10ನೇ ಬಾರಿ ಪರೀಕ್ಷೆಯಲ್ಲಿ ರೇಣುಕಾಚಾರ್ಯಗೆ ಕೊರೋನಾ ಶಾಕ್, ಆಸ್ಪತ್ರೆಗೆ ದಾಖಲು

By Suvarna News  |  First Published Sep 29, 2020, 6:48 PM IST

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊರೋನಾ ಸೋಂಕು ತಗುಲಿದೆ


ಬೆಂಗಳೂರು, (ಸೆ.29): ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೂ ಕೊರೋನಾ ದೃಢಪಟ್ಟಿದೆ.

ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಸದ್ಯ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶೇಷ ಅಂದ್ರೆ ಇದುವರೆಗೂ 10 ಬಾರಿ ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದಾರಂತೆ. ಈ ಪೈಕಿ 10 ವರದಿಯಲ್ಲಿ ಕೊರೋನಾ ಪಾಸಿಟಿವ್ ಅಂತ ಬಂದಿದೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

Tap to resize

Latest Videos

ಶಾಸಕ ರೇಣುಕಾಚಾರ್ಯಗೆ 6ನೇ ಬಾರಿ ಕೊರೋನಾ ನೆಗೆಟಿವ್‌

ರೇಣುಕಾಚಾರ್ಯ ಹೇಳಿದ್ದೇನು
ಇಂದು ಬೆಳಗ್ಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ 10ನೇ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿ ಕೊರೊನಾ ಪಾಸಿಟಿವ್ ಬಂದಿದೆ. 
ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲಾರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ. 

CBC, RFT, LFT, ECG, ಸಿಟಿ ಸ್ಕ್ಯಾನ್, ಡಿ ಡೈಮರ್, LDH, Serum Ferricin ಹಾಗು CRP ಈ ಎಲ್ಲಾ ಪರೀಕ್ಷೆಗಳನ್ನು ವೈದ್ಯರು ಮಾಡಿದ್ದು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಕಳೆದ ಆರು ತಿಂಗಳುಗಳಿಂದ ಕೋವಿಡ್19ರ ವಿರುದ್ಧ  ನಾನು ಸಹ ಒಬ್ಬ ಕೊರೊನಾ ವಾರಿಯರ್ ಆಗಿ ನಿರಂತರ ಜನಸೇವೆ ಮಾಡುತ್ತಿದ್ದು, ನನ್ನ ಮತ ಕ್ಷೇತ್ರದ ಬಂಧುಗಳು ನಿಮ್ಮ ಯಾವುದೇ ಸಮಸ್ಯೆಗಳಿಗೆ ದೂರವಾಣಿ ಮುಖಾಂತರ ನನ್ನನ್ನು ಸಂಪರ್ಕಿಸ ಬಹುದು.

ನಿಮ್ಮೆಲ್ಲರ ಹಾರೈಕೆ ಹಾಗು ಆಶೀರ್ವಾದದಿಂದ ನಾನು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ, ನನ್ನ ಆರೋಗ್ಯದ ಜೊತೆಗೆ ನಿಮ್ಮೆಲ್ಲರ ಯೋಗಕ್ಷೇಮವು ನನಗೆ ಅಷ್ಟೇ ಮುಖ್ಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ 10ನೇ ಬಾರಿಗೆ ಕೋವಿಡ್ ಪರೀಕ್ಷೆ...

Posted by MP Renukacharya on Tuesday, September 29, 2020
click me!