
ದಾವಣಗೆರೆ, (ಜುಲೈ.10): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ದಾವಣಗೆರೆ ಬಿಜೆಪಿ ಸಂಸದ ಜಿ.ಎಮ್. ಸಿದ್ದೇಶ್ವರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಸೈಕಲ್ ಏರುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೀಗೆ ಪ್ರತಿಕ್ರಿಯೆ ನೀಡಿದ್ದು,ಸೈಕಲ್ ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಮ ಆಗುತ್ತೆ ಎಂದು ಬಾಲಿಶ ಹೇಳಿಕೆ ನೀಡಿದರು.
ಪೆಟ್ರೋಲ್ 35, ಡೀಸೆಲ್ 16 ಪೈಸೆ ಏರಿಕೆ: ಮತ್ತಷ್ಟು ಕಡೆ 100 ರು ದಾಟಿದ ದರ!
ಇಂಧನ ಬ್ಯಾರಲ್ ರೇಟ್ ಜಾಸ್ತಿ ಇದೆ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಪೆಟ್ರೋಲ್ ರೇಟ್ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ? ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ. ಜನ ಸೈಕಲ್ನಲ್ಲಿ ಓಡಾಡಿದ್ರೆ ಏನ್ ಆಗುತ್ತೆ. ಒಳ್ಳೆಯ ವ್ಯಾಯಾಮ ಆಗುತ್ತೆ ಎಂದರು.
ಇನ್ನು ಇದೇ ವೇಳೆ ಜಿಎಸ್‌ಟಿ ಪಾಲು ಕರ್ನಾಟಕ ರಾಜ್ಯಕ್ಕೆ ಸಿಗುತ್ತಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಜಿಎಸ್‌ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಬಗ್ಗೆ ಹಣಕಾಸು ಸಚಿರನ್ನೇ ಕೇಳಿ ಎಂದು ಬೇಜವಾಬ್ದಾರಿಯುತ ಉತ್ತರ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.