Mekedatu Padayatra:'ಸುರೇಶ್‌ ತಳ್ಳಿದರೆ ಏನಂತೆ, ನಾನೆ ನಿನ್ನ ಹೆಗಲ ಮೇಲೆ ಕೈಹಾಕುವೆ' ಡಿಕೆಶಿ ಅಭಯ

By Kannadaprabha News  |  First Published Jan 13, 2022, 4:04 AM IST

* ಬೇಸರಗೊಂಡಿದ್ದ ನಲಪಾಡ್‌ಗೆ ಡಿಕೆಶಿ ಸಮಾಧಾನ
* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ
* ಸರ್ಕಾರದ ಆದೇಶ ಕೇಳುವುದಿಲ್ಲ ಎಂದ ಸುರೇಶ್


ರಾಮ​ನ​ಗರ (ಜ. 13) ಮೂರನೇ ದಿನದ (Mekedatu Padayatra) ಪಾದಯಾತ್ರೆ ಸಮಯದಲ್ಲಿ ಸಂಸದ ಡಿ.ಕೆ.ಸುರೇಶ್‌(DK Suresh) ಅವರು ನಲಪಾಡ್‌ ಹ್ಯಾರಿಸ್‌ (Mohammed Haris Nalapad) ಕಾಲರ್‌ ಹಿಡಿದು ಪಕ್ಕಕ್ಕೆ ತಳ್ಳಿದ್ದರಿಂದ ಬೇಸರಗೊಂಡಿದ್ದ ನಲಪಾಡ್‌ರನ್ನು ಡಿಕೆಶಿ (DK Shivakumar)ಸಮಾಧಾನ ಮಾಡಿದ್ದಾರೆ.

ನೀನು ನನ್ನ ಸಹೋದರ ಇದ್ದಂತೆ.  ನಾನೇ ನಿನ್ನ ಹೆಗಲ ಮೇಲೆ ಕೈ ಹಾಕುತ್ತೇನೆ ಬಿಡು ಎಂದು ತಮ್ಮನ್ನು ಭೇಟಿಯಾದ ನಲಪಾಡ್‌ಗೆ ಹೇಳಿದ್ದಾರೆ. ಬಳಿಕ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ನಲಪಾಡ್‌, ಡಿ.ಕೆ.ಸುರೇಶ್‌ ಅವರು ನನನ್ನು ನೋಡಿರಲಿಲ್ಲ. ಹೀಗಾಗಿ ಎಳೆದು ಪಕಕ್ಕೆ ಸರಿಸಿದ್ದರು. ಬಳಿಕ ನನ್ನ ಮುಖ ನೋಡಿ, ಕರೆದು ಮಾತನಾಡಿಸಿದರು. ಇದರಲ್ಲಿ ಇಬ್ಬರದು ತಪ್ಪಿಲ್ಲ ಎಂದಿದ್ದಾರೆ.

News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!

