* ಉಪಚುನಾವಣೆ ಸೋಲು- ಗೆಲುವಿನ ಬಗ್ಗೆ ಚರ್ಚೆ ಮಾಡಲ್ಲ
* ಜನರ ತೀರ್ಮಾನ ಒಪ್ಪುತ್ತೇವೆ
* ಜೆಡಿಎಸ್ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ಕಾರ್ಯಕ್ರಮ
ಬೆಂಗಳೂರು(ನ.05): ಉಪಚುನಾವಣೆಯಲ್ಲಿ(Byelection) ಸೋಲು-ಗೆಲುವಿನ ಕುರಿತು ಚರ್ಚೆ ಮಾಡುವ ಬದಲು 2023ರ ಸಾರ್ವತ್ರಿಕ ಚುನಾವಣೆಗೆ(General Election) ಸಕ್ರಿಯವಾಗಿ ಕೆಲಸ ಮಾಡಬೇಕು ಎಂಬ ತೀರ್ಮಾನ ಕೈಗೊಂಡಿದ್ದೇನೆ ಎಂದು ಜೆಡಿಎಸ್(JDS) ವರಿಷ್ಠ ಎಚ್.ಡಿ.ದೇವೇಗೌಡ(HD Devegowda) ತಿಳಿಸಿದ್ದಾರೆ.
ದೀಪಾವಳಿ(Deepavali) ಹಬ್ಬದ ಪ್ರಯುಕ್ತ ಗುರುವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಉಪಚುನಾವಣೆಯಲ್ಲಿ ನಮಗೆ ಬಂದಿರುವ ಫಲಿತಾಂಶವನ್ನು ಸ್ವೀಕಾರ ಮಾಡುತ್ತೇವೆ. ಜನತೆಯ ತೀರ್ಮಾನಕ್ಕೆ ತಲೆಬಾಗುತ್ತೇವೆ. ಪ್ರಾದೇಶಿಕ ಪಕ್ಷವನ್ನು(Regional Party) ಉಳಿಸಲು ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಕ್ರಿಯವಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy), ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ(HK Kumaraswamy), ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಜತೆ ಸಭೆ ನಡೆಸಿದ್ದೇನೆ. ಸುಮಾರು ಮೂರು ತಾಸುಗಳ ಕಾಲ ಪಕ್ಷದ ಸಂಘಟನೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಯಾವುದೇ ಪಕ್ಷ ಕಟ್ಟಲು ಆರ್ಥಿಕ ಶಕ್ತಿ ಮುಖ್ಯವಾಗಿದೆ. ಕಾಂಗ್ರೆಸ್(Congress), ಬಿಜೆಪಿ(BJP) ಹಣ ಎಷ್ಟಿದೆ ಎಂಬುದರ ಬಗ್ಗೆ ಹೇಳುವುದಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಅದನ್ನು ಉಳಿಸಬೇಕಾಗಿದೆ. ಆರ್ಥಿಕತೆಯು ಅಗತ್ಯ ಇದ್ದು, ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದರು.
undefined
ಇದರಿಂದಾಗಿ ಜೆಡಿಎಸ್ ಧೃತಿಗೆಡುವುದಿಲ್ಲ : ಪಕ್ಷದ ಮೇಲೆ ಯಾವುದೇ ಪರಿಣಾಮ ಇಲ್ಲ
ಉಪಚುನಾವಣೆಯಲ್ಲಿ ಸ್ವೇಚ್ಛಾಚಾರವಾಗಿ ಹಣ ಖರ್ಚು ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ(West Bengal) ಠೇವಣಿ ಕಳೆದುಕೊಳ್ಳಲಾಗಿದೆ. ಇಲ್ಲಿ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಅಧಿಕಾರ, ಹಣದ ದುರುಪಯೋಗವಾಗುತ್ತಿದೆ. ನಾನು ಯಾವುದೇ ಕೆಲಸ ಮಾಡಿದರೂ ದೇವರ ನಂಬಿಯೇ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಸಿಂದಗಿಯಲ್ಲಿ(Sindagi) 38 ಸಾವಿರ ಮುಸ್ಲಿಂ(Muslim) ಮತದಾರರು ಇದ್ದರು. ಮುಸ್ಲಿಂ ಮತದಾರರು ಬಿಜೆಪಿಗೆ ಮತ ಚಲಾಯಿಸಿದರಾ? ನಮ್ಮ ಅಭ್ಯರ್ಥಿ ಮುಸ್ಲಿಂ ಆಗಿದ್ದರೂ ನಮಗೆ ಮತ ಹಾಕಿಲ್ಲವೆಂದರೆ ಕಾಂಗ್ರೆಸ್‌ಗೆ(Congress) ಹೋಗಿರಬಹುದು ಎಂದು ಗೌಡರು ಹೇಳಿದರು.
ನ.8ರಿಂದ 2ನೇ ಹಂತದ ಕಾರ್ಯಾಗಾರ:
ಸೋಮವಾರದಿಂದ (ನ.8) ಎರಡನೇ ಹಂತದ ಕಾರ್ಯಾಗಾರ ನಡೆಯಲಿದ್ದು, ಅಗತ್ಯ ಸಿದ್ಧತೆಯನ್ನು ಸಹ ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ರಾಜ್ಯದ(Karnataka) ಎಲ್ಲಾ ಮುಖಂಡರ ಜತೆ ಹಂತ ಹಂತವಾಗಿ ಸಮಾಲೋಚನೆ ನಡೆಸಿ ಮುಂದಿನ ಚುನಾವಣೆಗೆ ಸಂಘಟನೆ ಕುರಿತು ಮತ್ತು ಪಕ್ಷವನ್ನು ಬಲಗೊಳಿಸುವ ಕುರಿತು ಚರ್ಚೆ ನಡೆಸಲಾಗುವುದು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಾನು ಪಂಚರತ್ನ ಯೋಜನೆ ಮಾಡಲು ಪಕ್ಷದ ಶಾಸಕರು, ವಿಧಾನಪರಿಷತ್(Vidhna Parishat) ಸದಸ್ಯರು, ಜಿಲ್ಲಾ ಮುಖಂಡರನ್ನು ಕರೆದು ಕಾರ್ಯಾಗಾರ ನಡೆಸಲಾಯಿತು. ಮಹಿಳಾ(Woman), ಯುವ, ಮುಸ್ಲಿಂ, ಕ್ರಿಶ್ಚಿಯನ್(Christian), ಒಬಿಸಿ(OBC) ಹೀಗೆ ಎಲ್ಲರನ್ನು ಕರೆದು ಕಾರ್ಯಾಗಾರ ನಡೆಸಲಾಯಿತು. ಏಳು ದಿನಗಳ ಕಾರ್ಯಕ್ರಮ ಇದಾಗಿದ್ದು, ಉತ್ತಮವಾಗಿ ನಡೆಯಿತು. ಅದಕ್ಕೆ ಹಣ ಜೋಡಿಸಲು ಎಷ್ಟು ಸಮಸ್ಯೆಯಾಯಿತು ಎಂಬುದು ಗೊತ್ತಿದೆ ಎಂದರು.