ಮೋದಿ‌ ಪಕೋಡ ಕರಿಯಲು ಎಣ್ಣೆ ದರ ಕಡಿಮೆ ಆಗಬೇಕಿದೆ: ಡಿ.ಕೆ.ಶಿವಕುಮಾರ್‌

By Suvarna News  |  First Published Nov 5, 2021, 1:50 PM IST

*   ಐಟಿ ದಾಳಿಗೊಳಗಾದ ಆಪ್ತನನ್ನ ಕಾರಿನಲ್ಲೇ ಕರೆದೊಯ್ದು ಡಿಕೆಶಿ
*   ಶಿಗ್ಗಾವಿಯಲ್ಲಿ ಶ್ರೀನಿವಾಸ್ ಮಾನೆಗೆ ಸನ್ಮಾನ 
*   ಸರ್ಕಾರದಿಂದಲೇ ನಿತ್ಯ ಜನರ ಪಿಕ್ ಪ್ಯಾಕೆಟ್ 
 


ಹುಬ್ಬಳ್ಳಿ(ನ.05):  ಹಾನಗಲ್ ಮತದಾರರ ಬಗ್ಗೆ ನನಗೆ ಮೊದಲೇ ನಂಬಿಕೆ‌ ಇತ್ತು. ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿರಲಿಲ್ಲ. ಸರ್ಕಾರದಿಂದಲೇ ನಿತ್ಯ ಜನರ ಪಿಕ್ ಪ್ಯಾಕೆಟ್ ಆಗುತ್ತಿತ್ತು. ಇದರಿಂದ ಬೇಸತ್ತು ಹಾನಗಲ್ ಜನರು ಬಿಜೆಪಿ ಸರ್ಕಾರಕ್ಕೆ ಉತ್ತರವನ್ನೇ ಕೊಟ್ಟಿದ್ದಾರೆ. ಜನರು ಕೊಟ್ಟ ಉತ್ತರ ನೋಡಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ(Narendra Modi) ಪೆಟ್ರೋಲ್(Petrol), ಡೀಸೆಲ್(Diesel) ಬೆಲೆ‌ ಕಡಿಮೆ ಮಾಡಿದ್ದಾರೆ. ಈಗ ಬಿಜೆಪಿ‌ ನಾಯಕರಿಗೆ ತಿಳುವಳಿಕೆ ಬಂದಿದೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಮತ್ತೆ ಸಿಎಂ ಬೊಮ್ಮಾಯಿ ಅವರ ಕಾಲೆಳೆದಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಇನ್ನೂ ಗ್ಯಾಸ್, ಅಡುಗೆ ಎಣ್ಣೆ, ಮೋದಿ‌ ಪಕೋಡ ಕರಿಯಲು ಎಣ್ಣೆ ದರ ಕಡಿಮೆ ಆಗಬೇಕಿದೆ. ಇನ್ನೂ ದರ ಕಡಿಮೆ ಆಗದಿದ್ದರೆ ಮುಂದಿನ ಚುನಾವಣೆಯಲ್ಲೂ ಇದೇ ಉತ್ತರ ಸಿಗಲಿದೆ. ನನ್ನ ದೃಷ್ಟಿ 2023ರ ಚುನಾವಣೆ(Election) ಮೇಲಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ತಾರಾ ಮಾಜಿ ಸಚಿವ?: ಡಿಕೆಶಿ ಹೇಳಿದ್ದಿಷ್ಟು

ಹಾನಗಲ್(Hanagal) ಗ್ರಾಮ ದೇವತೆಗೆ ಬೇಡಿಕೊಂಡಿದ್ದೆ, ಈಗ ದೇವಿ ವರಕೊಟ್ಟಿದ್ದಾಳೆ, ಅದಕ್ಕೆ ದೇವರ ಆರ್ಶಿವಾದ ಪಡೆಯಲು ಹಾನಗಲ್‌ಗೆ ಹೊರಟಿದ್ದೇನೆ. ದೇವಿ ಫಲ ಕೊಟ್ಟಿದ್ದಾಳೆ, ಎಲ್ಲ‌ ಜಾತಿ ಧರ್ಮ, ಜನಾಂಗ ನಮಗೆ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿ ಸಿಎಂ ಬೊಮ್ಮಾಯಿ(Basavaraj Bommai) ಅವರಿಗೆ ತಿರುಗೇಟು ನೀಡಿದ್ದಾರೆ. 

ಹಾನಗಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆಯ ಕ್ಷೇತ್ರವಾಗಿದೆ. ಅವರು ಸಿಂದಗಿಯಲ್ಲಿ(Sindagi) ಗೆದ್ದಿದ್ದು ಜೆಡಿಎಸ್(JDS) ಸ್ಥಾನವನ್ನ, ಇಲ್ಲಿ‌ ನಾವು ಬಿಜೆಪಿ(BJP) ಸೀಟ್ ಗೆದ್ದಿದ್ದೇವೆ. ಹಾನಗಲ್ ನನ್ ಮನೆ ಅಂತ ನಾನು ಹೇಳಿರಲಿಲ್ಲ, ನಾನು ಹಾನಗಲ್ ಅಳಿಯ, ಹಾನಗಲ್ ಮೊಮ್ಮಗ ಅಂತ ಹೇಳಿರಲಿಲ್ಲ, ಅವರು ಹೇಳಿದ್ದು, ಅಷ್ಟು ಮಾತ್ರ ಅವರಿಗೆ ನೆನಪಿಸಲು ಬಯಸುತ್ತೇನೆ. ಅವರ ಮಂತ್ರಿಗಳೆಲ್ಲ ಇಲ್ಲಿಯೇ ಬಿಡುಬಿಟ್ಟಿದ್ದರು. ಹಾನಗಲ್ ಜನರು ನನ್ ಗೌರವ ಉಳಿಸಿ ಅಂತ ಯಾರು ಕೇಳಿದ್ರು..?. ಸಿಎಂ ಫಲಿತಾಂಶ(Result)  ಬರುವ ಮುನ್ನೆವೇ ಹಾನಗಲ್‌ನಲ್ಲಿ ಸೋಲೊಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ. 

IT Raid: ಡಿಕೆಶಿ ಆಪ್ತನ ಮನೆಯಲ್ಲಿ 70 ಕೋಟಿ ಅಕ್ರಮ ಅಸ್ತಿ ಪತ್ತೆ

ಐಟಿ ದಾಳಿಗೊಳಗಾದ ಆಪ್ತನನ್ನ ಕಾರಿನಲ್ಲೇ ಕರೆದೊಯ್ದು ಡಿಕೆಶಿ

ಇತ್ತೀಚಿಗೆ ಧಾರವಾಡದಲ್ಲಿ(Dharwad) ಐಟಿ ದಾಳಿಗೆ(IT Raid) ಒಳಗಾಗಿದ್ದ ಉದ್ಯಮಿ ಯು.ಬಿ.ಶೆಟ್ಟಿ(UB Shetty) ಅವರನ್ನ ಡಿ.ಕೆ. ಶಿವಕುಮಾರ್‌ ತಮ್ಮ ಕಾರಿನಲ್ಲೇ ಕರೆದೊಯ್ದಿದ್ದಾರೆ. ಡಿಕೆಶಿಯನ್ನ ಸ್ವಾಗತಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ(Hubballi Airport) ಯು.ಬಿ‌. ಶೆಟ್ಟಿ ಆಗಮಿಸಿದ್ದರು. 

ಹಬ್ಬದ ದಿನವೇ ಸಿಎಂಗೆ ಟಾಂಗ್ ಕೊಡೋಕೆ ಮುಂದಾದ ಡಿಕೆಶಿ

ಕಾಂಗ್ರೆಸ್(Congress) ಗೆದ್ದಿದ್ದು ಹಾನಗಲ್‌ನಲ್ಲಾದರೂ ಸಿಎಂ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾವಿಯಲ್ಲಿ(Shiggoan) ಕಾಂಗ್ರೆಸ್‌ ಸಮಾವೇಶ ಹಮ್ಮಿಕೊಂಡಿದೆ. ಹೀಗಾಗಿ ಹಾನಗಲ್ ತೆರಳೋ ಮುನ್ನ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಲು ಡಿ.ಕೆ. ಶಿವಕುಮಾರ್‌ ನಿರ್ಧರಿಸಿದ್ದಾರೆ. 

ಗ್ರಾಮದೇವತೆ ಹರಕೆ ತೀರಿಸಲು ಡಿಕೆಶಿ ಇಂದು ಹಾನಗಲ್‌ಗೆ ತೆರಳುತ್ತಿದ್ದಾರೆ. ಅದಕ್ಕೂ ಮುನ್ನ ಶಿಗ್ಗಾವಿಯಲ್ಲಿ ಸಮಾವೇಶ ಮಾಡಲು ಡಿಕೆಶಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಶಿಗ್ಗಾವಿಯಲ್ಲಿ ಹಾನಗಲ್‌ ಕ್ಷೇತ್ರಕ್ಕೆ ನೂತನವಾಗಿ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ್ ಮಾನೆಗೆ(Srinivas Mane) ಸನ್ಮಾನ ನಡೆಯಲಿದೆ.
 

click me!