ಆರ್ ಆರ್ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಕಣದಲ್ಲಿ ಇರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿದ್ದಾರೆ ಅಚ್ಚರಿ ಅಭ್ಯರ್ಥಿ..? ಹೊಸ ಮುಖ ಪರಿಚಯಿಸಲು ಮುಂದಾಗಿದ್ದಾರಾ ಡಿ.ಕೆ ಶಿವಕುಮಾರ್..?
ಬೆಂಗಳೂರು, (ಸೆ.29): ಪಕ್ಷದ ಕೆಲಸ ಕಾರ್ಯ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಜೊತೆ ನವದೆಹಲಿ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಲ್ಲಿಂದಲೇ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಆರ್.ಆರ್. ನಗರ ಉಪಚುನಾವಣಾ ದಿನಾಂಕ ಘೋಷಣೆ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಉಪಚುನಾವಣೆ ನನಗೆ ಸವಾಲು ಅಲ್ಲವೇ ಅಲ್ಲ. ರಾಜರಾಜೇಶ್ವರಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಕಣದಲ್ಲಿ ಇರಲಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡುವ ಮೂಲಜ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
undefined
ಗರಿಗೆದರಿದ ರಾಜಕೀಯ ಚಟುವಟಿಕೆ: RR ನಗರ ಅಭ್ಯರ್ಥಿ ಆಯ್ಕೆ ಕುತೂಹಲ
ನಮ್ಮ ಸಂಬಂಧಿಕರು, ಕುಟುಂಬ ಸದಸ್ಯರು ಇಳಿಯುವುದಿಲ್ಲ. ಅಲ್ಲದೇ ಆರ್. ಆರ್. ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇಲ್ಲ. ಬದಲಿಗೆ ಒಳ್ಳೆಯವರ ಆಯ್ಕೆ ಮತದಾರರ ಮುಂದೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಇದ್ಯಾ? ಕೋವಿಡ್ ನಿಯಂತ್ರಿಸಿದ್ಯಾ? ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ಯಾ? ಇದನ್ನು ಮತದಾರರು ತೀರ್ಮಾನ ಮಾಡ್ತಾರೆ. ನನ್ನ ವೈಯಕ್ತಿಕ, ಪಕ್ಷದ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬೈ ಎಲೆಕ್ಷನ್ ಪ್ರಮುಖ ದಿನಾಂಕಗಳು
* ನವೆಂಬರ್ 3ಕ್ಕೆ ಮತದಾನ, ನ.10ಕ್ಕೆ ರಿಸಲ್ಟ್
* ಅಕ್ಬೋಬರ್ 9ಕ್ಕೆ ನಾಮಪತ್ರ ಸಲ್ಲಿಕೆ ಆರಂಭ
* ಅಕ್ಟೋಬರ್ 16 - ನಾಮಪತ್ರಕ್ಕೆ ಕೊನೇ ದಿನ
* ಅಕ್ಟೋಬರ್ 17 - ನಾಮಪತ್ರಗಳ ಪರಿಷ್ಕರಣೆ
* ಅ.19 - ನಾಮಪತ್ರ ವಾಪಸ್ ಗೆ ಕೊನೆ ದಿನವಾಗಿದೆ.