Tap to resize

Latest Videos

ಪಾದಯಾತ್ರೆ: ಇಂದು ನಾಳೆ, ಬೆಂಗ್ಳೂರು- ಮೈಸೂರು ಹೆದ್ದಾರಿ ಸಂಚಾರ ಮಾರ್ಗ ಬದಲು: ರಾಮ​ನ​ಗ​ರ: ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಗುರು​ವಾ​ರ ಮತ್ತು ಶುಕ್ರವಾರ ಬೆಂಗಳೂರು-ಮೈಸೂರು ಹೆದ್ದಾರಿಯದಲ್ಲಿ ಸಾಗಲಿರುವ ಕಾರಣ ಪೊಲೀಸ್‌ ಇಲಾಖೆ ವಾಹನ ಸಂಚಾರ ಮಾರ್ಗವನ್ನು ಬದಲಾಯಿಸಿದೆ.  ಹಿನ್ನೆಲೆಯಲ್ಲಿ ಪಾದಯಾತ್ರೆಯು ಬೆಂಗಳೂರು ನಗರ ತಲುಪುವವರೆಗೂ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸಲಿರುವ ಎಲ್ಲಾ ಮಾದರಿಯ ವಾಹನಗಳ ಸವಾರರು ರಾಷ್ಟ್ರೀಯ ಹೆದ್ದಾರಿ ಬದಲು ಮೈಸೂರು-
ಬನ್ನೂರು- ಕಿರುಗಾವಲು-ಮಳವಳ್ಳಿ- ಹಲಗೂರು-ಸಾತನೂರು-ಕನಕಪುರ- ಹಾರೋಹಳ್ಳಿ- ಕಗ್ಗಲೀಪುರ- ಬನಶಂಕರಿ- ಸಾರಕ್ಕಿ ಮಾರ್ಗವಾಗಿ ಸಂಚರಿಸಬೇಕು. ಅಥವಾ ಮೈಸೂರು- ಶ್ರೀರಂಗಪಟ್ಟಣ- ಪಾಂಡವಪುರ- ನಾಗಮಂಗಲ- ಬೆಳ್ಳೂರು ಕ್ರಾಸ್‌- ಕುಣಿಗಲ್‌ ನೆಲಮಂಗಲ ಮಾರ್ಗವಾಗಿ ಸಂಚರಿಸಲು ಸಾರ್ವಜನಿಕರ ಸಹಕಾರ ನೀಡಬೇಕೆಂದು ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ರೆಸಾರ್ಟ್‌ಗಳು ಹೌಸ್‌ಫುಲ್‌:  ರಾಮ​ನ​ಗರ: ನಾಲ್ಕನೇ ದಿನದ ಮೇಕೆ​ದಾಟು ಪಾದಯಾತ್ರೆ ಬುಧವಾರ ರಾತ್ರಿ ರಾಮನಗರ ಪ್ರವೇಶಿಸಿ ವಾಸ್ತವ್ಯ ಹೂಡಿ​ದರು. ಪಾದ​ಯಾ​ತ್ರೆ​ಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ನಾಯಕರ ವಾಸ್ತವ್ಯಕ್ಕಾಗಿ ಈಗಲ್‌ ಟನ್‌ ರೆಸಾರ್ಟ್‌ ,  ವಂಡರ್‌ ಲಾಗಳಲ್ಲಿ ರೂಮ್‌ ಬುಕ್‌ ಮಾಡಲಾಗಿದೆ. ಬಿಡದಿಯಲ್ಲಿ ಡಿಕೆಶಿಯ ಒಡೆತನದಲ್ಲಿರುವ ಐಕಾನ್‌ ಕಾಲೇಜು, ವಿಧಾನ ಪರಿಷತ್‌ ಸದಸ್ಯ ಲಿಂಗಪ್ಪ ಅವರಿಗೆ ಸೇರಿದ ಜ್ಞಾನ ವಿಕಾಸ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ  ಕಾಲೇಜಿನಲ್ಲಿಯೂ ಸಹ ಎರಡನೇ ಹಂತದ ನಾಯಕರಿಗಾಗಿ ಹಾಸಿಗೆಗಳನ್ನು ಸಿದ್ಧ ಪಡಿಸಲಾಗಿದೆ. ರಾಮನಗರದ  ವಸತಿ ಗೃಹಗಳೆಲ್ಲ ಬಹುತೇಕ ಬುಕ್‌ ಆಗಿವೆ.

ಪಾದಯಾತ್ರೆಗೆ ನಿರ್ಬಂಧ:  ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ಕೊರೋನಾ (Coronavirus) ನಿಯಮಗಳ ನಡುವೆಯೇ ಕಾಂಗ್ರೆಸ್ (Congress) ಹಮ್ಮಿಕೊಂಡಿದ್ದ ಪಾದಯಾತ್ರೆಗೆ ರಾಜ್ಯ ಸರ್ಕಾರ ಕೊನೆಗೂ ಬ್ರೇಕ್ ಹಾಕಿದೆ. ಅಧಿಕೃತವಾಗಿ ನಿರ್ಬಂಧ ವಿಧೀಸಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಅವರು ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿದೆ. ಪಾದಯಾತ್ರೆ ಕೈಗೊಳ್ಳುವುದು, ಉದ್ದೇಶಿತ ಮಾರ್ಗದಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿಲಾಗಿದೆ. 

ಹೈಕೋರ್ಟ್ ಛೀಮಾರಿ ಹಾಕಿತ್ತು:  ಕೊರೋನಾ ಆತಂಕದ ಮಧ್ಯೆ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಡೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಅಸಮಾಧಾನ ಹೊರ ಹಾಕಿತ್ತು. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ ಎಂದೂ ಕಾಂಗ್ರೆಸ್​ ಪಕ್ಷವನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ಪೀಠ ಪ್ರಶ್ನಿಸಿದೆ. ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ತಿಳಿಸಿ  ಮುಂದಿನ ವಿಚಾರಣೆ ಜ.14ಕ್ಕೆ ಮುಂದೂಡಿತ್ತು.

ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷಗೆ ಬುಲಾವ್ ಹೋಗಿದೆ. ಲೀಗಲ್ ಸೆಲ್ ಅಧ್ಯಕ್ಷ ವಕೀಲ ಎ.ಎಸ್ ಪೊನ್ನಣ್ಣಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಿಂದ ಕರೆ ಹೋಗಿದ್ದು ರಾಮನಗರಕ್ಕೆ ಕರೆಸಿಕೊಂಡಿದ್ದಾರೆ. ಹೈಕೋರ್ಟ್​ನಿಂದ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ವರದಿ ಕೇಳಿತ್ತು.

click me!