರಶ್ನಿಸಿದರು.

ರಾಹುಲ್‌ ಯಾತ್ರೆ ಭರ್ಜರಿ ಆರಂಭ: ಕಾಂಗ್ರೆಸ್ಸಿಗರಿಂದ ಚುನಾವಣೆಗೆ ರಣಕಹಳೆ

ಈ ಯಾತ್ರೆ ಕೇವಲ ಕಾಂಗ್ರೆಸ್‌ ಕಾರ್ಯಕ್ರಮ ಅಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡುತ್ತಾ ಸಾಗುತ್ತಿದ್ದೇವೆ. 40 ಪರ್ಸೆಂಟ್‌ ಕಮೀಷನ್‌ ಬಗ್ಗೆ, ಅವರ ಸಚಿವರು, ಶಾಸಕರು ಹೇಳಿದ್ದನ್ನೇ ಜನರ ಮುಂದೆ ಇಡುತ್ತಿದ್ದೇವೆ. ಇದೊಂದು ವರ್ಣ ರಂಜಿತ ನಡಿಗೆ. ಕನ್ನಡ ನಾಡಿನ ಸ್ವಾಭಿಮಾನದ ನಡಿಗೆ ಎಂದು ಅವರು ಹೇಳಿದರು. ಯಾತ್ರೆ ಕುರಿತಾದ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಭಾರತ್‌ ಐಕ್ಯತಾ ಯಾತ್ರೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾವು ಚುನಾವಣೆಗೆ ರೆಡಿಯಾಗಿದ್ದೀವಿ. ಈ ಬಗ್ಗೆ ಬಿಜೆಪಿ ನಾಯಕರು ಯೋಚಿಸಲಿ ಎಂದರು.

click me!