ಸೀಡಿ ತೋರಿಸಲು ಹೋಗಿ ಸ್ವಾಮೀಜಿ ಬಳಿ ಬೈಸಿಕೊಂಡ ಸಚಿವ : ಡಿಕೆಶಿ ಸ್ಫೋಟಕ ಹೇಳಿಕೆ

By Suvarna NewsFirst Published Jun 4, 2021, 1:18 PM IST
Highlights
  • KPCC ಅಧ್ಯಕ್ಷ  ಡಿಕೆ ಶಿವಕುಮಾರ್ ಪರೋಕ್ಷ ಟಾಂಗ್
  • ಸ್ವಾಜೀಗೆ ಸೀಡಿ ತೋರಿಸಲು ಹೋಗಿ ಸಚಿವರೊಬ್ಬರು ಬೈಸ್ಕೊಂಡ್ ಬಂದಿದ್ದಾರೆ
  • ಲಸಿಕಾ ಕಾರ್ಯಕ್ರಮದ ಚಾಲನೆಗೆ ದಾವಣಗೆರೆಗೆ ತೆರಳಿರುವ  ಡಿಕೆಶಿ

ದಾವಣಗೆರೆ (ಜೂ.04): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ವಿಚಾರದ ಬಗ್ಗೆ ಇದೀಗ ಹೊಸದಾದ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 

ದಾವಣಗೆರೆಯಲ್ಲಿಂದು ಮಾತನಾಡಿ ಡಿ.ಕೆ. ಶಿವಕುಮಾರ್  ಪರೋಕ್ಷವಾಗಿ ಸಚಿವ ಯೋಗೇಶ್ವರ್ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.  ಸೀಡಿ ತೋರಿಸಲು ಹೋಗಿ ಸ್ವಾಮೀಜಿ ಬಳಿ ಸಚಿವರೊಬ್ಬರು ಉಗಿಸಿಕೊಂಡು ಬಂದಿದ್ದಾರೆಂದು ಹೇಳಿದರು. 

ಮೈಸೂರಲ್ಲಿ IAS ಆಫಿಸರ್ಸ್ ಸಮರ : ಲೀಡರ್‌ಗಳೇ ಕಾರಣ ಎಂದ ಡಿಕೆಶಿ

ಅಧಿಕಾರಕ್ಕಾಗಿ ಯಾರೊ ಒಬ್ಬ ಸಚಿವರು ಸ್ವಾಮೀಜಿಗಳಿಗೆ ಸೀಡಿ ತೋರಿಸಲು ಮೈಸೂರಿಗೆ ಹೋಗಿದ್ದರಂತೆ. ಸ್ವಾಮೀಜಿಗಳು ಆ ಸಚಿವನಿಗೆ ಬೈದು ವಾಪಸ್ ಕಳುಹಿಸಿದ್ದಾರೆ ಎಂದು ಹೆಸರು ಹೇಳದೇ ಯೋಗೇಶ್ವರ್ ಬಗ್ಗೆ ಮಾತನಾಡಿದರು.   

ಯತ್ನಾಳ್ ಹೇಳಿದ್ದರಲ್ಲ ಅದೇ ಸೀಡಿ ವಿಚಾರವಿದು. ಎಲ್ಲಾ ಮಂತ್ರಿಗಳು ಏನು ಮಾಡುತ್ತಾ ಇದ್ದಾರೆ ಹೇಳಿ, ಎಲ್ಲಾ ಶಾಸಕರು ಏನು ಮಾಡುತ್ತಿದ್ದಾರೆ.  ಯಥಾ ರಾಜಾ ತಥಾ ಪ್ರಜಾ, ಯಥಾ ರಾಜಾ ತಥಾ ಅಧಿಕಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 

ಯಡಿಯೂರಪ್ಪ ಸೇರಿದಂತೆ ಕೇಂದ್ರ ಸರ್ಕಾರದ ವೈಪಲ್ಯ  : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೋವಿಡ್ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿವೆ.  ನಾನು ಸತ್ತರು ಚಿಂತೆಯಿಲ್ಲ. ಜನರಿಗೋಸ್ಕರ ಏನು ಮಾಡುವುದಕ್ಕೂ ಸಿದ್ಧವಿದ್ದೇವೆ ಎಂದರು.

ಇನ್ನು ಶಾಮನೂರು ಶಿವಶಂಕರಪ್ಪ ಉಚಿತವಾಗಿ 1 ಲಕ್ಷ ಲಸಿಕೆ ನೀಡುತ್ತಿದ್ದು, ಇದು ದೇಶದಲ್ಲೇ ರಾಜಕಾರಣಿಗಳಿಗೆ ಮಾದರಿ ಕೆಲಸ.  ನಮ್ಮ ಪಕ್ಷದ ಪರವಾಗಿ ಸಂಸ್ಥೆ ಪರವಾಗಿ ಚಾಲನೆ ನೀಡಲಾಗುತ್ತಿದೆ.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಬ್ ನಭಿ ಆಜಾದ್  ರವರು ಕೋವಿಡ್ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!