* ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ
* ಸ್ಪಷ್ಟನೆ ಕೊಟ್ಟ ರಮೇಶ್ ಜಾರಕಿಹೊಳಿ
* ಬೆಳಗಾವಿಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮಾತನಾಡಿದ ಸಾಹುಕಾರ
ಬೆಳಗಾವಿ, (ಜುಲೈ.10): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಅವರು ಇದೀಗ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಳಗಾವಿಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಿಶ್ಚಯಿಸಿದ್ದು ನಿಜ. ಆದರೆ ಕೆಲವು ಹಿತೈಷಿಗಳು, ಮಠಾಧೀಶರು ತಡೀಪಾ ಅಂದಿದ್ದಕ್ಕೆ ತಡೆದಿದ್ದೇನೆ. ಈಗ ಮುಗಿದ ಅಧ್ಯಾಯ ಎಂದು ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ರಾಜ್ಯ ರಾಜಕಾರಣದ ಮಹಾಸ್ಫೋಟಕ ಸುದ್ದಿ: ಸಾಹುಕಾರ್ ಬೇಡಿಕೆಗೆ ಅಸ್ತು ಎಂದಿದ್ಯಾ ಹೈಕಮಾಂಡ್?
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಿಶ್ಚಯಿಸಿದ್ದು ನಿಜ. ಆದರೆ ಕೆಲವು ಹಿತೈಷಿಗಳು, ಮಠಾಧೀಶರು ತಡೀಪಾ ಅಂದಿದ್ದಕ್ಕೆ ತಡೆದಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ರಾಜಕಾರಣ ಇಲ್ಲ. ವೈಯಕ್ತಿಕವಾಗಿ ಬೇರೆ ವಿಚಾರ ಇತ್ತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದು ಬೇಡ ಎಂದಿದ್ದಕ್ಕೆ ತಡೆ ಹಿಡಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಹೇಳಿದ್ದರು. ಇದು ರಾಜ್ಯ ಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.