* ತಿಗಳರ ಸಮಾಜದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿ
* ನಾನು ಈಗಾಗಲೇ ನೇಕಾರರು, ಮೀನುಗಾರರು, ಲಂಬಾಣಿಗಳ ಜೊತೆಗೆ ಸಂವಾದ ನಡೆಸಿದ್ದೇನೆ.
* ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ
* ಸರ್ಕಾರ ಜಾತಿ ಗಣತಿಗಾಗಿ ಇನ್ವೆಸ್ಟ್ ಮಾಡಿದೆ. ಆ ಇನ್ವೆಸ್ಟ್ ಉಪಯೋಗವಾಗಬೇಕಲ್ವಾ...?
ಬೆಂಗಳೂರು(ಆ. 16) ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ತಿಗಳರ ಸಮಾಜದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಬೆಂಗಳೂರಿನ ಲಾಲ್ ಬಾಗ್ ಬಳಿಯ ತಿಗಳರ ಸಂಘದಲ್ಲಿ ಸಂವಾದ ನಿಗದಿಯಾಗಿತ್ತು.
ನಾನು ಈಗಾಗಲೇ ನೇಕಾರರು, ಮೀನುಗಾರರು, ಲಂಬಾಣಿಗಳ ಜೊತೆಗೆ ಸಂವಾದ ನಡೆಸಿದ್ದೇನೆ. ಎಲ್ಲಾ ಸಮುದಾಯದವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದೇನೆ..
ಎಲ್ಲಾ ಸಮೂದಾಯದಲ್ಲೂ ಕೆಲವು ದುಗುಡಗಳು ಇವೆ. ಕೆಲವು ನೇಮಕಾತಿಗಳಲ್ಲಿ, ನಿಯೋಜನೆಗಳಲ್ಲಿ ನೋವು ಅನುಭವಿಸಿದ್ದಾರೆ. ರಾಜಕೀಯವಾಗಿ, ಶೈಕ್ಷಣಿಕವಾಗಿ ಅನ್ಯಾಯವಾಗಿದೆ ಎಂದು ನೋವಿದೆ ಎಂದರು.
ವಾಜಪೇಯಿ ಹೆವಿ ಡ್ರಂಕರ್ ಎಂದ ಕೈ ಮುಖಂಡರು
undefined
ಅವರೆಲ್ಲಾ ಬಂದು ನನ್ನ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನೇರವಾಗಿ ಬಂದು ಸಮಾಧಾನ ಮಾಡಿದ್ದೇನೆ. ಈ ವರ್ಗದ ಜೊತೆ ನಾನು ಇರ್ತೀನಿ ಎಂದು ತಿಳಿಸಿದರು.
ಸರ್ಕಾರ ಜಾತಿ ಗಣತಿಗಾಗಿ ಇನ್ವೆಸ್ಟ್ ಮಾಡಿದೆ. ಆ ಇನ್ವೆಸ್ಟ್ ಉಪಯೋಗವಾಗಬೇಕಲ್ವಾ...? ಎಂದು ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಪ್ರಶ್ನೆ ಎಸೆದರು. ಶಾಲೆ ಆರಂಭ ಮಾಡೋದು ತಪ್ಪಲ್ಲ. ಆರಂಭಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಬಹುಶ: ಸರ್ಕಾರ ಅದನ್ನು ಮಾಡಲಿದೆ ಅಂತ ಅಂದುಕೊಂಡಿದ್ದೇನೆ ಎಂದರು.
ಈಗ ನಿರುದ್ಯೋಗದ ಸಮಸ್ಯೆ ಇದೆ - ಬೆಲೆ ಏರಿಕೆಯಾಗಿದೆ. ಬೇರೇ ಬೇರೆ ವಿಚಾರಗಳು ಪ್ರಮುಖವಾಗಿ ಚರ್ಚೆ ಆಗ್ತಿವೆ. ಅದನ್ನೆಲಾ ಡೈವರ್ಟ್ ಮಾಡೋದ್ದಕ್ಕೆ ಸಿಟಿ ರವಿಯಂಥವರು ಹುಕ್ಕಾ ಬಾರ್ ನಂತಹ ವಿಚಾರಗಳನ್ನು ತರುತ್ತಿದ್ದಾರೆ. ಅವರು ಏನು ಬೇಕಾದ್ರು ಮಾತನಾಡಲೀ, ನಾನು ಮುಂದೆ ಮಾತನಾಡ್ತೀನಿ ಎಂದು ಶಿವಕುಮಾರ್ ಹೇಳಿದರು.